• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಮಧ್ಯಪ್ರದೇಶ: 2021ರ ಏಪ್ರಿಲ್-ಮೇ ತಿಂಗಳಲ್ಲಿ ಸಾಮಾನ್ಯ ದಿನಗಳಿಗಿಂತ ಮೂರು ಪಟ್ಟು ಹೆಚ್ಚಾದ ಕೋವಿಡ್ ಸಾವಿನ ಪ್ರಮಾಣ

Any Mind by Any Mind
June 13, 2021
in ದೇಶ
0
ಮಧ್ಯಪ್ರದೇಶ: 2021ರ ಏಪ್ರಿಲ್-ಮೇ ತಿಂಗಳಲ್ಲಿ ಸಾಮಾನ್ಯ ದಿನಗಳಿಗಿಂತ ಮೂರು ಪಟ್ಟು ಹೆಚ್ಚಾದ ಕೋವಿಡ್ ಸಾವಿನ ಪ್ರಮಾಣ
Share on WhatsAppShare on FacebookShare on Telegram

ADVERTISEMENT

ಇತ್ತೀಚಿಗೆ ನ್ಯಾಯಾಲಯವು ಬಿಹಾರದ ಕೋವಿಡ್ ಸಾವುಗಳನ್ನು ಪುನರ್ ಪರಿಶೀಲಿಸಲು ಆದೇಶ ನೀಡಿದ ನಂತರ,72%ದಷ್ಟು ಕೋವಿಡ್ ಸಾವುಗಳಲ್ಲಿ ಏರಿಕೆ ಕಂಡಿತ್ತು. ದೇಶದಲ್ಲಿಯೇ ಅತೀ ಹೆಚ್ಚು ಕೋವಿಡ್ ಸಾವುಗಳನ್ನು ಕಡಿಮೆ ರಾಜ್ಯಗಳಲ್ಲಿ ಬಿಹಾರ ಮೊದಲ ಸ್ಥಾನದಲ್ಲಿ ನಿಂತಿತ್ತು. ಈಗ ಲಭ್ಯವಾಗಿರುವ ಅಂಕಿಅಂಶಗಳ ಪ್ರಕಾರ ಮಧ್ಯಪ್ರದೇಶದಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸಾವಿನ ಪ್ರಮಾಣ ಅಧಿಕೃತ ಅಂಕಿಅಂಶಗಳಿಗಿಂತ ಮೂರು ಪಟ್ಟು ಹೆಚ್ಚಾಗಿರುವ ಕುರಿತು ಮಾಹಿತಿ ನೀಡಿದೆ. 

ದತ್ತಾಂಶ ವಿಶ್ಲೇಷಕಿ ರುಕ್ಮಿಣಿ ಅವರು ನಾಗರಿಕ ನೋಂದಣಿ ವ್ಯವಸ್ಥೆಯಿಂದ ಪಡೆದಿರುವ ಮಾಹಿತಿ ಈ ಆಘಾತಕಾರಿ ಅಂಶವನ್ನು ಬೆಳಕಿಗೆ ತಂದಿದೆ. 

2018 ಮತ್ತು 2019ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸರಾಸರಿ 59,000 ಸಾವುಗಳು ಮಧ್ಯಪ್ರದೇಶದಲ್ಲಿ ವರದಿಯಾಗಿವೆ. ಆದರೆ, ಕೋವಿಡ್ ಎರಡನೇ ಅಲೆಯ ಸಂರ್ಭದಲ್ಲಿ ಈ ಸಾವುಗಳ ಸಂಖ್ಯೆ ಸರಾಸರಿಗಿಂತ 290% ಏರಿಕೆಯಾಗಿ 2.3 ಲಕ್ಷಕ್ಕೇರಿದೆ! ಸರಾಸರಿಗಿಂತ ಹೆಚ್ಚಾಗಿರುವ 1.74 ಲಕ್ಷ ಸಾವುಗಳಲ್ಲಿ ಅತೀ ಹೆಚ್ಚು ಸಾವುಗಳು ಮೇ ತಿಂಗಳಲ್ಲಿ ವರದಿಯಾಗಿದೆ. ಮಧ್ಯಪ್ರದೇಶದಲ್ಲಿ ಮೇ ಒಂದರಲ್ಲೇ 1.6 ಲಕ್ಷ ಸಾವು ಸಂಭವಿಸಿರುವ ಕುರಿತು ದತ್ತಾಂಶಗಳು ಲಭ್ಯವಾಗಿದೆ. 

