~ಡಾ.ಜೆ.ಎಸ್ ಪಾಟೀಲ
ಭಾರತದ ಇತಿಹಾಸದಲ್ಲಿ ಶೂದ್ರರು ಕಟ್ಟಿದ ಸದೃಢ ಸಾಮ್ರಾಜ್ಯಗಳನ್ನು ಪರಕೀಯರೊಡನೆ ಸೇರಿ ಹುಡಿಗೊಳಿಸಿದ ಶ್ರೇಯ ವೈದಿಕರಿಗೆ ಸಲ್ಲುತ್ತದೆ. ಅದರಲ್ಲೂ ಮಹಾರಾಷ್ಟ್ರದ ಚಿತ್ಪಾವನ ಬ್ರಾಹ್ಮಣರು ಭಾರತದಲ್ಲಿ ಸೃಷ್ಟಿಸಿದ ಅರಾಜಕತೆ ಮತ್ತು ಹಿಂಸೆ ಬೇರೆ ಮತ್ತೊಬ್ಬರು ಮಾಡಿದ ಉದಾಹರಣೆ ವಿರಳ. ಮೊಘಲರ ಪ್ರವರ್ಧಮಾನ ಕಾಲದಲ್ಲಿ ಮಹಾರಾಷ್ಟ್ರದಲ್ಲಿ ಮರಾಠಾ ಶಿವಾಜಿ ಕಟ್ಟಿದ ಸಾಮ್ರಾಜ್ಯವನ್ನು ನಾಶಗೊಳಿಸಿದವರು ಇದೇ ಚಿತ್ಪಾವನ ಪೇಶ್ವೆಗಳು. ಆಶ್ಚರ್ಯದ ಸಂಗತಿ ಎಂದರೆ ಭಾರತದಲ್ಲಿ ಯಾರಿಗೂ ಗೊತ್ತಿರದ ಚಿತ್ಪಾವನರನ್ನು ಪೇಶ್ವೆ ಹುದ್ದೆಗೇರಿಸಿದ ಅನಾಹುತಕಾರಿ ಕೆಲಸ ಮಾಡಿದ್ದು ಇದೇ ಶಿವಾಜಿ ಮಹಾರಾಜ್.
ಶೂದ್ರ ಮರಾಠಾ ಶಿವಾಜಿಯನ್ನು ರಾಜನಾಗಿ ಒಪ್ಪದ ಈ ವೈದಿಕರು ಆತನಿಂದ ಅಪಾರ ಪ್ರಮಾಣದ ದ್ರವ್ಯವನ್ನು ಪಡೆದು ಕೊನೆಗೆ ಶಿಸೋಡಿಯಾ ಕಾಯಸ್ಥ ಕ್ಷತ್ರಿಯನೆಂಬ ಒಂದು ಖೊಟ್ಟಿ ಜಾತಿ ಪ್ರಮಾಣಪತ್ರ ನೀಡಿˌಆತನಿಂದ ಅಪಾರ ಪ್ರಮಾಣದ ದಾನವನ್ನು ಸ್ವೀಕರಿಸಿ ಎರಡು ಸಲ ಪಟ್ಟಾಭಿಷೇಕ ಮಾಡುವ ಮೂಲಕ ಆತನ ಬೊಕ್ಕಸವನ್ನೆ ಬರಿದಾಗಿಸಿದರು. ಮುಂದೆ ಅಫಜಲಖಾನ್ ಜೊತೆಗೆ ಸೇರಿ ಶಿವಾಜಿಯ ಕೊಲೆಗೆ ಪ್ರಯತ್ನಿಸಿ ಶಿವಾಜಿ ಕೈಯಲ್ಲಿ ಹತ್ಯೆಗೊಳಗಾದವ ಕೃಷ್ಣಾಜಿ ಭಾಸ್ಕರ್ ಕುಲಕರ್ಣಿ ಎನ್ನುವ ಚಿತ್ಪಾವನ ಎನ್ನುವ ಸಂಗತಿ ಹೆಚ್ಚು ಚರ್ಚೆಗೆ ಬರುವದೇಯಿಲ್ಲ. ಶಿವಾಜಿ ಚಿತ್ಪಾವನರಿಗೆ ನೀಡಿದ ಭಿಕ್ಷೆಯೆ ಪೇಶ್ವೆ ಹುದ್ದೆ.

