ಪೆನ್ಡ್ರೈವ್ (Pendrive) ಪ್ರಕರಣದಲ್ಲಿ ಮೊನ್ನೆ ಮೊನ್ನೆಯಷ್ಟೇ ಸುದ್ದಿಗೋಷ್ಠಿ (Pressmeet) ನಡೆಸಿ ಖುದ್ದು ಡಿಸಿಎಂ ಡಿಕೆಶಿ (DK) ವಿರುದ್ಧ ಸ್ಪೋಟಕ ಆರೋಪ ಮಾಡಿ ಸಂಚಲನ ಸೃಷ್ಟಿ ಮಾಡಿದ್ದ ವಕೀಲ, ಬಿಜೆಪಿ (BJP) ಮುಖಂಡ ದೇವರಾಜೇಗೌಡಗೆ (Devarajegowda) ಇದೀಗ ಸಂಕಷ್ಟ ಎದುದಾಗಿದೆ. ಸಂಸ್ತ್ರಸ್ತೆಯೊಬ್ಬರು ಸ್ವತಃ ದೇವರಾಜೇಗೌಡರ ಮೇಲೆಯೇ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ.
![](https://pratidhvani.com/wp-content/uploads/2024/05/IMG_7564-1.jpeg)
ಪ್ರಜ್ವಲ್ ರೇವಣ್ಣರದ್ದು (Prajwal revanna) ಎನ್ನಲಾಗ್ತಿರೋ ಪೆನ್ ಡ್ರೈವ್ ವೈರಲ್ ವಿಚಾರದಲ್ಲಿ ಬಿಗ್ ಟ್ವಿಸ್ಟ್ (Big twist) ನೀಡಿದ್ದ ವಕೀಲ ದೇವರಾಜೇಗೌಡ ವಿರುದ್ಧ ಏಪ್ರಿಲ್ 1 ರಂದು ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ (Police) ಸಂತ್ರಸ್ತ ಮಹಿಳೆ ದೇವರಾಜೇಗೌಡ ಮೇಲೆ ಲೈಂಗಿಕ ದೌರ್ಜನ್ಯ (Sexual harrasement) ಆರೋಪ ಮಾಡಿ ದೂರು ದಾಖಲಿಸಿದ್ದಾರೆ.
ಸೈಟ್ ಮಾರಾಟ ಮಾಡಿಸಿಕೊಡೊ ನೆಪದಲ್ಲಿ ತನ್ನನ್ನು ಲೈಂಗಿಕವಾಗಿ ಬಳಕೆ ಮಾಡಿಕೊಂಡಿದ್ದಾರೆ ಅಂತಾ ಸಂತ್ರಸ್ತ ಮಹಿಳೆ ದೂರು ದಾಖಲಿಸಿದ್ದಾರೆ. ಮಹಿಳೆ ದೂರಿನ ಆಧಾರದ ಮೇಲೆ ಪೊಲೀಸರು FIR ದಾಖಲಿಸಿದ್ದಾರೆ. ಈ ಸಂಬಂಧ ಜಾಮೀನಿಗಾಗಿ ದೇವರಾಜೇಗೌಡ ಅರ್ಜಿ ಸಲ್ಲಿಸಿದ್ರು. ಆದ್ರೆ ಕೋರ್ಟ್ (court) ವಿಚಾರಣೆಯನ್ನ ಮೇ 15 ಕ್ಕೆ ಮುಂದೂಡಿದೆ.