
ಬೆಂಗಳೂರಿನ ದೇವನಹಳ್ಳಿ (Devanahalli), ಚನ್ನರಾಯಪಟ್ಟಣ (Channarayapatna)ರೈತರ ಭೂಸ್ವಾಧೀನ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಮಹತ್ವದ ಸಭೆ ನಡೆಯಲಿದೆ. ರೈತರ ಭೂಸ್ವಾಧೀನ ವಿಚಾರವಾಗಿ ಸಿಎಂ ಸಿದ್ದರಾಮಯ್ಯ (Cm siddaramaiah) ಈ ಹಿಂದೆ ಎರಡು ಭಾರಿ ರೈತ ಮುಖಂಡರು, ಕಾನೂನು ತಜ್ಞರ ಜೊತೆಗೆ ಸಭೆ ನಡೆಸಿದ್ರು.

ಸುಮಾರು 1000 ಕ್ಕೂ ಅಧಿಕ ದಿನಗಳಿಂದ ಈ ಭೂಸ್ವಾದೀನ ವಿರೋಧಿಸಿ ರೈತರು ಹೋರಾಟ ನಡೆಸುತ್ತಿದ್ದು, ಇಂದು ಮತ್ತೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಬೆಳಗ್ಗೆ 11 ಗಂಟೆಗೆ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಅಧಿಕಾರಿಗಳು, ರೈತ ಮುಖಂಡರ ಸಭೆ ನಡೆಯಲಿದೆ.

ಈ ಸಭೆಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವ ಕೆ.ಹೆಚ್ ಮುನಿಯಪ್ಪ, ಭೈರತಿ ಸುರೇಶ್, ಅಧಿಕಾರಿಗಳು, ರೈತ ಮುಖಂಡ ಬಡಗಲಪುರನಾಗೇಂದ್ರ, ನಟ ಪ್ರಕಾಶ್ ರಾಜ್ ಸೇರಿದಂತೆ ಹಲವು ರೈತಪರ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.










