ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ದೊಡ್ಡ ತೇಕಲವಟ್ಟಿ ಗ್ರಾಮದ ಕಂಸಾಗರ ಬೀರಲಿಂಗೇಶ್ವರ ಸ್ವಾಮಿಯ ಹಳೆಯ ದೇವಾಲಯವು ತುಂಬಾ ಶಿಥಿಲಾವಸ್ಥೆಯಲ್ಲಿದ್ದು ಬಿದ್ದು ಹೋಗುವ ಹಂತದಲ್ಲಿದ್ದರಿಂದ ಹೋರಿ ಕುರುಬ ಸಮುದಾಯದವರು 2007ರಲ್ಲಿ ಸಮಾಜದ ಮುಖಂಡರು, ಗ್ರಾಮದ ಮುಖಂಡರು ಹಾಗೂ ಸಮಾಜದ ಧಾರ್ಮಿಕ ಗುರುಗಳು ಸೇರಿ ಹೊಸದಾದ ದೇವಾಲಯಕ್ಕೆ ಅಡಿಪಾಯ ಹಾಕಿ 2015ರಲ್ಲಿ ದೇವಾಲಯವನ್ನ ಲೋಕಾರ್ಪಣೆಗೊಳಿಸಲಾಗಿತ್ತು. ಅಂದಿನಿಂದ 2020ರ ವರೆಗೆ ಧಾರ್ಮಿಕ ವಿಧಿವಿಧಾನ, ಪೂಜಾ ಕೈಂಕರ್ಯಗಳನ್ನ ನೆರವೇರಿಸಿಕೊಂಡು ಬರಲಾಗುತ್ತಿದೆ.
ಹೀಗಿರುವಾಗ 2020ರಲ್ಲಿ ಕೆಲವು ಸ್ಥಳೀಯ ಪಟ್ಟಭದ್ರಾ ಹಿತಾಸಕ್ತಿಗಳು ರಾಜಕೀಯ ಪ್ರೇರಣೆಯಿಂದ ಹೊಸದಾದ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಬದಲು ತಮ್ಮ ಧಾರ್ಮಿಕತೆ ಮೆರೆಯುವ ಬದಲು ಶಿಥಿಲಾವಸ್ಥೆಯಲ್ಲಿದ್ದ ಬಿದ್ದು ಹೋಗುವ ಹಂತ ತಲುಪಿರುವ ಹಳೆಯ ದೇವಾಲಯಕ್ಕೆ ವಿಗ್ರಹ ಹಾಗೂ ಪೂಜಾ ಪರಿಕರಗಳನ್ನ ಸ್ಥಳಾಂತರಿಸುವ ಪ್ರಯತ್ನವನ್ನ ವಿರೋಧಿಸಿ ಹೋರಿ ಕುರುಬ ಸಮುದಾಯದ ಪ್ರಕಾಶ್ ಮತ್ತಿತ್ತರರು ಹೈಕೋರ್ಟ್ ಮೇಟ್ಟಿಲೇರಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಮೂರ್ತಿ ಎಂ.ನಾಗಪ್ರಸನ್ನರವರು ವಿಚಾರಣೆ ನಡೆಸಿ ರಾಜಕೀಯ ಜಗಳದಿಂದ ಪ್ರಕರಣ ನ್ಯಾಯಾಲಯದ ಕದ ತಟ್ಟಿದೆ ತಮ್ಮ ರಾಜಕೀಯ ಹಾಗೂ ಇತರೆ ಅಜೆಂಡಾ ಸಾರ್ವಜನಿಕ ಹಿತಾಸಕಿ, ಭಕ್ತರ ಸುರಕ್ಷತೆ ಹಾಗೂ ನಂಬಿಕೆಗಳನ್ನ ಕಿತ್ತುಕೊಳ್ಳಬಾರದು ಧಕ್ಕೆ ತರುವಂತಹ ಚಿತ್ತಾವಣೆ ಮಾಡಬಾರದೆಂದು ನ್ಯಾಯಾಧೀಶರು ಬೇಸರ ಹೊರಹಾಕಿದ್ದಾರೆ.

ನೂತನವಾಗಿ ನಿರ್ಮಿಸಿರುವ ಶ್ರೀ ಕಂಸಾಗರ ಬೀರಲಿಂಗೇಶ್ವರ ದೇವಾಲಯದಲ್ಲಿ ಹಿಂದಿನಂತೆ ಪೂಜಾ ವಿಧಿವಿಧಾನಗಳನ್ನ ಮುಂದುವರೆಸುವಂತೆ ಮತ್ತು ಯಥಾಸ್ಥಿತಿ ಕಾಪಾಡೊಕೊಳ್ಳುವಂತೆ ನ್ಯಾಯಾಲಯ ಆದೇಶಿಸಿದೆ ಹಾಗೂ ಸರ್ಕಾರಿ ಅಧಿಕಾರಿಗಳು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ, ದೇವಾಲಯದ ವಿಧಿವಿಧಾನಗಳನ್ನು ನಡೆಸಿಕೊಂಡು ಹೋಗಲು ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವಂತೆ ತಾಕೀತು ಮಾಡಿದೆ.
