ಡಿ ಗ್ಯಾಂಗ್ (D gang) ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರೊ ದರ್ಶನ್ ಗೆ (Darshan) ಜೈಲಾಧಿಕಾರಿಗಳಿಂದ ಭದ್ರತೆ ಒದಗಿಸಲಾಗಿದೆ. ದರ್ಶನ್ ಇರುವ ಕೊಠಡಿಗೆ ಒಟ್ಟು ಏಳು ಜನ ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ದರ್ಶನ್ ಇರಿಸಿರುವ ಕೊಠಡಿ ಹೊರ ಭಾಗದಲ್ಲಿ ಭದ್ರತೆಗೆ ನಿಯೋಜನೆಗೊಂಡಿರೊ ಸಿಬ್ಬಂದಿ, ಸಂಪೂರ್ಣ ದರ್ಶನ್ ಚಲನವಲನದ ಮೇಲೆ ನಿಗಾ ಇರಿಸಿದ್ದಾರೆ. ಬೇರೆ ಯಾವ ಖೈದಿಯು ಭೇಟಿ ಆಗದಂತೆ ಕಟ್ಟೆಚ್ಚರ ವಹಿಸಲಾಗಿದೆ.
ಇನ್ನು ಹೊರಗಿನವರು ಯಾರಾದ್ರು ದರ್ಶನ್ ಭೇಟಿಗೆ ಬಂದರೂ, ಆ ಸಂದರ್ಭದಲ್ಲೂ ದರ್ಶನ್ (Darshan) ಜೊತೆ ಸ್ಟಾಫ್ ಇದ್ದೇ ಇರ್ತಾರೆ ಎಂದು ಹೇಳಲಾಗಿದೆ. ಇಬ್ಬರು ಸಿಬ್ಬಂದಿ ಭದ್ರತೆಯಲ್ಲಿ ಆಗಮಿಸೊ ದರ್ಶನ್, ಹೊರಗಿನಿಂದ ಬಂದವರ ಭೇಟಿ ಮಾಡಿ ಬಳಿಕ ಮತ್ತೆ ಭದ್ರತೆಯಲ್ಲೆ ವಾಪಸ್ಸು ತೆರಳುತ್ತಾರೆ.