ಕ್ರಿಕೆಟರ್ ಡೇವಿಡ್ ವಾರ್ನರ್ಗೆ ಭಾರತದ ಜೊತೆ ಹಾಗೂ ಇಲ್ಲಿನ ಚಿತ್ರರಂಗದ ಜೊತೆ ಒಳ್ಳೆಯ ನಂಟು ಬೆಳೆದಿದೆ. ಅವರು ಐಪಿಲ್ನಲ್ಲಿ ಈ ಮೊದಲು ಹೈದರಾಬಾದ್ ತಂಡವನ್ನು ಪ್ರತಿನಿಧಿಸುತ್ತಿದ್ದರು.

ಆ ಸಂದರ್ಭದಲ್ಲಿ ಟಾಲಿವುಡ್ (Tollywood)ಜೊತೆ ಅವರಿಗೆ ಒಳ್ಳೆಯ ನಂಟು ಬೆಳೆದಿದೆ. ಈ ಕಾರಣದಿಂದಲೇ ಅವರು ಎಸ್ಎಸ್ ರಾಜಮೌಳಿ (SS Rajamouli) ಜೊತೆ ಕೆಲವು ಜಾಹೀರಾತುಗಳಲ್ಲಿ ನಟಿಸಿದ್ದರು. ಈ ಜಾಹೀರಾತು ಸಖತ್ ವೈರಲ್ ಆಗಿತ್ತು. ಈಗ ಅವರು ‘ಪುಷ್ಪ 2’(Pushpa-2)ಚಿತ್ರದ ಟ್ರೇಲರ್ ನೋಡಿ ಮೆಚ್ಚಿಕೊಂಡಿದ್ದಾರೆ.

ಈ ಚಿತ್ರದ ಟ್ರೇಲರ್ ಲಾಂಚ್ ಈವೆಂಟ್ಗೆ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದರು. ಇದು ‘ಪುಷ್ಪ 2’ ಚಿತ್ರದ ಬಗ್ಗೆ ಇರೋ ಕ್ರೇಜ್ಗೆ ಉತ್ತಮ ಉದಾಹರಣೆ ಆಗಿದೆ. ಸಖತ್ ಮಾಸ್ ಆಗಿರೋ ‘ಪುಷ್ಪ 2’ ಟ್ರೇಲರ್ ಗಮನ ಸೆಳೆಯಿತು. ಈಗ ಡೇವಿಡ್ ವಾರ್ನರ್ ಕೂಡ ಟ್ರೇಲರ್ ನೋಡಿ ಮೆಚ್ಚಿಕೊಂಡಿದ್ದಾರೆ.

‘ಪುಷ್ಪ 2’ ಟ್ರೇಲರ್ ನೋಡಿದ ಬಳಿಕ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿರುವ ಡೇವಿಡ್ ವಾರ್ನರ್, ಮೆಚ್ಚುಗೆ ಸೂಚಿಸಿದ್ದಾರೆ. ‘ಪುಷ್ಪ 2’ ಪೋಸ್ಟರ್ ಹಂಚಿಕೊಂಡಿರುವ ಅವರು, ‘ಉತ್ತಮ ಕೆಲಸ ಸಹೋದರ’ ಎಂದು ಬರೆದಿದ್ದಾರೆ. ಇದನ್ನು ಅಲ್ಲು ಅರ್ಜುನ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಾ ಇದ್ದಾರೆ.



