
ನಾಳೆ ಬೆಳಗಿನ ಜಾವ 3.45 ಗಂಟೆಗೆ ಬೆಂಗಳೂರು ಏರ್ಪೋರ್ಟ್ಗೆ ಆಗಮಿಸಲಿದೆ ಶಿವಮೊಗ್ಗದ ಮಂಜುನಾಥ್ ರಾವ್ ಮೃತದೇಹ. ಈಗಾಗಲೇ ಮೃತದೇಹದ ಜೊತೆ ಬರಲು ಬೆಂಗಳೂರಿಗೆ ಆಗಮಿಸಿರೋ ಕುಟುಂಬಸ್ಥರು ಮತ್ತು ಶಿವಮೊಗ್ಗ ಎಡಿಸಿ ಸಿದ್ಧಲಿಂಗ ರೆಡ್ಡಿ ಮಾಹಿತಿ ನೀಡಿದ್ದು, ಏರ್ಪೋರ್ಟ್ನಲ್ಲಿ ಪ್ರಕ್ರಿಯೆ ಮುಗಿದ ನಂತರ ಆ್ಯಂಬುಲೇನ್ಸ್ ಮೂಲಕ ಶಿವಮೊಗ್ಗಕ್ಕೆ ಮೃತದೇಹ ರವಾನೆ ಮಾಡಲಾಗುತ್ತದೆ. ಎಸ್ಕಾರ್ಟ್ ಭದ್ರತೆಯಲ್ಲಿ ಮಂಜುನಾಥ್ ಪಾರ್ಥಿವ ಶರೀರ ರವಾನೆ ಮಾಡಲಾಗುತ್ತದೆ.

ಬೆಂಗಳೂರು, ತುಮಕೂರು ಚಿತ್ರದುರ್ಗ, ಚನ್ನಗಿರಿ ಮೂಲಕ ಶಿವಮೊಗ್ಗ ಆಗಮಿಸಲಿರುವ ಮೃತದೇಹ ಬೆಳಿಗ್ಗೆ 8 ಗಂಟೆಗೆ ಶಿವಮೊಗ್ಗದ ವಿಜಯನಗರ ಬಡಾವಣೆಯ ಮನೆಗೆ ಆಗಮಿಸುವ ಸಾಧ್ಯತೆ ಇದ್ದು, ಶಿವಮೊಗ್ಗ ನಗರಕ್ಕೆ ಆಗಮಿಸುತಿದ್ದಂತೆ ಹಿಂದೂ ಕಾರ್ಯಕರ್ತರು ಬೈಕ್ ರ್ಯಾಲಿ ಮೂಲಕ ಮನೆಗೆ ಮೃತದೇಹ ಬರಮಾಡಿಕೊಳ್ಳಲಿದ್ದಾರೆ. ಮಧ್ಯಾಹ್ನ 12-30 ರಿಂದ 1 ಗಂಟೆ ತನಕ ಮಂಜುನಾಥ್ ರಾವ್ ಮನೆ ಮುಂದೆ ಅಂತಿಮ ದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಂಜುನಾಥ್ ಮನೆ ಮುಂದೆ ಬ್ಯಾರಿಕೇಡ್ ಹಾಕಿ ಅಂತಿಮ ದರ್ಶನಕ್ಕೆ ಜಿಲ್ಲಾಡಳಿತ ಸಿದ್ಧತೆ ಮಾಡಿದೆ. ಬ್ಯಾರಿಕೇಟ್ ಮೂಲಕ ಮಂಜುನಾಥ್ ಅಂತಿಮ ದರ್ಶನಕ್ಕೆ ಸಿದ್ದತೆ ನಡೆದಿದೆ.

ವಿವಿಐಪಿಗಳಿಗೆ ಪ್ರತ್ಯೇಕವಾಗಿ ಆಗಮಿಸಲು ವ್ಯವಸ್ಥೆ ಮಾಡಿದೆ ಜಿಲ್ಲಾಡಳಿತ ಮತ್ತು ಪೊಲೀಸರು. ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಸಲು ಕುಟುಂಭಸ್ಥರು ನಿರ್ಧಾರ ಮಾಡಿದ್ದಾರೆ. ಗುಂಡ ಭಟ್ಟರ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ವಿಧಿವಿಧಾನ ನಡೆಯಲಿದೆ ಎನ್ನಲಾಗಿದೆ. ಅದಕ್ಕೂ ಮೊದಲು ಅಂತಿಮ ದರ್ಶನ ಪಡೆದ ನಂತರ ಶಿವಮೊಗ್ಗದ ಪ್ರಮುಖ ಬೀದಿಗಳಲ್ಲಿ ಪಾರ್ಥಿವ ಶರೀರ ಮೆರವಣಿಗೆ ಮಾಡಲಾಗುತ್ತದೆ. ಮೆರವಣಿಗೆ ಸಂದರ್ಭದಲ್ಲಿ ಮಧ್ಯಾಹ್ನದವರೆಗೂ ಶಿವಮೊಗ್ಗದಿಂದ ಸ್ವಯಂ ಪ್ರೇರಿತ ಬಂದ್ಗೆ ಕರೆ ನೀಡಲಾಗಿದೆ. ಮೆರವಣಿಗೆ ನಂತರ ತುಂಗಾ ನದಿ ತಟದಲ್ಲಿರುವ ರೋಟರಿ ಚಿತಗಾರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

ಈಗಾಗಲೇ ಶ್ರೀನಗರದಿಂದ ದೆಹಲಿಗೆ ತಲುಪಿರುವ ಮೃತದೇಹ ಅಲ್ಲಿಂದ ಬೆಂಗಳೂರಿಗೆ ಬೆಳಗ್ಗೆ ಮುಂಜಾನೆ 3.45ಕ್ಕೆ ಮೃತದೇಹ ಬರಲಿದೆ. ದೆಹಲಿ ಏರ್ಪೋರ್ಟ್ನಿಂದ ಮಧ್ಯರಾತ್ರಿ 1 ಗಂಟೆಗೆ ಹೊರಟು, ಬೆಂಗಳೂರು ಏರ್ಪೋರ್ಟ್ಗೆ 3.45 ಕ್ಕೆ ಮೃತದೇಹಗಳು ತಲುಪಲಿವೆ. 6E – 3101 ವಿಮಾನದ ಮೂಲಕ ಆಗಮಿಸಲಿದೆ ಎಂದು ಸಂಸದ ತೇಜಸ್ವಿ ಸೂರ್ಯರಿಂದ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.






