ಇದೇ ವರ್ಷದಲ್ಲಿಯೇ ಪುರುಷ ಟಿ20 ಹಾಗೂ ಮಾಹಿಳಾ ಟಿ20 ನಡೆಯಲಿದ್ದು, ಈಗಾಗಲೇ ಪುರುಷ ವಿಶ್ವಕಪ್ ಗೆ ದಿನಾಂಕ ಪ್ರಕಟಿಸಲಾಗಿದೆ. ಸದ್ಯ ಐಸಿಸಿ ಮಹಿಳಾ ಮಹಿಳಾ ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟಿಸಿದೆ.

ಈ ಬಾರಿಯ ವನಿತೆಯರ ವಿಶ್ವಕಪ್ ಗೆ ಬಾಂಗ್ಲಾದೇಶ ಆತಿಥ್ಯ ವಹಿಸಿದ್ದು, ಅಕ್ಟೋಬರ್ 3 ರಿಂದ ಟೂರ್ನಿ ಆರಂಭವಾಗಲಿದೆ. ತಂಡಗಳನ್ನು ಎರಡು ಗುಂಪುಗಳಾಗಿ ಮಾಡಲಾಗಿದೆ. ಎ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಸ್ಥಾನ ಪಡೆದಿವೆ. ಇನ್ನೂ ಬಿ ಗುಂಪಿನಲ್ಲಿ ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳು ಸ್ಥಾನ ಪಡೆದಿವೆ.

ಮಹಿಳೆಯರ ಟಿ20 ವಿಶ್ವಕಪ್ ಈ ವರ್ಷದ ಅಕ್ಟೋಬರ್ 3ರಿಂದ ಆರಂಭವಾಗಲಿವೆ. ಮೊದಲ ಪಂದ್ಯ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವೆ ಢಾಕಾದಲ್ಲಿ ನಡೆಯಲಿದೆ. ಲೀಗ್ ಹಂತದಲ್ಲಿ ಪ್ರತಿಯೊಂದು ತಂಡ ನಾಲ್ಕು ಪಂದ್ಯಗಳನ್ನು ಆಡಲಿವೆ. ಈ ಟೂರ್ನಿಯ ಕೊನೆಯ ಪಂದ್ಯ ಅಕ್ಟೋಬರ್ 20 ರಂದು ನಡೆಯಲಿದೆ.

ಈ ವಿಶ್ವಕಪ್ ನಲ್ಲಿ ಭಾರತ ಮಹಿಳಾ ತಂಡವು ಅಕ್ಟೋಬರ್ 4 ರಂದು ತನ್ನ ಅಭಿಯಾನ ಆರಂಭಿಸಲಿದೆ. ಟೀಂ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಎರಡನೇ ಪಂದ್ಯ ಅಕ್ಟೋಬರ್ 6 ರಂದು ಪಾಕಿಸ್ತಾನದ ವಿರುದ್ಧ ನಡೆಯಲಿದೆ. ಭಾರತ ತಂಡವು ಅಕ್ಟೋಬರ್ 9 ರಂದು ಕ್ವಾಲಿಫೈಯರ್ 1 ತಂಡದೊಂದಿಗೆ ಸೆಣಸಾಡಲಿದೆ. ಆ ನಂತರ ಅಕ್ಟೋಬರ್ 13 ರಂದು ಆಸ್ಟ್ರೇಲಿಯಾ ವಿರುದ್ಧ ಪಂದ್ಯ ನಡೆಯಲಿದೆ.