ಯಾವ ಸ್ಥಾನವನ್ನೂ ಹುಡುಕಿಕೊಂಡು ಹೋಗೋ ಅವಶ್ಯಕತೆ ನನಗಿಲ್ಲ ಅಂತ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ ಅನ್ನೋ ಗುಣಧರನಂದಿ ಮಹಾರಾಜರ ಹೇಳಿಕೆಗೆ ಡಿಕೆಶಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ನಮ್ಮ ಧರ್ಮಗುರುಗಳು ಆಶೀರ್ವಾದ ಮಾಡ್ತಾರೆ. ಅದನ್ನು ನಾವು ಕಂಟ್ರೋಲ್ ಮಾಡೋಕೆ ಆಗಲ್ಲ.ಧರ್ಮಗುರುಗಳ ಆಶೀರ್ವಾದ ಬೇಡ ಅನ್ನೋಕೆ ಆಗುತ್ತಾ..? ಇದು ಧರ್ಮಗುರುಗಳ ನಿಶ್ಚಯ.ಆದರೆ ನಮಗೆ ಏನೇ ಇದ್ದರೂ ಪಕ್ಷ ಮುಖ್ಯ ಎಂದಿದ್ದಾರೆ.
ನಮ್ಮ ಕಾಂಗ್ರೆಸ್ ಪಕ್ಷ ಮಾಡೋ ತೀರ್ಮಾನಕ್ಕೆ ತಕ್ಕಂತೆ ನಾವು ಕೆಲಸ ಮಾಡ್ತೇವೆ.ಯಾವುದೇ ಸ್ಥಾನ ಹುಡುಕಿಕೊಂಡು ಹೋಗೋ ಅವಶ್ಯಕತೆ ಇಲ್ಲ,ನಮ್ಮ ಪಕ್ಷಕ್ಕೆ, ಸರ್ಕಾರಕ್ಕೆ ಏನು ಕೆಲಸ ಮಾಡಬೇಕೊ ಅದನ್ನು ಮಾಡ್ತೇವೆ.ನನಗೇನೂ ಅರ್ಜೆಂಟ್ ಇಲ್ಲ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.