ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ವಿಚಾರ ಸಾಕಷ್ಟು ಚರ್ಚೆ ಆಗ್ತಿದೆ. ಡಿಸಿಎಂ ಡಿಕೆಶಿ ವಿರುದ್ಧ ಅಮಿಷವೊಡ್ಡಿದ ಆರೋಪ ಜೋರಾಗಿ ಕೇಳಿಬಂದಿದೆ.
100 ಆಫರ್ ಕೊಟ್ಟಿದ್ದರು ಎಂಬ ವಕೀಲ ಬಿಜೆಪಿ ಮುಖಂಡ ದೇವರಾಜೇಗೌಡರ ಆರೋಪ ಸಂಬಂಧ ಸಿಡಿಮಿಡಿಗೊಂಡ ಡಿಸಿಎಂ ಡಿ.ಕೆ ಶಿವಕುಮಾರ್, ದೇವರಾಜೇಗೌಡ ಮೆಂಟಲ್ ಕೇಸ್. ನಾನು ಆಫರ್ ಮಾಡಿದ್ರೆ ಲೋಕಾಯುಕ್ತಕ್ಕೆ ದೂರು ನೀಡಲಿ ಎಂದರು.
ಈ ಕುರಿತು ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ದೇವರಾಜೇಗೌಡ ಏನು ಬೇಕಾದರೂ ಮಾತನಾಡಿಕೊಳ್ಳಲಿ. ತಲೆಕೆಟ್ಟವನು, ಆಸ್ಪತ್ರೆಗೆ ಸೇರಿಸಬೇಕು. ನನ್ನ ಹೆಸರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರ. ನನ್ನ ಹೆಸರು ಬಳಸಿಕೊಂಡರೇ ಕೆಲವರಿಗೆ ಮಾರ್ಕೆಟ್. ದೇವರಾಜೇಗೌಡ ಜತೆ ನಾನು ಮಾತೇ ಆಡಿಲ್ಲ. ನಾನು ಡಿಸಿಎಂ. ನೂರಾರು ಜನ ಬಂದು ಮಾತನಾಡುತ್ತಾರೆ ಒಳ್ಳೆಯವರು ಬರ್ತಾರೆ ಕೆಟ್ಟವರು ಬರ್ತಾರೆ. ಯಾವ ಹುತ್ತದಲ್ಲಿ ಯಾವು ಹಾವು ಇರುತ್ತೆ ಯಾರಿಗೆ ಗೊತ್ತು ಎಂದರು.
ನಾನು ಯಾವುದೇ ತಪ್ಪು ಮಾಡಿಲ್ಲ, ತಲೆಕೆಡಿಸಿಕೊಳ್ಳುವುದಿಲ್ಲ. ಆಫರ್ ಮಾಡಿದ್ರೆ ಲೋಕಾಯುಕ್ತಕ್ಕೆ ದೂರು ನೀಡಲಿ. ಈ ವಿಚಾರದಲ್ಲಿ ನಾನು ಹೆಚ್ಚು ಏನು ಮಾತನಾಡಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.