ರಾಷ್ಟ ರಾಜಧಾನಿ ದೆಹಲಿಯಲ್ಲಿ (New delhi) ಅಧಿಕಾರ ಸ್ಥಾಪಿಸಿದ ನಂತರ ಮೊನ್ನೆಯಷ್ಟೇ ರೇಖಾ ಗುಪ್ತ (Rekha gupta) ದೆಹಲಿಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಹೀಗಾಗಿ ಇಂದು (ಫೆ 22) ಪ್ರಧಾನಿ ನರೇಂದ್ರ ಮೋದಿಯವರನ್ನು (Narendra modi) ದೆಹಲಿ ಸಿಎಂ ರೇಖಾ ಗುಪ್ತಾ ಭೇಟಿಯಾಗಿದ್ದಾರೆ.

ಈ ಭೇಟಿಯ ವೇಳೆ ಹಲವು ವಿಚಾರಗಳನ್ನು ಚರ್ಚಿಸಿದ್ದು, ಮೋದಿಯವರ ಮಾರ್ಗದರ್ಶನ ಪಡೆದಿರುವುದಾಗಿ ರೇಖಾ ಗುಪ್ತ ಟ್ವೀಟ್ ಮಾಡಿದ್ದಾರೆ.ನಿಮ್ಮ ಮಾರ್ಗದರ್ಶನ, ನೇತೃತ್ವದಲ್ಲಿ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಲೋಕ ಕಲ್ಯಾಣದ ಕೆಲಸ ಮಾಡಲಿದೆ ಎಂದು ರೇಖಾ ಗುಪ್ತ ಬರೆದುಕೊಂಡಿದ್ದಾರೆ.
ಇನ್ನು, ಉತ್ತಮ ಆಡಳಿತದ ಮಾರ್ಗದಲ್ಲಿ ಸಾಗಿ ದಿಲ್ಲಿ ಜನರ ಕನಸುಗಳ ಸಾಕಾರಕ್ಕೆ ವಿಕಸಿತ ದಿಲ್ಲಿ ಮೂಲಕ ಬದಲಾವಣೆಗೆ ಬದ್ದವಾಗಿದ್ದೇವೆ ಎಂದು ದೆಹಲಿಯ ನೂತನ ಸಿಎಂ ರೇಖಾ ಗುಪ್ತಾ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.