ನಿನ್ನೆ ಬೆಂಗಳೂರಿನಲ್ಲಿ (Bangalore) ಸುದ್ದಿಗೋಷ್ಠಿ ನಡೆಸಿದ್ದ ವಕೀಲ ಮತ್ತು ಬಿಜೆಪಿ ಮುಖಂಡ ದೇವರಾಜೇಗೌಡ(Devarajegowda) , ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ,ಡಿಸಿಎಂ ಡಿಕೆ ಶಿವಕುಮಾರ್ (Dk shivakumar) ಅವರ ಮೇಲೆ ಸ್ಪೋಟಕ ಆರೋಪ ಮಾಡಿದ್ದರು . ಅದಕ್ಕೆ ಪೂರಕವಾದ ಆಡಿಯೋ ತುಣುಕನ್ನು ಬಿಡುಗಡೆ ಮಾಡಿ ಸಿಬಿಐ (CBI) ತನಿಖೆಗೆ ಆಗ್ರಹಿಸಿದ್ದರು. ಆದರೆ ಇದುವರೆಗೂಈ ಆರೋಪಕ್ಕೆ ಡಿಕೆ ಶಿವಕುಮಾರ್ ಸ್ಪಷ್ಟ ಪ್ರತಿಕ್ರಿಯೆ ನೀಡಿಲ್ಲ. ದೇವರಾಜೇಗೌಡ ಆರೋಪಕ್ಕೆ ಡಿಸಿಎಂ ಥಂಡಾ ಹೊಡೆದ್ರಾ ಎಂಬ ಚರ್ಚೆಗಳು ಗರಿಗೆದರಿವೆ.
ಈವರೆಗೂ ಹಾಸನ (Hassan) ಅಶ್ಲೀಲ ವಿಡಿಯೋ ಸಂಬಂಧಪಟ್ಟಂತೆ ಬಿಜೆಪಿಯ ನಿಲುವೇನು, ನರೇಂದ್ರ ಮೋದಿಯ (Narendra modi) ನಿಲುವೇನು ? ಇದಕ್ಕೆ ಎನ್ಡಿಎ (NDA) ಮೈತ್ರಿಕೂಟ ಉತ್ತರಿಸಬೇಕು, ಎಂದೆಲ್ಲಾ ಅಬ್ಬರಿಸಿ ಬೊಬ್ಬೆಯುತ್ತಿದ್ದ ಡಿಸಿಎಂ ಡಿಕೆ ಶಿವಕುಮಾರ್ ,ಈಗ ಸೈಲೆಂಟ್ ಮೋಡ್ ಗೆ ಜಾರಿದ್ದಾರೆ. ದೇವರಾಜು ಗೌಡ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂಬ ಮಾಧ್ಯಮ ಪ್ರಕಟಣೆಯನ್ನು ಹೊರಡಿಸಿ ಸುಮ್ಮನಾಗಿಬಿಟ್ಟಿದಾರೆ.
ಮತ್ತೊಂದು ಕಡೆ ಸಿಎಂ ಸಿದ್ದರಾಮಯ್ಯ (Siddaramaiah) ಆಗ್ಲಿ ಅಥವಾ ಸರ್ಕಾರದ ಯಾವುದೇ ಸಚಿವರುಗಳಾಗಲಿ, ಇನ್ನುಳಿದ ಕಾಂಗ್ರೆಸ್ (congress) ನಾಯಕರುಗಳಾಗಲಿ ,ಈ ಆರೋಪಕ್ಕೆ ಸಂಬಂಧಪಟ್ಟ ಹಾಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ . ಇಷ್ಟು ದಿನ ಗಂಟಾಗೋಷವಾಗಿ ಹೇಳಿಕೆಗಳನ್ನು ಕೊಡುತ್ತಿದ್ದ ಕಾಂಗ್ರೆಸ್ ಪಾಳಯ ,ಈಗ ಥಂಡಾ ಹೊಡೆದಂತೆ ಭಾಸವಾಗುತ್ತಿದೆ. ಅಂತಿಮವಾಗಿ ತನಿಖೆ ಯಾವ ದಿಕ್ಕಿನಲ್ಲಿ ಸಾಗಲಿದಿಯೋ ಕಾದು ನೋಡಬೇಕಿದೆ.