ಬೆಂಗಳೂರು: DCRI ವಿಭಾಗದ ಡಿಜಿಪಿ ರಾಮಚಂದ್ರರಾವ್ ರಾಸಲೀಲೆ ಪ್ರಕರಣ ಸಂಬಂಧ ತನಿಖೆಗೆ ಆದೇಶಿಸಲಾಗಿದೆ.
ಇತ್ತೀಚೆಗೆ ರಾಮಚಂದ್ರ ರಾವ್ ತಮ್ಮ ಕಚೇರಿಯಲ್ಲಿ ಮಹಿಳೆಯರೊಂದಿಗೆ ಅಶ್ಲೀಲವಾಗಿ ವರ್ತಿಸಿದ್ದ ವಿಡಿಯೋ ವೈರಲ್ ಆಗಿತ್ತು. ಇದು ರಾಜ್ಯಾದ್ಯಂತ ಭಾರೀ ಟೀಕೆಗೆ ಒಳಗಾಗಿತ್ತು. ಹೀಗಾಗಿ DCRI ಡಿಜಿಪಿ ರಾಮಚಂದ್ರರಾವ್ ರನ್ನ ಅಮಾನತು ಮಾಡಲಾಯ್ತು. ಇದೀಗ ಎಡಿಜಿಪಿ ಹೀತೇಂದ್ರ ನೇತೃತ್ವದಲ್ಲಿ ಘಟನೆಯ ತನಿಖೆಗೆ ಆದೇಶಿಸಿ ಡಿಜಿ & ಐಜಿಪಿ ಎಂ.ಎ.ಸಲೀಂ ಆದೇಶ ಮಾಡಿದ್ದಾರೆ. ಹಾಗೆ ಸಿಐಡಿ ಎಸ್ ಪಿ ಎಸ್ ಪಿ ರಿಷ್ಯಂತ್ ರನ್ನ ತನಿಖಾಧಿಕಾರಿ ಮಾಡಲಾಗಿದೆ.

ವಿಡಿಯೋ ವೈರಲ್ ಬೆನ್ನಲ್ಲೆ ಘಟನೆಯ ಸತ್ಯಾಸತ್ಯತೆ ತನಿಖೆಗೆ ಡಿಜಿ & ಐಜಿಪಿ ಸಲೀಂಗೆ ರಾಜ್ಯ ಸರ್ಕಾರ ಸೂಚನೆ ನೀಡಿತ್ತು. ಈ ಹಿನ್ನಲೆ ತನಿಖೆಗೆ ಆದೇಶ ಮಾಡಲಾಗಿದೆ.
ಇನ್ನು ರಾಮಚಂದ್ರ ರಾವ್ ಅಮಾನತಿನಿಂದ ತೆರವಾದ DCRI ಡಿಜಿಪಿ ಸ್ಥಾನಕ್ಕೆ ನೇಮಕಾತಿ ವಿಭಾಗದ ಡಿಜಿಪಿ ಉಮೇಶ್ ಕುಮಾರ್ ಗೆ ಹೆಚ್ಚುವರಿ ಹೊಣೆ ನೀಡಿ ರಾಜ್ಯ ಸರ್ಕಾರದ ಆದೇಶ ಮಾಡಿದೆ.