ಆದರೆ, ಸರ್ಕಾರದ ಅಧಿಕೃತ ಅಂಕಿ ಅಂಶಗಳ ಪ್ರಕಾರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕೋವಿಡ್’ನಿಂದ ಮೃತಪಟ್ಟವರ ಸಂಖ್ಯೆ ಕೇವಲ 4,461. ಇದು ಕೋವಿಡ್ ಕುರಿತಾದ ಸರ್ಕಾರಿ ಅಂಕಿಅಂಶಗಳ ಕುರಿತು ಸಂದೇಹಪಡುವಂತೆ ಮಾಡಿದೆ. ಮಧ್ಯಪ್ರದೇಶ ಸರ್ಕಾರವೂ ಕೋವಿಡ್ ಸಾವುಗಳ ಕುರಿತ ಅಂಕಿಅಂಶಗಳನ್ನು ತಿರುಚಿ ವರದಿ ನೀಡಿತ್ತು ಎಂಬ ಸಂದೇಹ ದೃಢವಾಗತೊಡಗಿದೆ. 

ರುಕ್ಮಿಣಿ ಅವರು ಹೇಳುವ ಪ್ರಕಾರ, ಈ ಎಲ್ಲಾ ಸಾವುಗಳು ಕೋವಿಡ್’ನಿಂದ ಉಂಟಾದ ಸಾವುಗಳೆಂದು ದೃಢವಾಗಿ ಹೇಳಲಾಗುವುದಿಲ್ಲ. ಆದರೆ, ಯಾವುದೇ ವರ್ಷದಲ್ಲಿ ಇಲ್ಲದಷ್ಟು ಸಾವುಗಳು ಒಂದೇ ಬಾರಿಗೆ ಹೆಚ್ಚಾಗಲು ಕಾರಣವೇನು ಎಂಬುದು ಯಾರು ಅರಿಯದ ರಹಸ್ಯವೇನಲ್ಲ. “ಕೋವಿಡ್ ಸಾವುಗಳ ಕುರಿತು ತಪ್ಪಾದ ಅಂಕಿ ಅಂಶಗಳು ಹೊರಬರಲು ಮೂರು ಕಾರಣಗಳಿವೆ. ಒಂದು, ಕರೋನಾ ಪಾಸಿಟಿವ್ ಬಂದ ನಂತರ ಸಾವನ್ನಪ್ಪಿದವರನ್ನು ಪಟ್ಟಿಯಿಂದ ಕೈಬಿಡುವುದು, ಎರಡನೇಯದು, ಕರೋನಾ ಪರೀಕ್ಷೆ ಮಾಡಿಸಿಕೊಳ್ಳದೇ ಸೋಂಕಿನಿಂದ ಮೃತಪಟ್ಟವರು ಮತ್ತು ಮೂರನೇಯದು, ಸರ್ಕಾರ ಉದ್ದೇಶಪೂರ್ವಕವಾಗಿ ಅಂಕಿ ಅಂಶಗಳನ್ನು ತಿರುಚಿದ್ದು. ಈ ಮೂರು ಕಾರಣಗಳಿಂದ ನಿಜವಾದ ಕೋವಿಡ್ ಸಾವಿನ ಪ್ರಮಾಣ ಬಯಲಾಗುತ್ತಿಲ್ಲ,” ಎಂದು ರುಕ್ಮಿಣಿ ಹೇಳಿದ್ದಾರೆ. 

ಶುಕ್ರವಾರದಂದು ಮದ್ರಾಸ್ ಹೈಕೋರ್ಟ್ ಹೇಳಿರುವ ಪ್ರಕಾರ ಕೋವಿಡ್ ಸಾವುಗಳ ಅಂಕಿಅಂಶ ಅಪಾರದರ್ಶಕವಾಗಿರುವುದು ಸಂಪೂರ್ಣ ದೇಶದ ಸಮಸ್ಯೆ ಆಗಿದೆ. ಈ ಕುರಿತಾಗಿ WHO ಮತ್ತು ICMR ಕೂಡಾ ಅಧಿಕೃತ ಹೇಳಿಕೆಯನ್ನು ನೀಡಿತ್ತು. ಕೋವಿಡ್ ನಿಂದ ಮೃತಪಟ್ಟವರ ದೇಹವನ್ನು ಯಾವ ರೀತಿ ದಹನ/ದಫನ್ ಮಾಡಬೇಕು ಎಂಬುದಕ್ಕೆ ಮಾರ್ಗಸೂಚಿ ಪ್ರಕಟಿಸಿತ್ತು. ಆದರೆ, ಕೋವಿಡ್ ನಿಂದ ಮೃತಪಟ್ಟರೂ, ಅಂತಹ ಸಾವುಗಳನ್ನು ಕೋವಿಡ್ ಸಾವುಗಳೆಂದು ಪರಿಗಣಿಸದಿದ್ದರೆ, ಮಾರ್ಗಸೂಚಿ ಪಾಲಿಸಲು ಸಾಧ್ಯವಿಲ್ಲ ಎಂಬುದು ನಿಚ್ಚಳ. 

