ಪೆನ್‌ಡ್ರೈವ್ (Pendrive) ಪ್ರಕರಣದಲ್ಲಿ ಮೊನ್ನೆ ಮೊನ್ನೆಯಷ್ಟೇ ಸುದ್ದಿಗೋಷ್ಠಿ (Pressmeet) ನಡೆಸಿ ಖುದ್ದು ಡಿಸಿಎಂ ಡಿಕೆಶಿ (DK) ವಿರುದ್ಧ ಸ್ಪೋಟಕ ಆರೋಪ ಮಾಡಿ ಸಂಚಲನ ಸೃಷ್ಟಿ ಮಾಡಿದ್ದ ವಕೀಲ, ಬಿಜೆಪಿ (BJP) ಮುಖಂಡ ದೇವರಾಜೇಗೌಡರನ್ನ(Devarajegowda) ಇದೀಗ ಹಿರಿಯೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಜ್ವಲ್ ರೇವಣ್ಣರದ್ದು (Prajwal revanna) ಎನ್ನಲಾಗ್ತಿರೋ ಪೆನ್ ಡ್ರೈವ್ ವೈರಲ್ ವಿಚಾರದಲ್ಲಿ ಬಿಗ್ ಟ್ವಿಸ್ಟ್ (Big twist) ನೀಡಿದ್ದ ವಕೀಲ ದೇವರಾಜೇಗೌಡ ವಿರುದ್ಧ ಏಪ್ರಿಲ್ 1 ರಂದು ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ (Police) ಸಂತ್ರಸ್ತ ಮಹಿಳೆ ದೇವರಾಜೇಗೌಡ ಮೇಲೆ ಲೈಂಗಿಕ ದೌರ್ಜನ್ಯ (Sexual harrasement) ಆರೋಪ ಮಾಡಿ ದೂರು ದಾಖಲಿಸಿದ್ದರು.
ಸೈಟ್ ಮಾರಾಟ ಮಾಡಿಸಿಕೊಡೊ ನೆಪದಲ್ಲಿ ತನ್ನನ್ನು ಲೈಂಗಿಕವಾಗಿ ಬಳಕೆ ಮಾಡಿಕೊಂಡಿದ್ದಾರೆ ಅಂತಾ ಸಂತ್ರಸ್ತ ಮಹಿಳೆ ದೂರು ದಾಖಲಿಸಿದ್ದರು. ಮಹಿಳೆ ದೂರಿನ ಆಧಾರದ ಮೇಲೆ ಪೊಲೀಸರು FIR ದಾಖಲಿಸಿದ್ದರು. ಈ ಸಂಬಂಧ ಜಾಮೀನಿಗಾಗಿ ದೇವರಾಜೇಗೌಡ ಅರ್ಜಿ ಸಲ್ಲಿಸಿದ್ರು. ಆದ್ರೆ ಕೋರ್ಟ್ (court) ವಿಚಾರಣೆಯನ್ನ ಮೇ 15 ಕ್ಕೆ ಮುಂದೂಡಿಕೆ ಮಾಡಿತ್ತು.

ಇದೀಗ ಚಿತ್ರದುರ್ಗದ (Chitradurga) ಕುಹಿಳಾಳ ಟೋಲ್ ಬಳಿ ತೆರಳುತ್ತಿದ್ದ ಮಾಹಿತಿ ಪಡೆದ ಹಿರಿಯೂರು ಪೊಲೀಸರು ದೇವರಾಜೇಗೌಡರನ್ನ ವಶಕ್ಕೆ ಪಡೆದಿದ್ದು, ಡಿಕೆ ಮೇಲೆ ಆರೋಪ ಮಾಡಿದ ಪರಿಣಾಮ, ದೇವರಾಜೇಗೌಡಗೆ ಸಂಕಷ್ಟ ಎದುರಾಯ್ತ ಎಂಬ ಚರ್ಚೆ ಗರಿಗೆದರಿದೆ.