ಕಳೆದ ಕೆಲವು ದಿನಗಳಿಂದ ಅರಣ್ಯ ಇಲಾಖೆ ಹಾಗೂ ಸಾರ್ವಜನಿಕರ ನಿದ್ದೆಗೆಡ್ಡಿಸಿದ ಚಿರತೆಯನ್ನು ಅರಣ್ಯ ಇಲಾಖೆ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ.
ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕಿನ ಉಕ್ಕಲಗೆರೆ ಗ್ರಾಮದಲ್ಲಿ ಇರಿಸಿದ್ದ ಬೋನಿಗೆ ಚಿರತೆ ಸೆರೆ ಸಿಕ್ಕಿದ್ದು ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.
ಪ್ರತಿನಿತ್ಯ ಮುಷ್ಯರು, ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿದ್ದ ಚಿರತೆ. ಅರಣ್ಯ ಇಲಾಖೆ ಇರಿಸಿದ್ದ ಕರು ತಿನ್ನಲು ಬಂದು ಚಿರತೆ ಸೆರೆಯಾಗಿದೆ.
ಇನ್ನು ಚಿರತೆ ಸೆರೆಸಿಕ್ಕರು ಸಹ ಅರಣ್ಯ ಇಲಾಖೆ ಸಾವಜನಿಕರಿಗೆ ತೋರಿಸದ ಹಿನ್ನಲೆ ಜನರು ಶಂಕಿಸಿದ್ದಾರೆ ಮತ್ತು ಜನತೆ ಅರಣ್ಯ ಇಲಾಖೆ ವಿರುದ್ದ ತಿರುಗಿ ಬಿದ್ದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಗ್ರಾಮಸ್ಥರು ಅರಣ್ಯ ಇಲಾಖೆಯವರು ಚಿರತೆಯನ್ನ ಸೆರೆಹಿಡಿದಿಲ್ಲ ಎಲ್ಲಿಂದಲೋ ಚಿರತೆಯನ್ನ ತಂದು ಇಲ್ಲಿ ಬಿಟ್ಟಿದ್ದಾರೆ ಜನರ ಕಣ್ಣೋರೆಸುವ ಸಲುವಾಗಿ ಈ ರೀತಿ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ನಿಜವಾಗಿಯೂ ಚಿರತೆ ಸೆರೆ ಹಿಡಿದಿದ್ರೆ ಸಾರ್ವಜನಿಕರಿಗೆ ತೋರಿಸುತ್ತಿದ್ದರು ಚಿರತೆಯನ್ನೇ ಹಿಡಿದಿರುವವರು ಗೌಪ್ಯತೆ ಯಾಕೆ ಮಾಡಬೇಕು ಸೆರೆ ಹಿಡಿರುವ ಚಿರತೆಯನ್ನ ನೋಡಲೇಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.
ಗ್ರಾಮಸ್ಥರ ಒತ್ತಾಯದ ಮೇರೆಗೆ ಸೆರೆ ಹಿಡಿದ ಚಿರತೆಯನ್ನ ಅಧಿಕಾರಿಳು ಜನತೆಗೆ ತೋರಿಸಿದ್ದಾರೆ.