ಡಿಸಿಎಂ ಡಿ.ಕೆ ಶಿವಕುಮಾರ್ ಈಗ ದೇಶದಾದ್ಯಂತ ಕಾಂಗ್ರೆಸ್ ಪಕ್ಷದ ಫೈಯರ್ ಬ್ರಾಂಡ್ ಆಗಿ ಗುರುತಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಮುಂದಿನ ಸಿಎಂ ಆಕಾಂಕ್ಷಿಯು ಆಗಿರುವ ಡಿಕೆ ಶಿವಕುಮಾರ್ ಈಗ ಜನಸಾಮಾನ್ಯರ ನಡುವೆ ಬೆರೆಯುವ ಮೂಲಕ ಜನನಾಯಕನಾಗುವತ್ತ ಹೆಜ್ಜೆಯನ್ನು ಕೂಡ ಹಿಡಿದಿದ್ದಾರೆ ಹೀಗಾಗಿ ಹಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದರ ಜೊತೆಗೆ ಜನಸಾಮಾನ್ಯರ ಜೊತೆ ಸಾಮಾನ್ಯನಾಗಿ ಬೆರೆಯುವ ಕೆಲಸಕ್ಕೆ ಕೂಡ ಮುಂದಾಗುತ್ತಿದ್ದಾರೆ ಹೀಗಾಗಿ ದಿನದಿಂದ ದಿನಕ್ಕೆ ಡಿ.ಕೆ ಶಿವಕುಮಾರ್ ಅವರ ವರ್ಚಸ್ಸು ಹೆಚ್ಚಾಗುತ್ತಿದೆ
ಇದಕ್ಕೆ ಪೂರಕ ಎಂಬಂತೆ ಇಂದು ನಗರ ಪ್ರದರ್ಶನ ಮಾಡಿದ್ದ ಡಿ.ಕೆ ಶಿವಕುಮಾರ್ ಇಂದಿನ ಕ್ಯಾಂಟೀನ್ಗೆ ಕೂಡ ಭೇಟಿ ನೀಡಿದ್ದಾರೆ. ಈ ಕುರಿತು ಟ್ವಿಟರ್ ನಲ್ಲಿ ಬರೆದುಕೊಂಡಿರುವ ಡಿಸಿಎಂ ಈ ಯೋಜನೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಅವರು ” ಇಂದು ನಗರ ಪ್ರದಕ್ಷಿಣೆ ನಿಮಿತ್ತ ಮಾಗಡಿ ರಸ್ತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪರಿಶೀಲನೆ ನಡೆಸುತ್ತಿದ್ದು ಇದಕ್ಕೂ ಮುನ್ನ ಚೊಕ್ಕಸಂದ್ರದ ಇಂದಿರಾ ಕ್ಯಾಂಟೀನ್ ನಲ್ಲಿ ಉಪಹಾರ ಸೇವಿಸಿದೆ ಲಕ್ಷಾಂತರ ಬಡವರ ಹಸಿವು ನೀಗಿಸುತ್ತಿರುವ ಇಂದಿರಾ ಕ್ಯಾಂಟೀನ್ ಕಾಂಗ್ರೆಸ್ ಪಕ್ಷದ ಮಹತ್ತರ ಕೊಡುಗೆ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ” ಇಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ
ಡಿಕೆ ಶಿವಕುಮಾರ್ ಅವರ ಈ ಪೋಸ್ಟಿಗೆ ಸಾವಿರಾರು ಮಂದಿ ಕಾಮೆಂಟ್ ಮಾಡಿದ್ದು ಇಂದಿರಾ ಕ್ಯಾಂಟೀನ್ ಇನ್ನಷ್ಟು ಉನ್ನತೀಕರಣಗೊಳ್ಳಲಿ ಇನ್ನಷ್ಟು ಜಿಲ್ಲೆಗಳಿಗೆ ವಿಸ್ತರಿಸಿಕೊಳ್ಳಲಿ ಎಂದು ಆಶಯವನ್ನು ವ್ಯಕ್ತಪಡಿಸಿದ್ದಾರೆ.