ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿರುವ ಶ್ರೀ ಚೌಡೇಶ್ವರಿ ದೇವಸ್ಥಾನ ಅತ್ಯಂತ ಪುರಾತನ ದೇವಸ್ಥಾನವಾಗಿತ್ತು. ಆದರೆ ಪುನರ್ ನಿರ್ಮಾಣ ಮಾಡುವ ಭರವಸೆಯೊಂದಿಗೆ ಈಶ್ವರಪ್ಪ ಅವರು ಪುರಾತನ ದೇವಸ್ಥಾನವನ್ನ ಕೆಡವಿದ್ದಾರೆ ಎಂದು ಪ್ರತಿಭಟಕಾನಾರರ ಆರೋಪ
ಶಿವಮೊಗ್ಗ: ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿರುವ ಚೌಡೇಶ್ವರಿ ದೇವಸ್ಥಾನವನ್ನ ಕೆಡವಿದ್ದು, ಕೂಡಲೇ ದೇವಸ್ಥಾನವನ್ನ ಪುನರ್ ಪ್ರತಿಷ್ಠಾಪನೆ ಮಾಡಬೇಕೆಂದು ಆಗ್ರಹಿಸಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಭಕ್ತರು, ಕೆ.ಎಸ್. ಈಶ್ವರಪ್ಪ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿರುವ ಶ್ರೀ ಚೌಡೇಶ್ವರಿ ದೇವಸ್ಥಾನ ಅತ್ಯಂತ ಪುರಾತನ ದೇವಸ್ಥಾನವಾಗಿತ್ತು. ಆದರೆ ಪುನರ್ ನಿರ್ಮಾಣ ಮಾಡುವ ಭರವಸೆಯೊಂದಿಗೆ ಈಶ್ವರಪ್ಪ ಅವರು ಪುರಾತನ ದೇವಸ್ಥಾನವನ್ನ ಕೆಡವಿದ್ದಾರೆ ಎಂದು ಪ್ರತಿಭಟಕಾನಾರರು ಆರೋಪಿಸಿದರು.
2019ರಲ್ಲಿ ದೇವಸ್ಥಾನ ಪುನರ್ ನಿರ್ಮಾಣ ಕೆಲಸ ಆರಂಭಿಸಿದರು, ಇದು ಈವರೆಗೂ ಪೂರ್ಣಗೊಂಡಿಲ್ಲ. ಮಾಜಿ ಸಚಿವ ಈಶ್ವರಪ್ಪ ಅವರು ತಮ್ಮನ್ನು ಹಿಂದೂ ಹುಲಿ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ ದೇವಸ್ಥಾನಗಳು, ಶ್ರದ್ಧಾ ಕೇಂದ್ರಗಳ ವಿಷಯದಲ್ಲಿ ಮಾತ್ರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ. ಈಶ್ವರಪ್ಪ ಅವರ ಧೋರಣೆ ಅತ್ಯಂತ ಖಂಡನೀಯ ಎಂದು ಕಿಡಿಕಾರಿದ ಪ್ರತಿಭಟನಾಕಾರರು, ಈಶ್ವರಪ್ಪ ಅವರು ಕೂಡಲೇ ಅಗತ್ಯ ಅನುದಾನ ತರುವ ಮೂಲಕ ದೇವಸ್ಥಾನ ಪುನರ್ ನಿರ್ಮಾಣ ಕಾಮಗಾರಿಯನ್ನ ಪೂರ್ಣಗೊಳಿಸಬೇಕೆಂದು ಆಗ್ರಹಿಸಿದರು.

