
ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ತಿರುಪತಿ ದೇವಸ್ಥಾನದ ಲಡ್ಡು ವಿವಾದದ ಕುರಿತು ಆರಂಭಿಸಿದ ‘ಪ್ರಶ್ಚಿತ್ ದೀಕ್ಷಾ’ ಸಂದರ್ಭದಲ್ಲಿ ತಿರುಮಲ ಬೆಟ್ಟವನ್ನು ಹತ್ತುವಾಗ ಅಸ್ವಸ್ಥರಾಗಿದ್ದಾರೆ.ಪವರ್ ಸ್ಟಾರ್, ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮಂಗಳವಾರ ಸಂಜೆ ಬೆನ್ನು ಮತ್ತು ಕಾಲು ನೋವಿನಿಂದ ಅಸ್ವಸ್ಥಗೊಂಡಿದ್ದಾರೆ.

ಅಕ್ಟೋಬರ್ 1ರಂದು ತಿರುಮಲ ಬೆಟ್ಟ ಹತ್ತುವಾಗಪ್ರಶ್ಚಿತ್ ದೀಕ್ಷಾ ಸಮಯದಲ್ಲಿ ಅವರು ಅಸ್ವಸ್ಥರಾಗಿದ್ದಾರೆ.
ತಿರುಪತಿ ತಿರುಮಲ ಬೆಟ್ಟ ಹತ್ತುವಾಗ ಪವನ್ ಕಲ್ಯಾಣ್ ತೀವ್ರ ಬೆನ್ನು ಮತ್ತು ಕಾಲು ನೋವನ್ನು ಅನುಭವಿಸಿದ್ದಾರೆ.ಅಲಿಪಿರಿ ಪಡಲ ಮಂಟಪದಲ್ಲಿ ಪವನ್ ಕಲ್ಯಾಣ್ ಕಾಲ್ನಡಿಗೆಯಲ್ಲಿ ಬೆಟ್ಟ ಹತ್ತಲು ಶುರು ಮಾಡಿದ್ರು. ಅರ್ಧಕ್ಕೆ ತೆರಳುತ್ತಿದ್ದಂತೆ ಬಹಳ ಆಯಾಸಗೊಂಡು ಕುಳಿತುಬಿಟ್ಟಿದ್ದಾರೆ. ನಂತರ ಸಾವರಿಸಿಕೊಂಡು ಪವರ್ ಸ್ಟಾರ್ ಮುಂದುವರೆದಿದ್ದಾರೆ.