ಕರುನಾಡ ಡಿ ಬಾಸ್(DBoss) ಅಭಿಮಾನಿಗಳ ಸಂಭ್ರಮ ಸದ್ಯ ಇಮ್ಮಡಿಯಾಗಿದೆ. ಇದಕ್ಕೆ ಪ್ರಮುಖವಾಗಿ 2 ಕಾರಣ ಏನಪ್ಪಾ2 ಅಂದ್ರೆ ಫೆಬ್ರವರಿ 16ಕ್ಕೆ ಚಾಲೆಂಜಿಂಗ್(Challenging) ಸ್ಟಾರ್(Star) ದರ್ಶನ್(Darshan) ಹುಟ್ಟುಹಬ್ಬ. ಇನ್ನೊಂದು ಫೆಬ್ರವರಿ 15 ರ ಮಧ್ಯರಾತ್ರಿ 11.59ಕ್ಕೆ ದರ್ಶನ್ ಹೊಸ ಸಿನಿಮಾ ‘ಡೆವಿಲ್'(Devil) ಸಿನಿಮಾದ ಫಸ್ಟ್ ಲುಕ್ (FirstLook) ರಿಲೀಸ್ ಆಗುತ್ತಿದೆ.ಇದಕ್ಕಾಗಿ ದಾಸನ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಕಾಟೇರ ಸಕ್ಸಸ್ ಬಳಿಕ ದರ್ಶನ್ ಸದ್ಯ ರಿಲ್ಯಾಕ್ಸ್ ಆಗ್ತಿದ್ದಾರೆ. ಒಟಿಟಿಯಲ್ಲಿಯೂ ಕಾಟೇರ(Kaatera) ಪ್ರದರ್ಶನಗೊಳ್ಳುತ್ತಿದೆ. ಝೀ5(Zee5)ನಲ್ಲಿ ಕಾಟೇರ ಅಬ್ಬರವಿದ್ದು, ಜನ ಡಿ ಬಾಸ್ ನಟನೆಗೆ ಬಹುಪರಾಕ್ ಹೇಳ್ತಿದ್ದಾರೆ.ಇದೆಲ್ಲದ ಮಧ್ಯೆ ದಾಸನ ಡೆವಿಲ್ ಅವತಾರ ನೋಡೋಕೆ ಫ್ಯಾನ್ಸ್ ಚಾತಕ ಪಕ್ಷಿಗಳಂತೆ ವೇಯ್ಟ್ ಮಾಡ್ತಿದ್ದಾರೆ. ಸ್ವತಃ ದರ್ಶನ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅಪ್ಡೇಟ್ ಕೊಟ್ಟಿದ್ದಾರೆ.

ದರ್ಶನ್ ಬೆಳ್ಳಿ ಹಬ್ಬ..!
ಡಿ ಬಾಸ್ ಅಭಿಮಾನಿಗಳ ನೆಚ್ಚಿನ ಆರಾಧ್ಯದೈವ. ಸ್ಯಾಂಡಲ್ವುಡ್ಗೆ(Sandalwood) ದರ್ಶನ್(Darshan) ಎಂಟ್ರಿ ನೀಡಿ 25 ವರ್ಷಗಳು ತುಂಬಿವೆ. ಇದೇ ಹಿನ್ನೆಲೆಯಲ್ಲಿ ಫೆಬ್ರವರಿ 17ರಂದು ದರ್ಶನ್ ಹುಟ್ಟುಹಬ್ಬದ ಮರುದಿನ ಬೆಳ್ಳಿ ಪರ್ವ ಕಾರ್ಯಕ್ರಮಗಳು ನಡೆಯಲಿವೆ. ಮಂಡ್ಯ(Mandya) ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ರಂಗನಾಥ ಸ್ವಾಮಿ ದೇವಸ್ಥಾನದ ಮೈದಾನದಲ್ಲಿ ದರ್ಶನ್(Darshan) ರಜತ ಮಹೋತ್ಸವ ಕಾರ್ಯಕ್ರಮಗಳು ರೆಡಿಯಾಗಿವೆ. 1997ರಲ್ಲಿ ಮೊದಲ ಬಾಆರಿಗೆ ಮಹಾಭಾರತ ಚಿತ್ರದಲ್ಲಿ ದರ್ಶನ್ ನಟಿಸಿದ್ದರು. ಇದಾದ ಬಳಿಕ ದೇವರ ಮಗ, ವಲ್ಲರಸು, ಮೆಜೆಸ್ಟಿಕ್ ಮುಂತಾದ ಸಿನಿಮಾಗಳಲ್ಲಿ ನಟಿಸಿದರು. ಮೆಜಸ್ಟಿಕ್ ಸೂಪರ್ಹಿಟ್ ಸಿನಿಮಾ. ಇದಾದ ಬಳಿಕ ಇವರು ಹಿಂತುರುಗಿ ನೋಡಲೇ ಇಲ್ಲ. ಸದ್ಯ ಬಾಕ್ಸ್ ಆಫೀಸ್ ಸುಲ್ತಾನನಾಗಿ ಮೆರೆಯುತ್ತಿದ್ದಾರೆ.
#Darshan #DBoss #ChallengingStar #DevilMovie #Sandalwood