ದೇವರ ಮೇಲೆ ಯಾವುದೇ ಹಕ್ಕನ್ನ ಪ್ರತಿಪಾದಿಸಲು ಸಂಬಂಧಪಟ್ಟವರು ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಬಹುದು. ದಾವೆ ಹೂಡುವವರು ಹೋರಿ ಕುರುಬ ಸಮುದಾಯದೊಂದಿಗೆ ಚರ್ಚಿಸಿ ದೇವರನ್ನು ಇಡಬೇಕಾಗಿರುವ ಸ್ಥಳದ ಕುರಿತು ತೀರ್ಮಾಣ ಕೈಗೊಳ್ಳುವ ಮುನ್ನ ಸಾರ್ವಜನಿಕರ ಸುರಕ್ಷತೆಯನ್ನ ಖಾತರಿ ಪಡಿಸಬೇಕು ಎಂದು ನ್ಯಾಯಾಲಯ ಅರ್ಜಿದಾರರಿಗೆ ನಿರ್ದೇಶಿಸುವ ಮೂಲಕ ಪ್ರಕರಣವನ್ನ 2022 ನವೆಂಬರ್ ನಲ್ಲಿ ಇತ್ಯರ್ಥಗೊಳಿಸಿದೆ.
ಆದರೆ ಮತ್ತೆ ಈ ವಿಷಯವಾಗಿ ತಕರಾರು ತೆಗೆದಿದ್ದು, ಹೋರಿ ಕುರುಬ ಸಮುದಾಯದ ಪ್ರಕಾಶ್ ಮತ್ತಿತ್ತರರು ಮತ್ತೆ ಹೈಕೋರ್ಟ್ ಮೇಟ್ಟಿಲೇರಿದ್ದರು, ಕೋರ್ಟ್ ಮತ್ತೆ ಜಿಲ್ಲಾಡಳಿತಕ್ಕೆ ಹಾಗೂ ಜಿಲ್ಲಾ ಪೊಲೀಸ್ ಕಮಿಷನರ್ ಸೇರಿದಂತೆ ಕಾನೂನು ಕಾಪಾಡಬೇಕಾದ ಪೊಲೀಸ್ ಇಲಾಖೆಗೆ ಈ ವಿಷಯವಾಗಿ ತರಾಟೆ ತೆಗೆದುಕೊಂಡಿದೆ.
ಕಳೆದ ಆದೇಶವನ್ನೇ ಮರು ಉಲ್ಲೇಖಿಸಿದ ಕೋರ್ಟ್, ದೇವಾಲಯದ ಪರಿಪೂರ್ಣ ಇತಿಹಾಸವನ್ನು ಕೋರ್ಟ್ ಗೆ ಈಗಾಗಲೇ ತಿಳಿಸಿದೆ. ಈ ಹಿಂದೆ ದೇವಸ್ಥಾನ ಶಿಥಿಲವಾಗಿದ್ದು, ಹೊಸ ದೇವಸ್ಥಾನ ನಿರ್ಮಿಸಿ ದೇವರ ಪ್ರತಿಷ್ಟಾಪನೆ ಆಗಿದೆ. ಅಲ್ಲಿಗೆ ಸಾವಿರಾರು ಭಕ್ತಾದಿಗಳು ಬರುವ ಕಾರಣ ಭಕ್ತಾದಿಗಳ ಭಾವನೆಗಳಿಗೆ ಧಕ್ಕೆಯಾಗದಂತೆ ಹಾಗೂ ಶಾಂತಿ ಸುವ್ಯವಸ್ಥೆ ಜಿಲ್ಲಾಡಳಿತ ನೋಡಿಕೊಳ್ಳಬೇಕು. ಪೊಲೀಸರು ಕಾನೂನು ಉಲ್ಲಂಘನೆ ಆಗದಂತೆ ಭಕ್ತರಿಗೆ ಬಂದೊಬಸ್ತು ನೀಡಬೇಕು ಎಂದು ಕಳೆದ ಆದೇಶಲ್ಲೇ ಸೂಚಿಸಲಾಗಿದೆ. ಅದನ್ನೇ ಈಗಲೂ ಹೇಳಲು ಇಚ್ಚಿಸುತ್ತೇವೆ ಎಂದು ಹೈಕೋರ್ಟ್ ಜಿಲ್ಲಾಡಳಿತಕ್ಕೆ ಹಾಗೂ ಚಿತ್ರದುರ್ಗ ಜಿಲ್ಲಾ ಪೊಲೀಸರಿಗೆ ಸೂಚನೆ ನೀಡಿದೆ.

ಒಂದು ಪ್ರಕರಣಕ್ಕೆ ಒಮ್ಮೆ ತೀರ್ಪು ಬಂದರೆ ಅದನ್ನು ಸರಿಯಾಗಿ ಪಾಲಿಸಿಕೊಂಡು ಹೋಗುವುದು ಜಿಲ್ಲಾಡಳಿತ ಕರ್ತವ್ಯವಾಗಿರುತ್ತದೆ ಆದರೆ ಒಮ್ಮೆ ನೀಡಿದ ತೀರ್ಪನ್ನು ಪ್ರತಿ ವರ್ಷ ಪಾಲಿಸದೇ ಮತ್ತೆ ಕೋರ್ಟ್ ಮೂಲಕ ಆದೇಶ ಬರುವವರೆಗೂ ಪೊಲೀಸರು ಕಾಯ್ದಿರುವುದು ನಿಜಕ್ಕೂ ಧಾರ್ಮಿಕ ನಂಬಿಕೆಗೆ ಧಕ್ಕೆ ತರುವ ವಿಷಯವೇ ಹೌದು.
ಕೋರ್ಟ್ ಆದೇಶದ ನಂತರ ಈಗ ಕಂಸಾಗರ ದಸರಾ ಆಚರಣೆಗೆ ಸೂಕ್ತ ಪೊಲೀಸ್ ಪಡೆಯಲ್ಲಿ ನಿಯೋಜಿಸಲಾಗಿದೆ. ಹಬ್ಬದ ವಾತಾವರಣ ಮತ್ತೆ ಊರಿನಲ್ಲಿ ಕಳೆಕಟ್ಟಿದೆ.