2008ರ ಅಹಮದಬಾದ್ ಸರಣೀ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 49 ಅಪರಾಧಿಗಳ ಪೈಕಿ 38 ಮಂದಿಗೆ ವಿಶೇಷ ನ್ಯಾಯಾಲಯವು ಮರಣ ದಂಡನೆ ವಿಧಿಸಿದೆ. 2008ರಲ್ಲಿ ನಡೆದ ಸರಣಿ ಸ್ಪೋಟಗಳಲ್ಲಿ 56 ಮಂದಿ ಸಾವನಪ್ಪಿದ್ದರು. ಈ ಕುರಿತು ಸುಮಾರು 80ಜನ ಆರೋಪಿತರನ್ನು ವಿಚಾರಣೆ ನಡೆಸಲಾಗಿತ್ತು.
ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಎ.ಆರ್.ಪಟೇಲ್ 11 ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದ್ದಾರೆ. ಫೆಬ್ರವರಿ 8ರಂದು ಗುಜರಾತ್ ವಿಶೇಷ ನ್ಯಾಯಾಲಯವು 49 ಆರೋಪಿಗಳನ್ನು ದೋಷಿಗಳೆಂದು ಘೋಷಿಸಿ 28 ಆರೋಪಿಗಳನ್ನು ಪ್ರಕರಣದಿಂದ ಖುಲಾಸೆಗೊಳಿಸಿತ್ತು. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ 13 ವರ್ಷ ಹಳೆಯ ವಿಚಾರಣೆಯನ್ನು ಕೊನೆಗೊಳಿಸಿ ತೀರ್ಪನನು ಕಾಯ್ದಿರಿಸಿತ್ತು.
ಜುಲೈ 26, 2008ರಲ್ಲಿ 70 ನಿಮಿಷಗಳ ಅವಧಿಯಲ್ಲಿ 21 ಸ್ಪೋಟಗಳು ಸಂಭವಿಸಿದ್ದವು. ಈ ಸ್ಪೋಟದಲ್ಲಿ 56 ಮಂದಿ ಸಾವನಪ್ಪಿ, 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಪೊಲೀಸರು ನಿಷೇಧಿತ ಸಿಮಿ ಸಂಘಟನೆಯ ಇಂಡಿಯನ್ ಮುಜಾಹಿದ್ದೇನ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದವರು ಭಾಗಿಯಾಗಿದ್ದರು ಎಂದು ಪೊಲೀಸರು ಸಂಕೆ ವ್ಯಕ್ತಪಡಿಸಿದ್ದರು. ಈ ಸ್ಪೋಟಗಳನ್ನು 2002ರ ಗೋದ್ರಾ ಗಲಭೆಯ ಪ್ರತೀಕಾರವಾಗಿ ಪೂರ್ವನಿಯೋಜನೆಯೊಂದಿಗೆ ಬಾಂಬ್ ಸ್ಪೋಟ ನಡೆಸಿದ್ದರು ಎಂದು ಹೇಳಲಾಗಿತ್ತು.
ಈ ಕುರಿತು ಅಂದಿನ ಗುಜಾರತ್ ಸರ್ಕಾರವು ತನಿಖಾ ತಂಡವನ್ನು ರಚಿಸಿ ತನಿಖೆಗೆ ಆದೇಶಿಸಿತ್ತು. ತನಿಖೆ ವೇಳೆ ಒಟ್ಟು 80ಜನರನ್ನು ಆರೋಪಿಗಳೆಂದು ಪರಿಗಣಿಸಿ ಡಿಸೆಂಬರ್ 2009ರಲ್ಲಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.






