ಬೆಂಗಳೂರಿನಲ್ಲಿ (Bangalore) ದಿನದಿಂದ ದಿನಕ್ಕೆ ಡೆಂಘೀ (Dengue) ಪ್ರಕರಣ ಏರಿಕೆಯಾಗಿದ್ದು, ಸದ್ಯ ನಗರದಲ್ಲಿ 1,500 ಡೆಂಘೀ ಪ್ರಕರಣಗಳು ಇದುವರೆಗೂ ವರದಿಯಾಗಿವೆ. ಆದ್ರೆ, ಡೆಂಘೀ ಟೆಸ್ಟ್ ಮಾಡಿಸುವ Nst ಟೆಸ್ಟಿಂಗ್ ಕಿಟ್ ಪಾಲಿಕೆ ಬಳಿ ಇಲ್ಲ ಎಂಬ ಮಾಹಿತಿ ಬಹಿರಂಗವಾಗಿದೆ. ಆದ್ರೆ ಪಾಲಿಕೆ ಆಯುಕ್ತರು ಮಾತ್ರ ಈ ಬಗ್ಗೆ ಬೇರೆಯೇ ಹೇಳಿಕೆ ಕೊಟ್ಟಿದ್ದಾರೆ.
![](https://pratidhvani.com/wp-content/uploads/2024/06/IMG_8489.jpeg)
ಬೆಂಗಳೂರು ಮಹಾ ನಗರ ಪಾಲಿಕೆ (BBMP) ಆರೋಗ್ಯ ಕೇಂದ್ರಗಳಲ್ಲಿ ಸದ್ಯಕ್ಕಿರುವುದು ಕೇವಲ 3 ಸಾವಿರ ಡೆಂಘೀ ಟೆಸ್ಟಿಂಗ್ ಕಿಟ್ಗಳು (Testing kit) ಮಾತ್ರ. ಹೀಗಾಗಿ ಮತ್ತಷ್ಟು ಹೆಚ್ಚುವರಿ ಕಿಟ್ಗಳನ್ನ ತರಿಸಿಕೊಳ್ಳಬೇಕಾಗಿರೋ ಅಗತ್ಯವಿದೆ ಅಂತ ಹೇಳಲಾಗ್ತಿದೆ. ಆದ್ರೆ ಪಾಲಿಕೆ ಈ ಬಗ್ಗೆ ಗಮನ ಹರಿಸಿದಂತೆ ಕಾಣಿಲ್ಲ.
ಸದ್ಯ ಬಿಬಿಎಂಪಿ ಈ ಬಗ್ಗೆ ನಿರ್ಲ್ಯಕ್ಷ ತೋರಿದಂತೆ ಕಾಣುತ್ತಿದೆ. ಅಂಕಿ ಅಂಶಗಳ ಪ್ರಕಾರ ಪಾಲಿಕೆಯ ಬಳಿ ಕಿಟ್ಗಳ ಕೊರತೆಯಿದ್ದರೂ, ಅದನ್ನ ಮರೆಮಾಚಿರುವ ಪಾಲಿಕೆ ಆಯುಕ್ತರು ಮಾತ್ರ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ.