ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ದರ್ಶನ್ ಪುತ್ರ ವಿನೀಶ್ ಪಂದ್ಯ ವೀಕ್ಷಣೆ!ಬೆಂಗಳೂರುದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯಾವಳಿಯಲ್ಲಿ ವಿಶೇಷ ದೃಶ್ಯವೊಂದು ಗಮನ ಸೆಳೆದಿದೆ. ಜೈಲಿನಲ್ಲಿರುವ ನಟ ದರ್ಶನ್ ಅವರ ಪುತ್ರ ವಿನೀಶ್, ಆರ್ಸಿಬಿ ವಿರುದ್ಧ ಸಿಎಸ್ಕೆ ಪಂದ್ಯವನ್ನು ಸಾಮಾನ್ಯ ಪ್ರೇಕ್ಷಕರ ಗ್ಯಾಲರಿಯಲ್ಲಿ ಕೂತು ವೀಕ್ಷಿಸಿರುವುದು ಚರ್ಚೆಗೆ ಗ್ರಾಸವಾಗಿದೆ.ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಈ ಪಂದ್ಯ ವೇಳೆ ವಿನೀಶ್ ಸಾಮಾನ್ಯ ಅಭಿಮಾನಿಯಂತೆ ಕುಳಿತು ಮ್ಯಾಚ್ ವೀಕ್ಷಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ದರ್ಶನ್ ಅಭಿಮಾನಿಗಳು ಈ ಚಿತ್ರಗಳನ್ನು ಹಂಚಿಕೊಂಡಿದ್ದು, ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಒಂದಾನೊಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಅಗ್ರಸ್ಥಾನದಲ್ಲಿದ್ದ ದರ್ಶನ್, ತಮ್ಮ ಪರಿಶ್ರಮದ ಮೂಲಕ ಲೈಟ್ಬಾಯ್ನಿಂದ ಸೂಪರ್ಸ್ಟಾರ್ ಮಟ್ಟಕ್ಕೆ ಏರಿದವರು. ಹಲವು ಹಿಟ್ ಸಿನಿಮಾಗಳ ಮೂಲಕ ಅಪಾರ ಅಭಿಮಾನಿ ಬಳಗವನ್ನು ನಿರ್ಮಿಸಿಕೊಂಡಿದ್ದರು.
ಆದರೆ ವೈಯಕ್ತಿಕ ಜೀವನದಲ್ಲಿ ತೆಗೆದುಕೊಂಡ ಕೆಲವು ನಿರ್ಧಾರಗಳು ಅವರ ವೃತ್ತಿಜೀವನಕ್ಕೆ ತೀವ್ರ ಹೊಡೆತ ನೀಡಿದ್ದು, ಇದೀಗ ಅವರು ಕಾನೂನು ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಮೊದಲ ಬಂಧನದ ವೇಳೆ 131 ದಿನಗಳು ಜೈಲಿನಲ್ಲಿ ಕಳೆದಿದ್ದ ಅವರು, ನಂತರ ಜಾಮೀನು ಪಡೆದು ಹೊರಬಂದಿದ್ದರು.ಇದಾದ ಬಳಿಕ 2025ರ ಆಗಸ್ಟ್ 14ರಂದು ಮತ್ತೆ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲ್ಪಟ್ಟಿದ್ದಾರೆ.

ಎರಡನೇ ಬಾರಿ ಬಂಧನದಿಂದಲೂ ಹಲವು ದಿನಗಳು ಕಳೆದಿದ್ದು, ಒಟ್ಟಾರೆ ಸುಮಾರು 365 ದಿನಗಳ ಕಾಲ ಜೈಲು ಜೀವನ ಅನುಭವಿಸಿದ್ದಾರೆ.ಇದರ ನಡುವೆ, ಪುತ್ರ ವಿನೀಶ್ ಸಾರ್ವಜನಿಕರೊಂದಿಗೆ ಸಾಮಾನ್ಯವಾಗಿ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಿರುವುದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ.






