ಜಪಾನ್ ಮೂಲದ ನಿಸ್ಸಾನ್ ಕಂಪನಿಯ ಜನಪ್ರಿಯ ಕಾರಾದ ಡಾಟ್ಸನ್ ಕಾರುಗಳ ಉತ್ಪಾದನೆಯನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿದೆ.
ಹೌದು, ಮಧ್ಯಮ ವರ್ಗದ ಜನರಿಗೆ ತಮ್ಮ ಬಜೆಟ್ ಒಳಗೆ ಸಿಗುತ್ತಿದ್ದ ಹೆಚ್ಚು ಆಕರ್ಷಿಸುತ್ತಿದ್ದ ಡಟ್ಸನ್ ಬ್ರಾಂಡ್ ವಾಹನಗಳ ಉತ್ಪಾದನೆಯನ್ನು ಕೊನೆಗೊಳಿಸುತ್ತಿದೆ ಎಂದು ಕಂಪನಿ ಸೋಮವಾರ ತಿಳಿಸಿದೆ. ಒಂದು ದಶಕದ ಕಾಲ ಡಟ್ಸನ್ ಬ್ರಾಂಡ್ ವಾಹನಗಳ ಉತ್ಪಾದನೆಯನ್ನು ಕೊನೆಗೊಳಿಸುತ್ತಿದೆ ಎಂದು ಕಂಪನಿ ಸೋಮವಾರ ತಿಳಿಸಿದೆ.
ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಡಾಟ್ಸನ್ ಬ್ರಾಂಡ್ ಕಾರು ಮಾರಟ ಹಂತ ಹಂತವಾಗಿ ಕುಸಿಯುತ್ತಿರುವ ಕಾರಣ ನಾವು ಈ ತೀರ್ಮಾನ ಮಾಡಿದ್ದೇವೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
2016ರಲ್ಲಿ ಡಾಟ್ಸನ್ನ 87,300 ಕಾರುಗಳು ಮಾರಾಟವಾಗಿದ್ದವು. ಅದಕ್ಕೆ ಹೋಲಿಸಿದರೆ 2021ರಲ್ಲಿ ಈ ಕಾರುಗಳ ಮಾರಾಟ ಶೇ. 90ರಷ್ಟು ಇಳಿಕೆಯಾಗಿದ್ದು ಕೇವಲ 6,400 ಕಾರುಗಳು ಮಾರಾಟವಾಗಿವೆ ಎಂದು ಕಂಪನಿ ತಿಳಿಸಿದೆ.
“ಚೆನ್ನೈ ಪ್ಲಾಂಟ್ನಲ್ಲಿ Datsun redi-GO ಉತ್ಪಾದನೆಯನ್ನು ಸ್ಥಗಿತಗೊಳಿಸುವುದಾಗಿ ” ಹೇಳಿದೆ, ಈಗಾಗಲೇ ಉತ್ಪಾದೆನೆ ಮಾಡಿದ ಕಾರುಗಳನ್ನು ಮಾರಾಟ ಮಾಡುವುದನ್ನು ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.