ಡಿಸಿಎಂ ಡಿ.ಕೆ ಶಿವಕುಮಾರ್‌ರನ್ನ (Dcm dk shivakumar) ಆರೋಪಿ ದರ್ಶನ್ ಪತ್ನಿ ವಿಜಯಲಕ್ಷ್ಮೀ darshan’s wife vijayalakshmi) ಭೇಟಿಯಾಗಿದ್ದಾರೆ. ಸದಾಶಿವನಗರದಲ್ಲಿರೋ ಡಿಕೆಶಿ ನಿಸಾವಸ್ಥೆ ವಿಜಯಲಕ್ಷ್ಮೀ ಹಾಗೂ ಸಹೋದರ ದಿನಕರ್ ತೂಗುದೀಪ (Dinakar toogudeep) ಆಗಮಿಸಿದ್ರು. ವಿಜಯಲಕ್ಷ್ಮಿ, ದಿನಕರ್ ಬೆನ್ನಲ್ಲೇ ನಿರ್ದೇಶಕ ಪ್ರೇಮ್ (Jogi prem) ಸಹ ಡಿಕೆಶಿ ನಿವಾಸಕ್ಕೆ ಆಗಮಿಸಿದ್ರು. ಸುಮಾರು ಒಂದು ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ.

ವಿಜಯಲಕ್ಷ್ಮಿ ಮಗನನ್ನು ಮತ್ತೆ ನಮ್ಮ ಸ್ಕೂಲ್‌ಗೆ ಸೇರಿಸುವ ಬಗ್ಗೆ ಮನವಿ ಮಾಡಲು ತಮ್ಮ ನಿವಾಸಕ್ಕೆ ಬಂದಿದ್ರು ಎಂದು ಈ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ. ವಿಜಯಲಕ್ಷ್ಮಿ ಭೇಟಿ ಬಳಿಕ ಮಾತನಾಡಿ, ಹಿಂದೆ ಅವರ ಮಗನಿಗೆ ನಮ್ಮ ಸ್ಕೂಲ್‌ನಲ್ಲಿ ಸೀಟ್ ಕೊಟ್ಟಿದ್ದೆ. ಬಳಿಕ ವಿಜಯಲಕ್ಷ್ಮಿ ಮಗನನ್ನು ಬೇರೆ ಸ್ಕೂಲ್‌ಗೆ ಸೇರಿಸಿದ್ರು. ಈಗ ಮತ್ತೆ ಸ್ಕೂಲ್‌ನಲ್ಲಿ ಸೇರಿಸಿಕೊಳ್ಳಲು ಮನವಿ ಮಾಡಿಕೊಂಡಿದ್ದಾರೆ. ಇಷ್ಟು ಬಿಟ್ರೆ ದರ್ಶನ್ ಕೇಸ್ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ಬಳಿಕ ನಿರ್ದೇಶಕ ಪ್ರೇಮ್ ಮಾತ್ನಾಡಿದ್ದು, ವಿನೀಶ್ (Vineesh) ಈಗ ಬೇರೆ ಸ್ಕೂಲ್ ಶಿಫ್ಟ್ ಆಗಿದ್ದಾನೆ ಆಗಾಗಿ ಭೇಟಿ ಮಾಡಿ ಮಾತು ಕತೆ ನಡೆಸಿದ್ದೇವೆ ಎಂದ್ರು. ನಾನು ಆಗಾಗ ಡಿಸಿಎಂನಾ ಭೇಟಿ ಮಾಡೊಕೆ ಬರ್ತಾ ಇರ್ತೀನಿ. ದರ್ಶನ್ ನಾನು ಒಳ್ಳೆಯ ಸ್ನೇಹಿತರು. ಆದ್ರೆ ನಾನು ದರ್ಶನ್ ವಿಚಾರ ಮಾತನಾಡೋಕೆ ಬಂದಿರಲಿಲ್ಲ ಎಂದು ತಿಳಿಸಿದ್ರು