ಯಾರು ಈ ಚಿತ್ಪಾವನ ಬ್ರಾಹ್ಮಣರು?
ಭಾರತದ ಇತಿಹಾಸದಲ್ಲಿ ವಿವಿಧ ಕಾರಣಗಳಿಂದ ಪ್ರಸಿದ್ಧರಾದ ಚಿತ್ಪಾವನರ ಪಟ್ಟಿ ಹೀಗಿದೆ:
೧. ನಾಥೂರಾಮ್ ಗೋಡ್ಸೆ
೨. ವಿನಾಯಕ್ ಸಾವರಕರ್
೩. ಎಂ. ಎಸ್. ಗೋಳ್ವಾಲ್ಕರ್
೪. ಕೆ.ಬಿ.ಹೆಡ್ಗೆವಾರ್
೫. ಬಾಲಗಂಗಾಧರ್ ತಿಲಕ್
೬. ಬಾಲಾಜಿ ವಿಶ್ವನಾಥ ಭಟ್
ಖ್ಯಾತ ಇತಿಹಾಸಕಾರ ವಿಲಾಸ್ ಖರತ್ ಅವರು ಈ ಚಿತ್ಪಾವನರ ಕುರಿತು ಹೀಗೆ ಬರೆಯುತ್ತಾರೆ:
“ಬೆನ ಇಸರಾಯಿಲ್ ನಿಂದ ಓಡಿಸಲ್ಪಟ್ಟ ಯಹೂದಿಗಳ ಒಂದು ಗುಂಪು ಶರಣಾಗತರಾಗಿ ಭಾರತಕ್ಕೆ ವಲಸೆ ಬರುತ್ತಾರೆ. ಇವರು ಭಾರತದ ಪಶ್ಚಿಮ ಭಾಗದ ಕರಾವಳಿಯ ನಿವಾಸಿಗಳು. ೧೮ನೇ ಶತಮಾನದ ಪೂರ್ವದಲ್ಲಿ ಚಿತ್ಪಾವನ ಬ್ರಾಹ್ಮಣರನ್ನು ದೇಶಸ್ಥ ಬ್ರಾಹ್ಮಣರು ಕೀಳಾಗಿ ಕಾಣುತ್ತಿದ್ದರು. ಆ ಭಾವನೆ ಎಷ್ಟೊಂದು ಪ್ರಬಲವಾಗಿತ್ತೆಂದರೆˌ ದೇಶಸ್ಥ ಬ್ರಾಹ್ಮಣರು ಪೇಶ್ವೆಗಳನ್ನು ಒಳಗೊಂಡಂತೆ ಸಮಸ್ತ ಚಿತ್ಪಾವನ ಬ್ರಾಹ್ಮಣರನ್ನು ನಾಸಿಕ್ ಮತ್ತು ಇತರೆಡೆಯ ಗೋದಾವರಿ ಕೊಳ್ಳಗಳಲ್ಲಿ ಧಾರ್ಮಿಕ ವಿಧಿಗಳನ್ನು ಪೂರೈಸುವುದು ನಿಷೇಧಿಸಿದ್ದರು. ಭಾರತದ ಪಶ್ಚಿಮ ಕರಾವಳಿಯ ಕೋಂಕಣ ಪ್ರದೇಶವು ಮೊದಲಿನಿಂದ ವಿದೇಶಿ ವಲಸಿಗರ ಆಶ್ರಯ ತಾಣವಾಗಿದೆ.
