ದೆಹಲಿ ಮತ್ತು ಪಂಜಾಬ್ ಸರ್ಕಾರಗಳು ಮಂಗಳವಾರ “ಪರಸ್ಪರ ಕಲಿಯಲು” ಜ್ಞಾನ ಹಂಚಿಕೆ ಒಪ್ಪಂದಕ್ಕೆ ಸಹಿ ಹಾಕಿವೆ.
ಈ ಒಪ್ಪಂದ ಭಾರತದ ಇತಿಹಾಸದಲ್ಲಿ ಒಂದು ಮೈಲಿಗಲ್ಲು ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬಣ್ಣಿಸಿದ್ದಾರೆ.
ಎರಡು ರಾಜ್ಯಗಳು ” ಪರಸ್ಪರ ಬೆನಿಫಿಟ್ ಆಧಾರದ ಮೇಲೆ ವಿವಿಧ ಕ್ಷೇತ್ರಗಳಲ್ಲಿ ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲು ಮತ್ತು ಅನುಷ್ಠಾನಗೊಳಿಸಲು ಸಹಕರಿಸಬೇಕು”. ಜ್ಞಾನ-ಹಂಚಿಕೆಯ ಒಪ್ಪಂದವು ಭಾರತದ ಇತಿಹಾಸದಲ್ಲಿ ಒಂದು ಮೈಲಿಗಲ್ಲು. ಸರ್ಕಾರಗಳು ಪರಸ್ಪರ ಕಲಿಯಲು ಜ್ಞಾನವನ್ನು ಹಂಚಿಕೊಳ್ಳುವ ಒಪ್ಪಂದಕ್ಕೆ ಸಹಿ ಹಾಕುತ್ತಿವೆ… ನಮ್ಮ ಗುರಿ ಪರಸ್ಪರ ಕಲಿಯುವುದು ಮತ್ತು ಮುಂದುವರಿಯುವುದು; ಇದೊಂದು ದೊಡ್ಡ ಬೆಳವಣಿಗೆ ಎಂದು ಆಪ್ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.