ಜಾತಿ ಜನಗಣತಿ ವರದಿಯ (Caste census) ಜಾರಿ ಕುರಿತು ಒಕ್ಕಲಿಗ (vokkaliga) ಹಾಗೂ ಲಿಂಗಾಯತ (Lingayat) ಸಮುದಾಯಗಳು ಅಸಮಾಧಾನಗೊಂಡಿದ್ದು, ಸಮುದಾಯದ ಪ್ರಮುಖರ ನಿಲುವೇನು ಎಂಬ ಪ್ರಶ್ನೆ ಜನ ಕೇಳುತ್ತಿದ್ದಾರೆ.ಈ ಮಧ್ಯೆ ಒಕ್ಕಲಿಗ ಸಮುದಾಯಕ್ಕೆ ಡಿಸಿಎಂ ಡಿಕೆ ಶಿವಕುಮಾರ್ (Dk Shivakumar) ಪರೋಕ್ಷ ಸಂದೇಶ ರವಾನೆ ಮಾಡಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್, ತಾವು ಸರ್ಕಾರದ ಭಾಗವಾಗಿದ್ರೂ ಸಹ ಸಮುದಾಯದ ಹಿತಕಾಯಲು ಸಿದ್ಧ ಎಂಬ ಸಂದೇಶ ರವಾನೆ ಮಾಡಿದ್ದಾರೆ.ಸಮುದಾಯದ ಶಾಸಕರು, ಸಚಿವರ ಸಭೆಯ ಮೂಲಕ ಶಿವಕುಮಾರ್ ಈ ಸಂದೇಶ ರವಾನೆ ಮಾಡಿದ್ದಾರೆ.

ರಾಜ್ಯದಲ್ಲಿ ಎರಡನೇ ಪ್ರಬಲ ಸಮುದಾಯವಾಗಿರುವ ಒಕ್ಕಲಿಗ ಸಮುದಾಯದ ಹಿತ ಕಾಯಲು ಸಿದ್ದ ಎಂಬ ಸಂದೇಶವನ್ನು ಡಿಸಿಎಂ ಡಿಕೆ ಶಿವಕುಮಾರ್ ರವಾನೆ ಮಾಡಿದ್ದಾರೆ. ಇಂದು ಸಮುದಾಯದ ಸ್ವಾಮೀಜಿ ಭೇಟಿಯಾಗಿ ಡಿಕೆಶಿ ಸುದೀರ್ಘ ಸಮಾಲೋಚನೆ ನಡೆಸಿದ್ದು ನಿರ್ಮಲಾನಂದನಾಥ ಶ್ರೀಗಳ ಸಲಹೆ ಪಡೆದಿದ್ದಾರೆ. ಈ ವೇಳೆ ಮುದಾಯದ ಹಿತ ಕಾಯುವಂತೆಯೂ ಶ್ರೀಗಳು ಡಿಕೆಶಿ ಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಇನ್ನು ಈ ಜಾತಿಗಣತಿಯ ಮೂಲಕ ತಮ್ಮ ಸಮುದಾಯದ ಮರಣಶಾಸನ ಬರೆಯಲು ಹೊರಟಿದ್ದಾರೆ ಎಂಬ ಟೀಕೆಗೆ ಡಿಕೆಶಿ ಪ್ರತಿಕ್ರಿಯಿಸಿದ್ದು ಸಮುದಾಯದ ಹಿತ ಕಾಯುವ ಜವಾಬ್ದಾರಿ ನಮ್ಮ ಮೇಲಿದೆ. ಸಮುದಾಯದ ಸಚಿವರು, ಶಾಸಕರ ಸಭೆಯ ಮೂಲಕ ಸಮುದಾಯದ ಮುಖಂಡರ ಭಾವನೆಗಳಿಗೆ ಸ್ಪಂದನೆ ಮಾಡಬೇಕಾಗಿದೆ ಎಂದಿದ್ದಾರೆ.