ಅವರಲ್ಲಿ ಪಾರ್ಶಿಗಳುˌ ಬೆನ ಇಸರಾಯಿಲಿಗಳುˌ ಕೂಡಲದೇಶ್ಕರ್ ಗೌಡ ಬ್ರಾಹ್ಮಣರುˌ ಕೋಂಕಣಿಯ ಸಾರಸ್ವತ ಬ್ರಾಹ್ಮಣರುˌ ಮತ್ತು ಈ ದೇಶಕ್ಕೆ ಕೊನೆಯವರಾಗಿ ವಲಸೆ ಬಂದ ಚಿತ್ಪಾವನ ಬ್ರಾಹ್ಮಣರು. ಈ ಸಂಗತಿಯನ್ನು ಇವತ್ತಿಗೂ ಮುಂಬೈ ಮಹಾನಗರದ ಕೋಲಾಬಾ ಪ್ರದೇಶದಲ್ಲಿ ವಾಸಿಸುವ ಬೆನ ಇಸರಾಯಲಿಗರ ಜಾನಪದ ಕತೆಗಳಲ್ಲಿ ಪ್ರಸ್ತಾಪಿಸಲಾಗುತ್ತಿದೆ. ಇಸರಾಯಿಲ್ನ ೧೪ ಪ್ರಸಿದ್ಧ ಯಹೂದಿ ಕುಟುಂಬಗಳಲ್ಲಿ ಒಂದು ಭಾರತಕ್ಕೆ ವಲಸೆ ಬಂದ ಬಗ್ಗೆ ಆ ಜನಪದ ಕಾವ್ಯಗಳು ಮಾತನಾಡುತ್ತವೆ. ೧೭೦೭ ಕ್ಕೆ ಮೊದಲು ಈ ಚಿತ್ಪಾವನ ಬ್ರಾಹ್ಮಣರ ಬಗ್ಗೆ ಅಷ್ಟು ವಿವರಗಳು ಲಭ್ಯವಿರಲಿಲ್ಲ. ಅಂದಾಜು ಇದೇ ಸಮಯದಲ್ಲಿ ಬಾಲಾಜಿ ವಿಶ್ವನಾಥ ಭಟ್ ಎಂಬ ಚಿತ್ಪಾವನ ಬ್ರಾಹ್ಮಣನೊಬ್ಬ ರತ್ನಗಿರಿ ಬಿಟ್ಟು ಪುಣೆ-ಸಾತಾರಾ ಭಾಗಕ್ಕೆ ವಲಸೆ ಬರುತ್ತಾನೆ.

ಆತ ಛತ್ರಪತಿ ಶಾಹುಜಿಯ ಮನಸ್ಸನ್ನು ಗೆದ್ದ ಕಾರಣ ಆತನನ್ನು ಪ್ರಥಮ ಪೇಶ್ವೆ (ಪ್ರಧಾನ ಮಂತ್ರಿ) ಮಾಡಲಾಗುತ್ತದೆ. ಆಗ ಆತ ಮರಾಠಾ ಸಾಮ್ರಾಜ್ಯದ ಮೇಲೆ ಕ್ರಮೇಣ ತನ್ನ ನಿಯಂತ್ರಣವನ್ನು ಬಿಗಿಗೊಳಿಸುತ್ತ ಹೋದ. ಏಕೆಂದರೆ ಚಿತ್ಪಾವನರ ಹಿತಾಸಕ್ತಿಗಾಗಿ ಅವರು ರಾಜಸತ್ತೆಯನ್ನು ನಿಯಂತ್ರಿಸುವುದು ಅನಿವಾರ್ಯವಾಗಿತ್ತು. ಸದೃಢˌ ಸಬಲ ಮರಾಠಾ ಸಾಮ್ರಾಜ್ಯವನ್ನು ದುರ್ಬಲಗೊಳಿಸಿ ಅವಸಾನಕ್ಕೆ ದೂಡುವ ಕೊನೆಯ ದಿನಗಳ ವರೆಗೂ ಪೇಶ್ವೆಯ ಹುದ್ದೆ ಇದೇ ಚಿತ್ಪಾವನ ಬ್ರಾಹ್ಮಣ ಬಾಲಾಜಿ ವಿಶ್ವನಾಥ ಭಟ್ಟನ ಕುಟುಂಬದ ವಶದಲ್ಲಿತ್ತು. ಒಬ್ಬ ಚಿತ್ಪಾವನ ಬ್ರಾಹ್ಮಣ ಮರಾಠಾ ಸಾಮ್ರಾಜ್ಯದಲ್ಲಿ ಪ್ರಭಾವಿ ಸ್ಥಾನ ಗಳಿಸಿದ್ದರಿಂದ ಬಹುಸಂಖ್ಯೆಯ ಚಿತ್ಪಾವನರು ಕೋಂಕಣಿ ಪ್ರದೇಶ ತೊರೆದು ಪುಣೆಯ ಕಡೆಗೆ ವಲಸೆ ಬರಲಾರಂಭಿಸಿದರು.
