ನಟ ದರ್ಶನ್ ಫ್ಯಾನ್ಸ್ (Darshan fans) ಅತಿರೇಕದ ವರ್ತನೆಯ ವಿರುದ್ಧ ಬೆಂಗಳೂರು ಗ್ರಾಮಾಂತರ ಪೊಲೀಸರಿಗೆ ನಟ ಪ್ರಥಮ್ (Actor pratham) ದೂರು ನೀಡಿದ್ದು,ಅದಾದ ಬಳಿಕ ಕನ್ನಡ ಫಿಲ್ಮ್ ಚೇಂಬರ್ ಗೂ (Film chamber) ಭೇಟಿ ನೀಡಿ ಕ್ರಮಕ್ಕೆ ಆಗ್ರಹಿಸಿ ಉಪವಾಸ ಸತ್ಯಾಗ್ರಹಕ್ಕೆ ಕುಳಿತಿದ್ರು.ಆ ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಪ್ರಥಮ್ ಮನವೊಲಿಸಿ, ಚೇಂಬರ್ ಒಳಗೆ ಕರ್ಕೊಂಡು ಹೋಗಿದ್ದಾರೆ.

ಆ ನಂತರ ಮಾತನಾಡಿದ ನಟ ಪ್ರಥಮ್, ನನ್ನ ಉಪವಾಸ ಪ್ರತಿಭಟನೆ ಮುಂದುವರೆಸುತ್ತೇನೆ.ನಾನು ಏಕಾಂಗಿಯಾಗಿ ಹೋರಾಟ ಮಾಡ್ತೀನಿ.ಉಪವಾಸ ಸತ್ಯಾಗ್ರಹಕ್ಕೆ ನನಗೆ ಅವಕಾಶ ಕೊಟ್ಟಿಲ್ಲ.ಜ್ಞಾನಭಾರತಿ ಪೊಲೀಸ್ ಠಾಣೆ ಮುಂಭಾಗದಲ್ಲಿ ಪ್ರತಿಭಟನೆ ಮಾಡ್ತೀನಿ.ದಯವಿಟ್ಟು ಈಗಲಾದ್ರೂ ನಟ ದರ್ಶನ್ ಅವರ ಫ್ಯಾನ್ಸ್‌ಗೆ ಹೇಳಲಿ.ನನಗೆ ಪ್ರಾಣ ಬೆದರಿಕೆ ಇದೆ.ನನಗೆ ಸೆಕ್ಯುರಿಟಿ ಬೇಕು ಎಂದಿದ್ದಾರೆ.

ಈ ಬಗ್ಗೆ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ರೂ ಕೂಡ ಯಾವುದೇ ಕ್ರಮ ಆಗಿಲ್ಲ.ಯಾರೂ ನನ್ನ ಮಾತು ಕೇಳುತ್ತಿಲ್ಲ. ನಟ ದರ್ಶನ್ ಯೂನಿವರ್ಸ್ ಅಂತೆ, ಅವರಿಗೆ ಕಡಿವಾಣ ಹಾಕಿದ್ರೆ ಒಳ್ಳೆದು,ನಾನು ನಿಮ್ಮ ಫ್ಯಾನ್ಸ್ ಪುಂಡಾಟಕ್ಕೆ ಹೆದರಲ್ಲ ಅಂತ ನಟ ಪ್ರಥಮ್ ಆಕ್ರೋಶ ಹೊರಹಾಕಿದ್ದಾರೆ.