ಈ ಬಾರಿಯ 2025 ರ ಐಪಿಎಲ್‌ನಲ್ಲಿ (Ipl 2025) ಚೆನ್ನೈ ಸೂಪರ್ ಕಿಂಗ್ಸ್ (Chennai super kings) ತಂಡದ ಪಾಲಿಕೆ ಕೆಟ್ಟ ಸರಣಿಯಾಗಿ ಮುಂದುವರೆದಿದೆ. ಹೌದು ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಸಿಎಸ್‌ಕೆ (CSK) ತಂಡ ತನ್ನ ತವರು ಮೈದಾನದಲ್ಲಿ ಸತತ 4 ಪಂದ್ಯಗಳನ್ನು ಸೋಲುವ ಮೂಲಕ ಕೆಟ್ಟ ದಾಖಲೆ ಬರೆದಿದೆ.

ಕಳೆದ ತಿಂಗಳು ಮಾರ್ಚ್ 28 ರಂದು ನಮ್ಮ ಆರ್‌ಸಿಬಿ (RCB) ವಿರುದ್ಧ ಸೋಲು,ಆ ನಂತರ ಏಪ್ರಿಲ್ 5 ರಂದು ಡೆಲ್ಲಿ ವಿರುದ್ಧ ಮತ್ತೆ ಸೋಲು , ಬಳಿಕ ಏಪ್ರಿಲ್ 11 ರಂದು ಕೆಕೆಆರ್ ವಿರುದ್ಧ ಪರಾಭವ ಮತ್ತು ನಿನ್ನೆ SRH ವಿರುದ್ಧ ಕೂಡ ಚೆನ್ನೈ ಸೋತಿದೆ.

ಈ ವರ್ಷ ಮಾತ್ರ ಅಲ್ಲ.. ಈ ಹಿಂದೆ 2008 ಮತ್ತು 2012 ರಲ್ಲಿ ಕೂಡ ಚೆನ್ನೈ ತಂಡ 4 ಪಂದ್ಯಗಳನ್ನು ಸೋತಿದೆ, ಆದರೆ ಈ ರೀತಿ ಸತತವಾಗಿ ಪಂದ್ಯಗಳನ್ನು ಸೋತಿರಲಿಲ್ಲ. ಆದ್ರೆ ಈ ಬಾರಿ ಸತತವಾಗಿ ಚೆನ್ನೈ 4 ಪಂದ್ಯಗಳನ್ನು ಸೋತು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಈ ಬಾರಿ ಚೆನ್ನೈ ಪ್ಲೇ ಆಫ್ ಗೆ ಬರುತ್ತಾ ಅಥವಾ ಹಾಗೆ ಮನೆಗೆ ತೆರಳುತ್ತಾ ಕಾದು ನೋಡಬೇಕಿದೆ.