ಬಾಲಾಜಿ ವಿಶ್ವನಾಥ ಭಟ್ಟ ಆ ಎಲ್ಲಾ ಚಿತ್ಪಾವನರನ್ನು ಸಾಮ್ರಾಜ್ಯದ ಅನೇಕ ಆಯಕಟ್ಟಿನ ಸ್ಥಾನಗಳಲ್ಲಿ ಪ್ರತಿಷ್ಟಾಪಿಸಲಾರಂಭಿಸಿದ. ಮಾರಾಠಾ ಸಾಮ್ರಾಜ್ಯದಲ್ಲಿ ಚಿತ್ಪಾವನ ಬ್ರಾಹ್ಮಣರಿಗೆ ಜಮೀನುಗಳನ್ನು ಉಂಬಳಿಯಾಗಿ ನೀಡುವುದಷ್ಟೆ ಅಲ್ಲದೆ ಅವರನ್ನು ಎಲ್ಲಾ ರೀತಿಯ ತೆರಿಗೆಗಳಿಂದ ವಿನಾಯತಿ ಕೂಡ ನೀಡಲಾಗಿತ್ತು. ಚಿತ್ಪಾವನರು ತಮ್ಮ ಸಮುದಾಯವನ್ನು ಸಬಲೀಕರಿಸಲು ಎಲ್ಲ ಬಗೆಯ ಅಕ್ರಮಗಳನ್ನು ಆ ಕಾಲಘಟ್ಟದಲ್ಲಿ ಮಾಡಿದ್ದರು. ೧೮೧೮ ರಲ್ಲಿ ಬಲಿಷ್ಟ ಮಾರಾಠಾ ಸಾಮ್ರಾಜ್ಯ ಪತನ ಹೊಂದಲು ಇದು ಪ್ರಮುಖ ಕಾರಣವಾಗಿತ್ತೆಂಬುದು ಇತಿಹಾಸಕಾರರ ಅಭಿಪ್ರಾಯವಾಗಿದೆ.
ಈ ಘಟನೆಯನ್ನು ವಿವರಿಸುತ್ತಾ ಖ್ಯಾತ ಲೇಖಕ ರಿಚರ್ಡ್ ಮ್ಯಾಕ್ಸವೆಲ್ ಹೀಗೆ ಅಭಿಪ್ರಾಯ ಪಟ್ಟಿದ್ದಾನೆ: “ರಾಜಕೀಯ ಬೆಂಬಲದಿಂದ ಒಂದು ಸಮುದಾಯದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಉನ್ನತೀಕರಕ್ಕೆ ಇದೊಂದು ಒಳ್ಳೆಯ ಉದಾಹರಣೆ.” (Richard Maxwell Eaton. A social history of the Deccan, 1300-1761: eight Indian lives, Volume 1. p. 192). ಚಿತ್ಪಾವನ ಬ್ರಾಹ್ಮಣರ ಆಡುಭಾಷೆ ಈ ದೇಶದ ಭಾಷಾ ಪರಿವಾರದೊಂದಿಗೆ ಲವಲೇಶವೂ ಹೊಂದಾಣಿಕೆಯಾಗುವುದಿಲ್ಲ. ೧೯೪೦ ರ ತನಕ ಚಿತ್ಪಾವನರು ತಮ್ಮ ಮನೆಗಳಲ್ಲಿ ಚಿತ್ಪಾವನಿ ಕೋಂಕಣಿ ಭಾಷೆ ಮಾತನಾಡುತ್ತಿದ್ದರು.

