ಸಮಂತಾ ಮತ್ತು ನಾಗಚೈತನ್ಯ ವಿಚ್ಚೇದನ ನಂತರ ಸೌತ್ ಇಂಡಿಯನ್ ಸಿನಿಮಾ ಕ್ಷೇತ್ರದ ಮತ್ತೊಂದು ಜೋಡಿ ಬೇರೆ ಬೇರೆಯಾಗುವ ವಿಷಯ ಮುನ್ನೆಲೆಗೆ ಬಂದಿದೆ.
ಹೌದು, ನಾಗಚೈತನ್ಯ ಮತ್ತು ಸಮಂತಾ ನಂತರ ಈಗ ಧನುಷ್ ಮತ್ತು ಐಶ್ವರ್ಯಾ ಅಧಿಕೃತವಾಗಿ ದೂರವಾಗಿದ್ದಾರೆ. ಭಾರತದ ದಿಗ್ಗಜ ನಟ ರಜನೀಕಾಂತ್ ಅವರ ಪುತ್ರಿ ಐಶ್ವರ್ಯರನ್ನು ಮದುವೆಯಾಗಿದ್ದ ಧನುಷ್ ದೂರವಾಗುತ್ತಿರುವ ವಿಚಾರವನ್ನು ತಮ್ಮ ಸೋಶಿಯಲ್ ಅಕೌಂಟ್ ನಲ್ಲಿ ಪೋಸ್ಟ್ ಮಾಡುವ ಮೂಲಕ ದೃಢಪಡಿಸಿದ್ದಾರೆ.
ಪ್ರೀತಿಸಿ ಮದುವೆ ಆಗಿದ್ದ ನಟ ಧನುಷ್ ಹಾಗು ಐಶ್ವರ್ಯ 18 ವರ್ಷ ದ ದಾಂಪತ್ಯಕ್ಕೆ ತರೆಯೆಳೆದಿದ್ದಾರೆ. ಈ ಕುರಿತು ಪೋಸ್ಟ್ ಮಾಡಿರುವ ಅವರು, 18 ವರ್ಷದಿಂದ ಇಬ್ಬರು ಅನ್ಯೂನ್ಯವಾಗಿದ್ದೇವು. ಒಬ್ಬರಿಗೊಬ್ಬ ಅರ್ಥ ಮಾಡಿಕೊಂಡು ಕಷ್ಟ ಸುಖದಲ್ಲಿ ಭಾಗಿ ಆಗಿದ್ದೇವೆ, ಸ್ನೇಹಿತರಾಗಿ, ದಂಪತಿಗಳಾಗಿ ಪೋಷಕರಾಗಿ ಜೀವನ ನಡೆಸಿದ್ದೇವೆ. ಈಗ ನಾವು ದೂರಾಗಲು ನಿರ್ಧರಿಸಿದ್ದೇವೆ ಎಂದು ಬರೆದುಕೊಂಡಿದ್ದಾರೆ.