ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ವಾಯು ಮಾಲಿನ್ಯ ದಿನದಿಂದ ದಿನಕ್ಕೆ ಏರಿಕೆಯಾಗ್ತಿದೆ. ಸದ್ಯ ನೆಹರು ಪಾರ್ಕ್ (Nehru park) ಬಳಿ ವಾಯು ಗುಣಮಟ್ಟ ಸೂಚ್ಯಂಕ(AQI) 254ಕ್ಕೆ ಇಳಿದಿದ್ದು, ಹಲವೆಡೆ ಮಂಜು ಕವಿದ ವಾತಾವರಣ ನಿರ್ಮಾಣವಾಗಿದೆ.

ನೆಹರು ಪಾರ್ಕ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಯುಮಾಲಿನ್ಯದ ತೀವ್ರತೆ ಹೆಚ್ಚಾಗಿದೆ. ಇನ್ನುವಾಯುಮಾಲಿನ್ಯವನ್ನ ಹತೋಟಿಗೆ ತರೋದಕ್ಕೆ ದೆಹಲಿ ಸರ್ಕಾರ ಸಕಲ ರೀತಿಯ ಕಸರತ್ತು ನಡೆಸ್ತಿದೆ.
ಆನಂದ್ ವಿಹಾರ್‌ನ AQI 445 ರಷ್ಟಿದ್ದು, ವಾತಾವರಣ ಸಂಪೂರ್ಣ ಹದಗೆಟ್ಟಿದೆ. ಈ ಹಿನ್ನಲೆ ಆನಂದ್ ವಿಹಾರ್‌ಗೆ ಸಿಎಂ ಅತಿಶಿ, ಪರಿಸರ ಸಚಿವ ಗೋಪಾಲ್ ರೈ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.ಈ ವೇಳೆ ಅಧಿಕಾರಿಗಳಿಂದ ಅತಿಶಿ ಮಾಹಿತಿ ಪಡೆದು ಮುಂದಿನ ಕ್ರಮದ ಬಬ್ಬೆ ಸೂಚನೆ ನೀಡಿದ್ದಾರೆ