ಆಗ ಆ ಭಾಷೆ ಅಳಿವಿನಂಚಿಗೆ ದೂಡಲ್ಪಟ್ಟಿತ್ತು. ಆಶ್ಚರ್ಯದ ಸಂಗತಿ ಎಂದರೆ ಚಿತ್ಪಾವನರು ತಮ್ಮ ಭಾಷೆಯ ಉಳಿವಿಗೆ ಯಾವುದೆ ಪ್ರಯತ್ನ ಮಾಡಲಿಲ್ಲ. ಅವರ ಉದ್ದೇಶ ಸ್ಪಷ್ಟವಾಗಿ ತಾವು ಭಾರತೀಯ ಮುಖ್ಯವಾಹಿನಿಯೊಂದಿಗೆ ಗುರುತಿಸಿಗೊಂಡು ಉಚ್ಛ ಸ್ಥಾನವನ್ನು ಉಳಿಸಿಕೊಳ್ಳುವುದೇ ಆಗಿತ್ತು. ಪರಿವರ್ತನೆ ಮತ್ತು ಬದಲಾವಣೆಗೆ ಬಹುಬೇಗ ತಮ್ಮನ್ನು ತಾವು ಒಡ್ಡಿಕೊಳ್ಳುವ ಚಿತ್ಪಾವನರು ಬ್ರಿಟೀಷರು ಭಾರತದಲ್ಲಿ ಇಂಗ್ಲೀಷ್ ಶಿಕ್ಷಣವನ್ನು ಜಾರಿಗೆ ತಂದಾಗ ಮೊಟ್ಟ ಮೊದಲು ತಮ್ಮ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮ ಶಾಲೆಗಳಿಗೆ ಕಳಿಸಲು ಆರಂಭಿಸಿದವರಲ್ಲಿ ಮೊದಲಿಗರಾಗಿದ್ದರು. ಇಸರಾಯಿಲ್ನಿಂದ ಓಡಿಸಲ್ಪಟ್ಟ ಯಹೂದಿ ಆರ್ಯರಾಗಿರುವ ಚಿತ್ಪಾವನ ಬ್ರಾಹ್ಮಣರು ಕೇವಲ ಬೆರಳೆಣಿಕೆಯಷ್ಟಿದ್ದರೂ ಕೂಡ ಈ ದೇಶದಲ್ಲಿ ತಮ್ಮ ಬಲವಾದ ಅಸ್ತಿತ್ವವನ್ನು ಸ್ಥಾಪಿಸಿಕೊಳ್ಳುವುದಷ್ಟೇ ಅಲ್ಲದೆ ರಾಷ್ಟ್ರೀಯ ಸ್ವಯಸೇವಕ ಸಂಘವನ್ನು ಸ್ಥಾಪಿಸಿ ಪ್ರಸ್ತುತ ದೇಶದ ರಾಜಕೀಯ ಆಡಳಿತದ ಮೇಲೆ ತಮ್ಮ ನಿಯಂತ್ರಣವನ್ನು ಹೊಂದಿದ್ದಾರೆ.” ಇದು ಪ್ರೊ. ವಿಲಾಸ್ ಖರತ್ ಅವರು ಚಿತ್ಪಾವನರ ಕುರಿತು ಬರೆದ ಐತಿಹಾಸಿಕ ಗುಣಲಕ್ಷಣಗಳ ಸಂಕ್ಷೀಪ್ತ ವಿವರ. ಆದರೆ ಸ್ವಾತಂತ್ರ ಪೂರ್ವದಲ್ಲಿ ಮತ್ತು ಸ್ವಾತಂತ್ರಾ ನಂತರ ಈ ಚಿತ್ಪಾವನರು ಭಾರತದಲ್ಲಿ ಹುಟ್ಟುಹಾಕಿರುವ ಅರಾಜಕತೆಯ ಕುರಿತು ಬರೆದರೆ ಅದೊಂದು ಬೃಹತ್ ಗ್ರಂಥವೆ ಆದೀತು.
