ನಟ ದರ್ಶನ್ ಗ್ಯಾಂಗ್ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿರುವ ಮತ್ತಷ್ಟು ಫೋಟೊಗಳು ಮಾಧ್ಯಮಗಳಿಗೆ ಲಭ್ಯವಾಗಿದ್ದು, ರೇಣುಕಾಸ್ವಾಮಿಯ ದೇಹದ ಸ್ಥಿತಿ ಯಾವ ರೀತಿ ಇತ್ತು ಅನ್ನೋದು ಪೋಟೊದಲ್ಲಿ ಬಯಲಾಗಿದೆ. ಫೋಟೊಗಳ ಮೂಲಕ ಕೊಲೆಯ ಭೀಕರತೆ ಪ್ರಮಾಣವನ್ನು ಅಂದಾಜಿಸಿರುವ ಪೊಲೀಸರು, ನ್ಯಾಯಾಲಯಕ್ಕೆ ಚಾರ್ಜ್ಶೀಟ್ನಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ. ರೇಣುಕಾಸ್ವಾಮಿ ತಲೆ ಹೊಡೆದಿರುವುದು ಫೋಟೊದಲ್ಲಿ ಸ್ಪಷ್ಟವಾಗಿದೆ ಎನ್ನಲಾಗಿದೆ.
ಡಿ ಗ್ಯಾಂಗ್ ಕ್ರೌರ್ಯದ ಬಗ್ಗೆ ನಟ ಚೇತನ್ ಬೇಸರ ಹೊರ ಹಾಕಿದ್ದಾರೆ. ಯಾವುದೇ ವ್ಯಕ್ತಿಯನ್ನು ಇಷ್ಟು ಕೌರ್ಯವಾಗಿ ಹಿಂಸಿಸಿ ಸಾಯಿಸಬಾರದು. ಈ ರೀತಿಯ ಕ್ರೌರ್ಯವನ್ನು ಭಾರತದಲ್ಲಿ ಯಾರೂ ಕೂಡ ಒಪ್ಪಲ್ಲ. ರೇಣುಕಾಸ್ವಾಮಿ ಮೇಲೆ ಆಗಿರುವ ಕ್ರೌರ್ಯವನ್ನು ಸ್ವತಃ ದರ್ಶನ್ ಅಭಿಮಾನಿಗಳೇ ಒಪ್ಪಲ್ಲ. ಈ ಕ್ರೌರ್ಯ ಯಾರೇ ಮಾಡಿರಲಿ ಅವರಿಗೆ ಶಿಕ್ಷೆ ಆಗಲಿ. ರೇಣುಕಾಸ್ವಾಮಿಯನ್ನು ವಾಪಸ್ ಕರೆತರಲು ಆಗಲ್ಲ. ಆದ್ರೆ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ. ರೇಣುಕಾಸ್ವಾಮಿ ಕೊನೆ ಕ್ಷಣದ ಪೋಟೊಗಳನ್ನು ನೋಡಿದಾಗ ಬೇಸರ ಆಗ್ತಿದೆ ಎಂದಿದ್ದಾರೆ.
ರೇಣುಕಾಸ್ವಾಮಿ ಹತ್ಯೆಗೆ ಬಳಸಿದ್ದ ವಸ್ತುಗಳನ್ನು ಪೊಲೀಸ್ರು ಜಪ್ತಿ ಮಾಡಿದ್ದು, ಇದೇ ವಸ್ತುಗಳನ್ನ ಬಳಸಿ ಭೀಕರವಾಗಿ ಹಲ್ಲೆ ಮಾಡಿ ಡಿ ಗ್ಯಾಂಗ್ ಕೊಲೆ ಮಾಡಿತ್ತು ಅನ್ನೋದು ಗೊತ್ತಾಗಿದೆ. ಮೆಗ್ಗರ್, ಪೊಲೀಸ್ ಲಾಠಿ, ಮರದ ರೊಂಬೆ, ಹಾಗೂ ಹಗ್ಗವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಆರೋಪಿ ಧನರಾಜ್ ತನ್ನ ಬಳಿ ಮೊದಲಿನಿಂದಲೇ ಮೆಗ್ಗರ್ ಇಟ್ಕೊಂಡಿದ್ದ ಎನ್ನುವುದು ಬಯಲಾಗಿದೆ. ಆರೋಪಿ ಧನರಾಜ್ ಈ ಮೆಗ್ಗರ್ ಬಳಕೆಯನ್ನು ಬೇರೆ ಬೇರೆ ಪ್ರಕರಣಗಳಲ್ಲೂ ಬಳಸಿರುವ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.