3-4 ದಿನಗಳ ಪ್ರಹಸನದ ನಂತರ ಅಂತಿಮವಾಗಿ ಮಹಾರಾಷ್ಟ್ರದಲ್ಲಿ ಮಹಾಯುತಿ (Maharashtra mahayuti) ಮೈತ್ರಿಕೂಟದ ಸರ್ಕಾರ ರಚನೆ ಕಗ್ಗಂಟು ಒಂದು ಹಂತಕ್ಕೆ ಈಗ ಬಗೆಹರಿದಂತೆ ಕಾಣುತ್ತಿದೆ. ಏಕನಾಥ್ ಶಿಂಧೆ (Eknath shindhe) ತಮ್ಮ ಸಿಎಂ ಪದವಿ ತ್ಯಾಗ ಮಾಡುವ ಸುಳಿವು ನೀಡಿದ ಬೆನ್ನಲ್ಲೇ, ಬಿಜೆಪಿಯ ದೇವೇಂದ್ರ ಫಡ್ನವೀಸ್ (Devendra phadnavis) ಸಿಎಂ ಪಟ್ಟಕ್ಕೇರುವುದು ಬಹುತೇಕ ಫಿಕ್ಸ್ ಆಗಿದೆ.
ಮಹಾಯುತಿ ಮೈತ್ರಿಕೂಟ ಮಹಾರಾಷ್ಟ್ರ ಸಿಎಂ ಸ್ಥಾನದ ಬಗ್ಗೆ ಚರ್ಚೆ ನಡೆಸಲು ಇಂದು ದೆಹಲಿಯಲ್ಲಿ (Delhi) ಸಭೆ ಸೇರಲಿದೆ. ಈ ಸಭೆಯಲ್ಲಿ ಶಿವಸೇನೆಯ (Shiva sene) ಏಕನಾಥ್ ಶಿಂಧೆ, ಬಿಜೆಪಿಯ ದೇವೇಂದ್ರ ಫಡ್ನವೀಸ್ ಮತ್ತು ಎನ್.ಸಿ.ಪಿ ಯ ಅಜಿತ್ ಪವಾರ್ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಇದೇ ಸಭೆಯಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಹೆಸರು ಫೈನಲ್ ಆಗುವ ಸಾಧ್ಯತೆ ಇದೆ. ಈಗಾಗಲೇ ಈ ಬಗ್ಗೆ ಪ್ರತಿಕ್ರಿಯಿಸಿರುವ ಏಕನಾಥ್ ಶಿಂಧೆ ತಾವು ಪ್ರಧಾನಿ ಮೋದಿ (Pm modi) ಮತ್ತು ಅಮಿತ್ ಶಾ (Amit sha) ನಿರ್ಧಾರಕ್ಕೆ ಬದ್ಧ ಎಂದಿದ್ದು, ಬಿಜೆಪಿಗೆ ಸಿಎಂ ಸ್ಥಾನ ಸಿಗೋದು ಬಹುತೇಕ ಕನ್ಫರ್ಮ್ ಆಗಿದೆ.