
ಚಿಟಗುಪ್ಪ: ತಾಲ್ಲೂಕಿನ ನಿರ್ಣಾ ಗ್ರಾಮದ ರೈತರಲ್ಲಿ ಈ ವರ್ಷದ ಮುಂಗಾರು ಮಳೆ ಹರ್ಷ ತಂದಿದೆ. ಹವಾಮಾನ ವೈಪರಿತ್ಯ, ಸಕಾಲಕ್ಕೆ ಬಾರದ ಮಳೆಯಿಂದ ಬೇಸತ್ತ ರೈತರು ದಶಕಗಳಿಂದ ಭತ್ತ ನಾಟಿ ಮಾಡುವುದನ್ನೆ ನಿಲ್ಲಿಸಿದ್ದರು.
ಕಲ್ಯಾಣ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಿಂದ ಜನ ಮದುವೆ, ಶುಭ ಕಾರ್ಯ, ಸಭೆ ಸಮಾರಂಭಗಳಿಗೆ ಇಲ್ಲಿಗೆ ಬಂದು ಭತ್ತ ಖರಿದಿಸುತ್ತಿದ್ದ ಕಾಲವೊಂದಿತ್ತು.

ಆದರೆ ಭತ್ತದ ಬೆಳೆಗೆ ಬೇಕಾಗುವಷ್ಟು ಮಳೆ ಆಗದಕ್ಕೆ ಕಳೆದ 10-12 ವರ್ಷಗಳಿಂದ ಗ್ರಾಮದ ರೈತರು ಭತ್ತ ನಾಟಿ ಮಾಡುವ ಸಾಹಸಕ್ಕೆ ಮುಂದಾಗಿರಲಿಲ್ಲ, ಈ ವರ್ಷದ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಉತ್ತಮವಾಗಿ ಬರುತ್ತಿರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಭತ್ತ ನಾಟಿ ಕಾರ್ಯ ಭರದಿಂದ ಸಾಗಿದೆ.
ಭತ್ತ ನಾಟಿ ಮಾಡಲು ಬೀಜ ಹಾಕಿದ್ದು ಸಸಿಗಳು ಫಲವತ್ತಾಗಿ ಬೆಳೆದಿವೆ, ಹೀಗಾಗಿ ಬಹುತೇಕ ರೈತರು ನಾಟಿ ಕಾರ್ಯ ಆರಂಭಿಸಿದ್ದಾರೆ.