ದೇಶದಲ್ಲಿ ದಿನದಿಂದ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿದ್ದು ಈ ಮಧ್ಯೆ ಐಪಿಎಲ್ಗೂ ಮಾಹಾಮಾರಿ ಕಾಡಲು ಶುರು ಮಾಡಿದೆ. ಈ ಹಿಂದೆ ದೆಹಲಿ ತಂಡದ ಫಿಸಿಯೋ ಹಾಗೂ ತಂಡದ ಆಟಗಾರ ಮಿಚೆಲ್ ಮಾರ್ಷ್ಗೆ ಕೋವಿಡ್ ಸೋಂಕು ದೃಢಪಟ್ಟಿತ್ತು. ಇಂದು ವಿಕೆಟ್ ಕೀಪರ್ ಬ್ಯಾಟ್ಸ್ಮ್ಯಾನ್ ಟಿಮ್ ಸ್ಟೀಫರ್ಟ್ಗೆ ಸೋಂಕು ದೃಢಪಟ್ಟಿದೆ.
ಸುದ್ದಿಮೂಲಗಳ ಪ್ರಕಾರ ಬುಧವಾರ ಬೆಳ್ಳಗ್ಗೆ ಎರಡನೇ ಸುತ್ತಿನ ಕೋವಿಡ್ ಪರೀಕ್ಷೆ ನಡೆಸಿದಾಗ ಸೋಂಕು ದೃಢಪಟ್ಟಿದೆ. ಕೋವಿಡ್ ನಡುವೆಯೂ ಆಟವನ್ನು ನಡೆಸಲು ಮುಂದಾದರೆ ಕನಿಷ್ಠ 12 ಆಟಗಾರರನ್ನು ಒಳಗೊಂಡಿರಬೇಕಾಗುತ್ತದೆ. 7 ಭಾರತೀಯರು ಹಾಗೂ 5 ವಿದೇಶಿ ಆಟಗಾರರು ಒಳಗೊಂಡಿರುತ್ತಾರೆ.
ದೆಹಲಿ ಕ್ಯಾಂಪ್ನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿದ್ದು ಇಂದಿನ ಪಂದ್ಯ ಅನಿಶ್ಚಿತತ್ತೆಯಲ್ಲಿ ಕೂಡಿದೆ.
