
ಬೆಂಗಳೂರು: ಸ್ಯಾಂಡಲ್‌ವುಡ್ ನಟ ದರ್ಶನ್‌ಗೆ ಹೈಕೋರ್ಟ್‌ನಿಂದ ಷರತ್ತು ಬದ್ಧ ಮಧ್ಯಂತರ ಜಾಮೀನು ದೊರಕುತ್ತಿದ್ದಂತೆ (Darshan Thoogudeepa Bail) ಅವರ ಪತ್ನಿ ವಿಜಯಲಕ್ಷ್ಮೀ ಅವರು ಅಸ್ಸಾಂನ ವಿಶ್ವಪ್ರಸಿದ್ಧ ಕಾಮಾಕ್ಯ ದೇವಿ ದೇಗುಲದ ಚಿತ್ರವನ್ನ ಹಾಕಿ ಧನ್ಯವಾದ ತಿಳಿಸಿದ್ದಾರೆ.

ಬುಧವಾರ ಬೆಳಗ್ಗೆ ಹೈಕೋರ್ಟ್ ದರ್ಶನ್‌ಗೆ ಜಾಮೀನು ಮಂಜೂರು ಮಾಡಿತ್ತು.ಕ್ಷಣದಲ್ಲೇ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ದೇವಿಯ ದೇಗುಲದ ಚಿತ್ರವನ್ನು ಹಾಕಿ ಧನ್ಯವಾದ ಹೇಳಿದ್ದಾರೆ.
ದರ್ಶನ್ ಜೈಲು ಸೇರಿದ ಬಳಿಕ ಅವರ ಪತ್ನಿ ಹಲವಾರು ದೇವಾಲಯಗಳಿ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಅಂತೆಯೇ ಅವರು ಅಸ್ಸಾಂನ ಕಾಮಾಕ್ಯಕ್ಕೂ ಭೇಟಿ ನೀಡಿದ್ದರು. ಈ ದೇವಿಯ ಕೃಪೆಯಿಂದ ಪತಿಗೆ ಬೇಲ್ ಸಿಕ್ಕಿದೆ ಎಂದು ಅವರು ನಂಬಿದ್ದಾರೆ.