ಈ ಹಿಂದೆ ಗುಜರಾತ್, ಕೊಲ್ಕತ್ತಾ ಮತ್ತು ಚೆನ್ನೈನಲ್ಲಿ ಕೋವಿಡ್ ಸಾವುಗಳ ಸಂಖ್ಯೆಯನ್ನು ಯಾವ ರೀತಿ ತಿರುಚಲಾಗಿತ್ತು ಎಂಬ ಕುರಿತು ರಾಷ್ಟ್ರೀಯ ಮಾಧ್ಯಮಗಳಲ್ಲಿ ಸರಣಿ ವರದಿಗಳು ಪ್ರಕಟವಾಗಿದ್ದವು. ಗುಜರಾತ್’ನಲ್ಲಂತು ಕೋವಿಡ್ ಸಾವುಗಳ ವಾಸ್ತವ ಪ್ರಮಾಣ ಸರ್ಕಾರಿ ಅಂಕಿಅಂಶಗಳಿಗಿಂತ ಹತ್ತು ಪಟ್ಟು ಹೆಚ್ಚಿರುವುದು ಕಂಡು ಬಂದಿತ್ತು. 

ಭಾರತದಲ್ಲಿ ಈವರೆಗೆ ಕೋವಿಡ್’ನಿಂದ ಒಟ್ಟು 3.67 ಲಕ್ಷ ಜನರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಹೇಳಿದೆ. ಆದರೆ, ತಜ್ಞರ ಪ್ರಕಾರ ಈ ವಾಸ್ತವದಲ್ಲಿ ಕರೋನಾ ಸೋಂಕಿನಿಂದ ಸರ್ಕಾರಿ ಸಂಖ್ಯೆಗಳಿಗಿಂತಲು ನಾಲ್ಕು ಪಟ್ಟು ಹೆಚ್ಚು ಜನರು ಸಾವನ್ನಪ್ಪಿರುವ ಸಾಧ್ಯತೆಯಿದೆ. 

Tags: Covid 19Covid Deathmadhya-prades
Previous Post

ಜಾತಿ ಶ್ರೇಷ್ಠತೆಯ ವ್ಯಸನದಿಂದ ಮುಕ್ತರಾಗಬೇಕಿದೆ

Next Post

ಕಾಂಗ್ರೆಸ್‌ ಹೋರಾಡುತ್ತಿರುವುದು ಬೆಲೆ ಇಳಿಸಲೋ, ಪೆಟ್ರೋಲ್‌ ಅನ್ನು GSTಗೆ ಸೇರಿಸಲೋ? –ಹೆಚ್‌ಡಿ ಕುಮಾರಸ್ವಾಮಿ

Related Posts

Top Story

Lakshmi Hebbalkar: ವಿಶೇಷ ಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 5, 2025
0

ಬೀದರ್ ಜಿಲ್ಲಾ ಪಂಚಾಯತ್ ಆವರಣದಲ್ಲಿ ವಿತರಣೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು, ವಿಶೇಷ ಚೇತನರಿಗೆ ವಿವಿಧ ಸವಲತ್ತುಗಳನ್ನು ವಿತರಿಸಿದರು. ಬೀದರ್...

Read moreDetails

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

July 5, 2025

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

July 5, 2025

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

July 5, 2025

Mallikarjuna Kharge: ರಾಜ್ಯದಲ್ಲಿ ಅರಣ್ಯ ಪ್ರದೇಶ ಬೆಳಸಿ ಪರಿಸರ ಉಳಿಸಿ: ಮಲ್ಲಿಕಾರ್ಜುನ ಖರ್ಗೆ ಒತ್ತಾಸೆ.

July 5, 2025
Next Post
ಕಾಂಗ್ರೆಸ್‌ ಹೋರಾಡುತ್ತಿರುವುದು ಬೆಲೆ ಇಳಿಸಲೋ, ಪೆಟ್ರೋಲ್‌ ಅನ್ನು GSTಗೆ ಸೇರಿಸಲೋ? –ಹೆಚ್‌ಡಿ ಕುಮಾರಸ್ವಾಮಿ

ಕಾಂಗ್ರೆಸ್‌ ಹೋರಾಡುತ್ತಿರುವುದು ಬೆಲೆ ಇಳಿಸಲೋ, ಪೆಟ್ರೋಲ್‌ ಅನ್ನು GSTಗೆ ಸೇರಿಸಲೋ? –ಹೆಚ್‌ಡಿ ಕುಮಾರಸ್ವಾಮಿ

Please login to join discussion

Recent News

Top Story

Lakshmi Hebbalkar: ವಿಶೇಷ ಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 5, 2025
Top Story

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

by ಪ್ರತಿಧ್ವನಿ
July 5, 2025
Top Story

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

by ಪ್ರತಿಧ್ವನಿ
July 5, 2025
Top Story

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
July 5, 2025
Top Story

Vijay Raghavendra: ಸಿನಿಮಾ ವಿಭಾಗದಲ್ಲಿ ಪ್ರಕಟಿಸಲು ಕೋರಿಜುಲೈ 25ಕ್ಕೆ ‘ಸ್ವಪ್ನಮಂಟಪ’ ಬಿಡುಗಡೆ

by ಪ್ರತಿಧ್ವನಿ
July 5, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Lakshmi Hebbalkar: ವಿಶೇಷ ಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 5, 2025

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

July 5, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada