ದೆಹಲಿಯಲ್ಲಿ ಆಡಳಿತಾತ್ಮಕ ಸೇವೆಗಳನ್ನು ಯಾರು ನಿಯಂತ್ರಿಸಬೇಕು ಎಂಬ ವಿಷಯವನ್ನು ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠಕ್ಕೆ ಉಲ್ಲೇಖಿಸಬೇಕೆ ಅಥವಾ ಬೇಡವೇ ಎಂಬುದರ ಕುರಿತು ಸುಪ್ರೀಂ ಕೋರ್ಟ್ ಗುರುವಾರ ತನ್ನ ಆದೇಶವನ್ನು ಕಾಯ್ದಿರಿಸಿದೆ.
ರಾಷ್ಟ್ರ ರಾಜಧಾನಿಯಲ್ಲಿನ ಆಡಳಿತಾತ್ಮಕ ಸೇವೆಗಳ ಮೇಲಿನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ದೆಹಲಿ ಸರ್ಕಾರ ಮತ್ತು ಕೇಂದ್ರದ ನಡುವಿನ ಕಾನೂನು ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಐವರು ನ್ಯಾಯಾಧೀಶರ ಪೀಠದಿಂದ ವಿಚಾರಣೆಯನ್ನು ಕೋರಿದೆ.
ಕೇಂದ್ರ ಸರ್ಕಾರದ ಮನವಿಗೆ ಆಮ್ ಆದ್ಮಿ ಪಕ್ಷದ ನೇತೃತ್ವದ ದೆಹಲಿ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ, ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಹಿಮಾ ಕೊಹ್ಲಿ ಅವರ ಪೀಠವು ಆರ್ಟಿಕಲ್ 239ಎಎ ಸಮಗ್ರ ವ್ಯಾಖ್ಯಾನಕ್ಕಾಗಿ ಸಂವಿಧಾನ ಪೀಠಕ್ಕೆ ಉಲ್ಲೇಖಿಸುವಂತೆ ಕೇಂದ್ರ ಸಲ್ಲಿಸಿದ ಅರ್ಜಿಯ ಆದೇಶಗಳನ್ನು ಕಾಯ್ದಿರಿಸಿದೆ.
ಪೀಠವು, “ಆದಷ್ಟು ಬೇಗ ಇದನ್ನು ಐವರು ನ್ಯಾಯಾಧೀಶರ ಪೀಠಕ್ಕೆ ಉಲ್ಲೇಖಿಸಬೇಕೆ ಅಥವಾ ಬೇಡವೇ ಎಂಬುದನ್ನು ನಾವು ನಿರ್ಧರಿಸುತ್ತೇವೆ. ಒಂದು ವೇಳೆ, ಸಮಸ್ಯೆಯನ್ನು ಆಲಿಸಲು ನಾವು ಐದು ನ್ಯಾಯಾಧೀಶರ ಪೀಠವನ್ನು ರಚಿಸಿದರೆ, ಮೇ 15ರ ಮೊದಲು ವಾದಗಳನ್ನು ಪೂರ್ಣಗೊಳಿಸಲು ನಾವು ಬಯಸುತ್ತೇವೆ ಎಂದು ಹೇಳಿದೆ.
Also read : ದೆಹಲಿ ಮೇಲಿನ ನಿಯಂತ್ರಣಕ್ಕೆ ಎಎಪಿ vs ಕೇಂದ್ರ ಜಟಾಪಟಿ : ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣ
ಕೇಂದ್ರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರೆ, ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ದೆಹಲಿ ಸರ್ಕಾರವನ್ನು ಪ್ರತಿನಿಧಿಸಲಿದ್ದಾರೆ.
ನಾಗರೀಕ ಸೇವೆಗಳ ಮೇಲಿನ ನಿಯಂತ್ರಣ ಮತ್ತು ತಿದ್ದುಪಡಿಯಾದ GNCTD ಕಾಯಿದೆ, 2021 ಮತ್ತು ವ್ಯವಹಾರ ನಿಯಮಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ದೆಹಲಿ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಿದೆ.
ವಿಚಾರಣೆಯ ಸಂದರ್ಭದಲ್ಲಿ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಈ ಪ್ರಕರಣವನ್ನು ಸಾಂವಿಧಾನಿಕ ಪೀಠದಿಂದ ವಿಚಾರಣೆ ನಡೆಸಬೇಕು ಹೊರತು ಮೂವರು ನ್ಯಾಯಾಧೀಶರಲ್ಲ ಎಂದು ಪ್ರತಿಪಾದಿಸಿದ್ದಾರೆ. ಇದು ಕಾನೂನಿನ ಹಲವಾರು ನಿರ್ಣಾಯಕ ಸಾಂವಿಧಾನಿಕ ಪ್ರಶ್ನೆಗಳನ್ನು ಒಳಗೊಂಡಿದ್ದರಿಂದ ಈ ವಾಧವನ್ನು ಮಂಡಿಸಿದ್ದಾರೆ.
ರಾಷ್ಟ್ರ ರಾಜಧಾನಿಯ ಆಡಳಿತದ ಯೋಜನೆಯನ್ನು ಸಾಂವಿಧಾನಿಕ ಪೀಠ ಸಮಗ್ರವಾಗಿ ಮೌಲ್ಯಮಾಪನ ಮಾಡಿದರೂ, ಕಾರ್ಯನಿರ್ವಾಹಕ ಪ್ರಾಧಿಕಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟತೆಯ ಕೊರತೆಯಿಂದಾಗಿ ಆಡಳಿತವು ಪ್ರತಿದಿನ ತೊಂದರೆ ಅನುಭವಿಸುತ್ತಿದೆ ಎಂದು ಕೇಂದ್ರ ಸರ್ಕಾರ ವಾದಿಸಿದೆ.
ಐವರು ನ್ಯಾಯಾಧೀಶರ ಪೀಠದ ಹಿಂದಿನ ತೀರ್ಪುಗಳು ಕೇಂದ್ರ ಅಥವಾ ದೆಹಲಿ ಸರ್ಕಾರಕ್ಕೆ ಸಾಮರ್ಥ್ಯವಿದೆಯೇ ಎಂದು ನಿರ್ಧರಿಸಲು ಯಾವುದೇ ಮಾರ್ಗಸೂಚಿಯನ್ನು ನೀಡಿಲ್ಲ ಎಂಬ ಅಂಶವನ್ನು ಒಳಗೊಂಡಂತೆ ಈ ವಿಷಯವನ್ನು ಸಂವಿಧಾನ ಪೀಠಕ್ಕೆ ಕಳುಹಿಸುವ ಅಗತ್ಯವಿದೆ ಎಂದು ಸಾಲಿಸಿಟರ್ ಜನರಲ್ ಮೆಹ್ತಾ ಹೇಳಿದರು.
ಪ್ರತಿ ಬಾರಿಯೂ ಸಣ್ಣ ಸಣ್ಣ ವಿಷಯಗಳ ವಿಚಾರಣೆಯನ್ನು ನಡೆಸುವುದಕ್ಕಲ್ಲ ನ್ಯಾಯಾಲಯ ಇರುವುದು. ಮೂರು ಅಥವಾ ಐದು ನ್ಯಾಯಮೂರ್ತಿಗಳು ಯಾಕೆ ಬೇಕು..? ಈ ಪ್ರಕರಣದ ವಿಚಾರಣೆ ಯಾಕೆ ಮಾಡಲ್ಲ ಎಂಬುವುದಲ್ಲ ಇಲ್ಲಿನ ಪ್ರಶ್ನೆ. ಬದಲಿಗೆ ಈ ಪ್ರಕರಣ ಯಾಕೆ ಉದ್ಭವವಾಗಿದೆ ಎಂಬುವುದೇ ಪ್ರಶ್ನೆ.
ಹಿಂದಿನ 2018ರ ಸಾಂವಿಧಾನಿಕ ಪೀಠದ ತೀರ್ಪಿನಲ್ಲಿ ಯಾವುದೇ ಅಸ್ಪಷ್ಟತೆ ಇಲ್ಲದಿದ್ದರೂ, ಯಾವುದಾದರೂ ಇದ್ದರೆ, ಅದನ್ನು ಪ್ರಸ್ತುತ ಪೀಠವು ನಿರ್ಧರಿಸಬಹುದಲ್ಲವೇ ಎಂದು ಹೇಳಿದರು.
ಬುಧವಾರ, ಸಾಲಿಸಿಟರ್ ಜನರಲ್ ದೆಹಲಿಯ ಎನ್‌ಸಿಟಿಯ ಆಡಳಿತದ ಮಾದರಿಯು ಶಾಸಕಾಂಗ ಸಭೆ ಅಥವಾ ಮಂತ್ರಿಗಳ ಮಂಡಳಿಯನ್ನು ಪರಿಚಯಿಸಿದರೂ ಸಹ “ಇದು ರಾಷ್ಟ್ರದ ರಾಜಧಾನಿಯಾಗಿರುವುದರಿಂದ, ಕೇಂದ್ರವು ಅದರ ಆಡಳಿತದ ಮೇಲೆ ವಿಶೇಷ ಅಧಿಕಾರವನ್ನು ಹೊಂದಿರುವುದು ಮತ್ತು ಪ್ರಮುಖ ವಿಷಯಗಳ ಮೇಲೆ ನಿಯಂತ್ರಣವನ್ನು ಹೊಂದಿರುವುದು ಅವಶ್ಯಕ” ಇದೆ. ದು ಯಾವುದೇ ನಿರ್ದಿಷ್ಟ ರಾಜಕೀಯ ಪಕ್ಷದ ಬಗ್ಗೆ ಉದ್ದೇಶಿಸಿರಲಿಲ್ಲ” ಎಂದು ಕೇಂದ್ರವು ವಾದಿಸಿತು.