ಇತ್ತೀಚೆಗಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆ ಆಘಾತಕಾರಿ ಮತ್ತು ಅತ್ಯಂತ ನಿರಾಶಾದಾಯಕವಾಗಿದೆ. ಕಾಂಗ್ರೆಸ್ ಪಕ್ಷವನ್ನು ಪುನರ್ ಸಂಘಟಿಸುವ ಕುರಿತು ಹಲವಾರು ಸಲಹೆಗಳು ಬಂದಿವೆ. ಇದೀಗ ಪಕ್ಷವನ್ನು ಪುನರ್ ಸಂಘಟಿಸುವ ಕೆಲಸ ಆರಂಭವಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.
ಪಕ್ಷ ಸಂಘಟಿಸುವ ಕೆಲಸ ಹಿಂದೆದಿಗಿಂತಲೂ ಅತ್ಯಂತ ಕಠಿಣ ಹಾಗೂ ಸವಾಲಿನ ವಿಷಯವಾಗಿದೆ. ಆದರೆ ಬದ್ಧತೆ ಹಾಗೂ ಸಿದ್ಧಾಂತಗಳ ಮೂಲಕವೇ ಪಕ್ಷವನ್ನು ಕಟ್ಟುವ ಅಗತ್ಯವಿದೆ ಎಂದು ಅವರು ಹೇಳಿದರು.

ಇತ್ತೀಚಿನ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷದ ಸೋಲು ಆಘಾತಕಾರಿ ಮತ್ತು ನೋವಿನ ವಿಷಯವಾಗಿದೆ. ಮತ್ತು ಸೋಲು ಹೇಗೆ ಆಯಿತು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ನನ್ನ ಬಳಿ ಇದೆ. ನನ್ನ ಹಲವಾರು ಸಹದ್ಯೋಗಿಗಳ ಜೊತೆ ನಾನು ಚರ್ಚಿಸಿದ್ದೇನೆ. ಹಲವಾರು ಸಲಹೆಗಳು ಬಂದಿದೆ. ಪಕ್ಷದ ನಿಷ್ಠಾವಂತರು ತಾಳ್ಮೆಯಿಂದ ಇದ್ದಾರೆ. ನಾನು ಪಕ್ಷ ಕಟ್ಟುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಸೋನಿಯಾ ಗಾಂಧಿ ವಿವರಿಸಿದರು.
ಕಾಂಗ್ರೆಸ್ ಸಂಸದೀಯ ಸದಸ್ಯರ ಸಭೆಯಲ್ಲಿ ಮಂಗಳವಾರ ಮಾತನಾಡಿದ ಅವರು, ಪಕ್ಷದ ಹಿತೈಷಿಗಳು, ಮುಖಂಡರು ಹಾಗೂ ಸಂಬಂಧಿಕರು ಪಕ್ಷ ಪುನರ್ ಸಂಘಟನೆಗೆ ಕೈ ಜೋಡಿಸಿದ್ದಾರೆ. ತತ್ ಕ್ಷಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲಾಗಿದೆ ಎಂದು ಸೋನಿಯಾ ಸ್ಪಷ್ಟಪಡಿಸಿದರು.



