ಖ್ಯಾತ ನಟಿ ದೀಪಿಕಾ ಪಡುಕೋಣೆ 2022ರಲ್ಲಿ ನಡೆಯುವ ಕೇನ್ಸ್ ಚಲನಚಿತ್ರೋತ್ಸವದ ತೀರ್ಪುಗಾರರಾಗಿ ಭಾಗವಾಗಿದ್ದಾರೆ ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.
ಫ್ರೆಂಚ್ ನಟ ವಿನ್ಸೆಂಟ್ ಲಿಂಡನ್ ಮೇ 17-28ರವರೆಗೆ ನಡೆಯುವ ಚಲನಚಿತ್ರೋತ್ಸವದ ಮುಖ್ಯ ತೀರ್ಪುಗಾರರಾಗಿರುತ್ತಾರೆ. ಎಂಟು ಮಂದಿ ತೀರ್ಪುಗಾರರಲ್ಲಿ ದೀಪಿಕಾ ಕೂಡ ಒಬ್ಬರಾಗಿರುತ್ತಾರೆ ಎಂದು ಹೇಳಿಕೊಂಡಿದ್ದಾರೆ.
ನಟಿ-ನಿರ್ಮಾಪಕಿ ರೆಬೆಕಾ ಹಾಲ್, ನೂಮಿ ರಾಪೇಸ್, ಜಾಸ್ಮಿನ್ ಟ್ರಿಂಕಾ, ಅಸ್ಗರ್ ಫರ್ಹಾದಿ, ಲಾಡ್ಜ್ ಲೈ, ಜೆಫ್ ನಿಕೋಲ್ಸ್ ಹಾಗೂ ಜೋಕಿಮ್ ಟ್ರೈಯರ್ ಇತರೆ ಸದಸ್ಯರು ಕೂಡ ಇದ್ದಾರೆ ಎಂದು ತಿಳಿದು ಬಂದಿದೆ.
ಈ ಹಿಂದೆ ಜಿಯೋ ಮಾಮಿ ಮುಂಬೈ ಫಿಲಂ ಫೆಸ್ಟಿವಲ್ನಲ್ಲಿ ದೀಪಿಕಾ ಮುಖ್ಯ ತೀರ್ಪುಗಾರರಾಗಿ ಎರಡು ವರ್ಷ ಕಾರ್ಯನಿರ್ವಹಿಸಿದ್ದರು