ರಾಜ್ಯದಲ್ಲಿ ಉಪಚುನಾವಣೆ (Bypoll) ಮುಗಿಯುತ್ತಿದ್ದಂತೆ, ಡಿಸಿಎಂ ಡಿಕೆ ಶಿವಕುಮಾರ್ (Dcm Dk Shivakumar) ಹಾಗೂ ಸಿಎಂ ಸಿದ್ದರಾಮಯ್ಯ (Cm siddaramaiah) ಬಿಜೆಪಿ ವಿರುದ್ಧ ಹೊಸ ಬಾಂಬ್ ಸಿಡಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿಯವರು ಸರ್ಕಾರ ಕೆಡವಲು ಕೋಟಿ ಕೋಟಿ ಸುರಿಯಲು ಸಜ್ಜಾಗಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ಡಿಸಿಎಂ ಡಿಕೆಶಿ ನಮ್ಮ ಶಾಸಕರಿಗೆ ಬಿಜೆಪಿ (BJP) ಅವರು ಕೋಟ್ಯಂತರ ರೂಪಾಯಿ ಆಫರ್ ಕೊಡ್ತಿರೋದು ನಿಜ ಎಂದು ಹೇಳುವ ಮೂಲಕ, ಸಿಎಂ ಸಿದ್ದರಾಮಯ್ಯ ಆರೋಪವನ್ನು ನಿಜ ಎಂದು ಸಮರ್ಥಿಸಿಕೊಂಡಿದ್ದಾರೆ. ಬಿಜೆಪಿಯವರು ಆಪರೇಷನ್ ಕಮಲ (Operation lotus) ಮೂಲಕ ಸರ್ಕಾರವನ್ನು ಬೀಳಿಸಲು ಬಿಜೆಪಿ ಪ್ರಯತ್ನಿಸಿದೆ ಎಂದಿದ್ದಾರೆ.
ಆದ್ರೆ ಯಾವೆಲ್ಲ ಶಾಸಕರಿಗೆ ಈ ರೀತಿ ಕರೆ ಬಂದಿದ್ಯೋ, ಆ ಶಾಸಕರು ಮುಖ್ಯಮಂತ್ರಿಗಳ ಗಮನಕ್ಕೆ ಈ ವಿಚಾರ ತಂದಿದ್ದಾರೆ. ಇನ್ನು ಮಿಕ್ಕ ವಿಚಾರ ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ ಎಂದು ಹೇಳಿದ್ದಾರೆ.