ಕರೋನಾ ಪ್ರಕರಣಗಳು ಕಡಿಮೆಯಾಗುತ್ತಿವೆ ಎಂದು ನಿಟ್ಟುಸಿರುವ ಬಿಡುವ ಹೊತ್ತಲ್ಲೇ ಇದೀಗ ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಳವಾಗುತ್ತಿದೆ. ಕಳೆದ 15 ದಿನಗಳಲ್ಲಿ 776 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ.
ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ಕಳೆದ 15 ದಿನಗಳಲ್ಲಿ 776 ಡೆಂಘಿ ಪ್ರಕರಣಗಳ ಪತ್ತೆಯಾಗಿದ್ದು, ಈ ಮೂಲಕ ಈ ವರ್ಷ ಒಟ್ಟು 4,287 ಡೆಂಗ್ಯೂ ಪ್ರಕರಣಗಳು ದಾಖಲಾದ ಹಾಗೆ ಆಗಿದೆ. ಇನ್ನು ಅತಿಹೆಚ್ಚು ಡೆಂಗ್ಯೂ ಪ್ರಕರಣಗಳು ಪತ್ತೆಯಾದದ್ದು ಬೆಂಗಳೂರಿನಲ್ಲಿ ಎಂದು ಹೇಳಲಾಗಿದೆ. ಬೆಂಗಳೂರಿನಲ್ಲಿ ಒಟ್ಟು 756 ಜನರು ಡೆಂಗ್ಯೂ ಜ್ವರ ಪತ್ತೆಯಾಗಿದೆ. ರಾಜ್ಯದಲ್ಲಿ ಈ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು ಡೆಂಗ್ಯೂ ಪ್ರಕರಣಗಳು ಪತ್ತೆ?
ಕಲಬುರಗಿಯಲ್ಲಿ (338), ಉಡುಪಿಯಲ್ಲಿ (312), ಶಿವಮೊಗ್ಗದಲ್ಲಿ (305), ಕೊಪ್ಪಳದಲ್ಲಿ (220), ದಕ್ಷಿಣ ಕನ್ನಡದಲ್ಲಿ (206), ದಾವಣಗೆರೆಯಲ್ಲಿ (209), ಬಳ್ಳಾರಿಯಲ್ಲಿ(200), ವಿಜಯಪುರದಲ್ಲಿ (190), ಹಾವೇರಿಯಲ್ಲಿ (169), ಮಂಡ್ಯದಲ್ಲಿ (161), ಗದಗದಲ್ಲಿ (127), ಯಾದಗಿರಿಯಲ್ಲಿ (122), ಬೀದರ್‌ನಲ್ಲಿ (120), ತುಮಕೂರಿನಲ್ಲಿ (117), ಚಿತ್ರದುರ್ಗದಲ್ಲಿ (113) ಜಿಲ್ಲೆಗಳಲ್ಲಿ ಡೆಂಘಿ ಪ್ರಕರಣಗಳು ಪತ್ತೆಯಾಗಿವೆ.
ರಾಜ್ಯದಲ್ಲಿ ಡೆಂಗ್ಯೂ ಜೊತೆಗೆ ಚಿಕನ್ ಗುನ್ಯಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ರಾಜ್ಯದಲ್ಲಿ ಈವರೆಗೆ 1,415 ಜನರಲ್ಲಿ ಚಿಕೂನ್ ಗೂನ್ಯಾ ಪ್ರಕರಣಗಳ ವರದಿಯಾಗಿವೆ. ಕಲಬುರಗಿ (185), ಶಿವಮೊಗ್ಗ (169), ಕೋಲಾರ (108), ತುಮಕೂರು (104) ಹಾಗೂ ಯಾದಗಿರಿ (103), ಬೆಂಗಳೂರು ನಗರ (100) ಜಿಲ್ಲೆಯಲ್ಲಿ ಚಿಕೂನ್ ಗುನ್ಯಾ ಪ್ರಕರಣಗಳು ವರದಿಯಾಗಿವೆ.