ಬಳ್ಳಾರಿ: ಪಹಣಿಯಲ್ಲಿ ಹೆಸರು ಬದಲಾವಣೆ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಹಡಗಲಿ ತಾಲೂಕು ಕಚೇರಿಯ ಪ್ರಥಮ ದರ್ಜೆ ಸಹಾಯಕ ವೆಂಕಟಸ್ವಾಮಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.
ಹಗರನೂರು ಗ್ರಾಮಾದ ನಿವೃತ್ತ ಶಿಕ್ಷಕ ಲಕ್ಕಪ್ಪಾ ಅಂಗಡಿಯವರ ತಾಯಿಗೆ ಸೇರಿದ 4 ಎಕರೆ ಜಮಿನಿಗೆ ಸಂಬಂಧಿಸಿದಂತೆ ಸರ್ವೆನಂ. 330\ಎ ಪಹಣಿ ಕಲಂ 11 ರಲ್ಲಿ ಸರ್ಕಾರಿ ಜಮಿನು ಎಂದು ಬಂದಿದ್ದು ಇದನ್ನು ತಗೆದು ಹಾಕಲು ಅರ್ಜಿದಾರ ಲಕ್ಕಪ್ಪ ಅಂಗಡಿಯ 2014 ರಲ್ಲಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು. ಕೆಲಸ ಮಾಡಿಕೊಡಲು 70 ಸಾವಿರ ರೂ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಇಂದು ಪಟ್ಟಣದ ಖಾಸಗಿ ಹೋಟಲ್’ನಲ್ಲಿ ಅರ್ಜಿದಾರರನು ವೆಂಕಟಸ್ವಾಮಿಯವರಿಗೆ 65 ಸಾವಿರ ಹಣ ನೀಡಲು ಮುಂದಾದಾಗ ಬಳ್ಳಾರಿ ಹಾಗೂ ಹೊಸಪೇಟೆ ಲೋಕಾಯುಕ್ತರು ಜಂಟಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಎಸ್ಪಿ ಪುರುಷೊತ್ತಮ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ ಒಳಗೊಂಡಂತೆ ಪೊಲೀಸ್ ಇನ್ಸ್’ಪೆಕ್ಟರ್ ಸುರೇಶ್ ಬಾಬು ಹಾಗೂ ಸಂಗಮೇಶ್ ದಾಳಿ ನಡೆಸಿದ್ದಾರೆ.