ಆ ಕಾಲದಲ್ಲಿ ಕರ್ನಾಟಕಕ್ಕೆ ಅನೇಕ ಚಿತ್ಪಾವನ ಕುಟುಂಬಗಳು ವಲಸೆ ಬಂದು ಇಲ್ಲೆ ನೆಲೆನಿಂತಿವೆ. ಇಂದು ರಾಜ್ಯದಲ್ಲಿ ಲಿಂಗಾಯತರು ಸಂಘಟಿಸಿ ಬೆಳೆಸಿದ ಬಿಜೆಪಿ ಎಂಬ ಬ್ರಾಹ್ಮಣ ಹಿತಾಸಕ್ತಿಯ ರಾಜಕೀಯ ಪಕ್ಷವನ್ನು ಅವರೇ ನಿಯಂತ್ರಿಸುತ್ತಿದ್ದಾರೆ. ಪೇಶ್ವೆಗಳು ಅಂದು ಮಹಾರಾಷ್ಟ್ರ ಮತ್ತು ದಕ್ಷಿಣ ಭಾರತದಲ್ಲಿ ಮಾಡಿದ ಅರಾಜಕತೆ ಹಾಗು ವಿದ್ವಂಸಕ ಆಡಳಿತ ಇತಿಹಾಸದಲ್ಲಿ ದಾಖಲಾಗಿದೆ. ಆಶ್ರಯ ನೀಡಿದ ಶಿವಾಜಿಯ ಸಾಮ್ರಾಜ್ಯವನ್ನು ನುಂಗಿ ನೀರು ಕುಡಿದು ತಮ್ಮದೆ ಪೇಶ್ವೆ ಸಾಮ್ರಾಜ್ಯವನ್ನು ಸ್ಥಾಪಿಸಿ ಕಿತ್ತೂರು ಸಂಸ್ಥಾನವೂ ಸೇರಿದಂತೆ ಸುತ್ತಮುತ್ತಲಿನ ಅನೇಕ ಶೂದ್ರ ಸಾಮಂತರ ಸಂಸ್ಥಾನಗಳನ್ನು ಕುತಂತ್ರದಿಂದ ನಾಶಗೊಳಿಸಿದವರು ಚಿತ್ಪಾವನರು. ಅವರ ಸಾಮ್ರಾಜ್ಯ ವಿಸ್ತರಣೆಯ ಹಪಾಹಪಿಗೆ ಮಿತಿಯೆ ಇರಲಿಲ್ಲ. ಆ ಹಪಾಹಪಿಯೆ ಅವರು ಒಂದು ಕಡೆ ನೆಲೆನಿಲ್ಲಲಾರದಂತೆ ನಾಶಗೊಳಿಸಿತು.

ಈಗ ಅದೇ ಚಿತ್ಪಾವನ ಪೇಶ್ವೆಗಳ ಮಹತ್ಪಾಕಾಂಕ್ಷೆ ಮತ್ತು ಹಪಾಹಪಿತನ ಕರ್ನಾಟಕದ ಬಿಜೆಪಿಯನ್ನು ನಿಯಂತ್ರಿಸುವ ಚಿತ್ಪಾವನರಲ್ಲಿ ಕಾಣಬಹುದಾಗಿದೆ. ತಮಗೆ ಆಶ್ರಯ ನೀಡಿದ ಹಾಗು ರಾಜಕೀಯವಾಗಿˌ ಆರ್ಥಿಕವಾಗಿ ಬೆಳೆಯಲು ಸಹಕರಿಸಿದ ಲಿಂಗಾಯತರನ್ನೆ ಎಲ್ಲ ರೀತಿಯಿಂದ ತುಳಿಯಲು ಈಗ ಮಾಡುತ್ತಿರುವ ವಿದ್ವಂಸಕ ಪ್ರಯತ್ನಗಳು ಕರ್ನಾಟಕದಲ್ಲಿ ಬಿಜೆಪಿಯನ್ನು ಪೇಶ್ವೆ ಸಾಮ್ರಾಜ್ಯದ ಮಾದರಿಯಲ್ಲೆ ನಾಶಗೊಳ್ಳಲು ನಾಂದಿ ಹಾಡಿದಂತಾಗಿದೆ. ಮುಂಬರುವ ಚುನಾವಣೆಯಲ್ಲಿ ಲಿಂಗಾಯತರು ತಮ್ಮ ಮೇಲಿನ ಚಿತ್ಪಾವನರ ಈ ವಿದ್ವಂಸಕ ದಾಳಿಯನ್ನು ಸಮರ್ಥವಾಗಿ ಹೊಡೆದುರುಳಿಸುವ ಎಲ್ಲಾ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸಲಾರಂಭಿಸಿವೆ.
~ಡಾ. ಜೆ ಎಸ್ ಪಾಟೀಲ.