• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ರಾಜಕೀಯ

ಕಾಂಗ್ರೆಸ್​ ಪರ ದರ್ಶನ್​ ಪ್ರಚಾರ.. ಸುಮಲತಾ ಡಬಲ್​ ಗೇಮ್​ ಮಾಡಿದ್ರಾ..?

Krishna Mani by Krishna Mani
April 19, 2024
in ರಾಜಕೀಯ
0
ಕಾಂಗ್ರೆಸ್​ ಪರ ದರ್ಶನ್​ ಪ್ರಚಾರ.. ಸುಮಲತಾ ಡಬಲ್​ ಗೇಮ್​ ಮಾಡಿದ್ರಾ..?
Share on WhatsAppShare on FacebookShare on Telegram

ಮಂಡ್ಯ ಲೋಕಸಭಾ ಚುನಾವಣಾ ಅಖಾಡ ರಂಗೇರ್ತಿದೆ. ದೋಸ್ತಿ ಅಭ್ಯರ್ಥಿಯಾಗಿ ಹೆಚ್​.ಡಿ ಕುಮಾರಸ್ವಾಮಿ (H.D Kumaraswamy) ಹಾಗು ಕಾಂಗ್ರೆಸ್​ ಅಭ್ಯರ್ಥಿಯಾಗಿ ಸ್ಟಾರ್​ ಚಂದ್ರು (Star Chandru) ಅದೃಷ್ಟ ಪರೀಕ್ಷೆ ನಡೆಸಿದ್ದಾರೆ. ಗುರುವಾರ ಮಂಡ್ಯ ಕ್ಷೇತ್ರದಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಕಾಂಗ್ರೆಸ್​ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಪ್ರಚಾರ ನಡೆಸುವ ಮೂಲಕ ಮಂಡ್ಯ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ನಾನು ಯಾವುದೇ ಪಕ್ಷದ ಪರ ಪ್ರಚಾರಕ್ಕೆ ಬಂದಿಲ್ಲ ಎನ್ನುವ ನಟ ದರ್ಶನ್​, ಕಾಂಗ್ರೆಸ್​ ಅಭ್ಯರ್ಥಿ ಸ್ಟಾರ್​ ಚಂದ್ರುಗೆ ಮತ ನೀಡಿ ಗೆಲ್ಲಿಸಿ ಎಂದು ಅಬ್ಬರಿಸಿದ್ದಾರೆ.

ADVERTISEMENT

ನಟ ದರ್ಶನ್ ಕಾಂಗ್ರೆಸ್​ ಅಭ್ಯರ್ಥಿ ವೆಂಕಟರಮಣೇಗೌಡ ಅಲಿಯಾಸ್​ ಸ್ಟಾರ್​ ಚಂದ್ರು ಪರ ಪ್ರಚಾರ ಮಾಡ್ತಿರೋದು ಹಾಲಿ ಸಂಸದೆ ಸುಮಲತಾ ಮೇಲೆ ಅನುಮಾನ ಮೂಡುವಂತೆ ಮಾಡಿದೆ. ಇತ್ತೀಚಿಗೆ ಮಳವಳ್ಳಿ ಕಾಂಗ್ರೆಸ್​ ಶಾಸಕ ನರೇಂದ್ರ ಸ್ವಾಮಿ ಬಹಿರಂಗ ಸಭೆಯಲ್ಲಿ ಬಹಿರಂಗ ಸವಾಲು ಹಾಕಿದ್ದರು. ಸುಮಲತಾ ಅವರೇ ಕಳೆದ ಬಾರಿಯ ಚುನಾವಣೆಯಲ್ಲಿ ನೀವು ಮಳವಳ್ಳಿ ಹುಚ್ಚೇಗೌಡನ ಸೊಸೆ ಎಂದು ಮತ ಕೇಳಿದ್ದಿರಿ, ಆ ಋಣವನ್ನ ಈ ಚುನಾವಣೆಯಲ್ಲಿ ತೀರಿಸಿ. ಕಳೆದ ಬಾರಿ ಅತಿ ಹೆಚ್ಚು ಮತ ಕೊಟ್ಟಿದ್ದು ಈ ಮಳವಳ್ಳಿ ತಾಲೂಕಿನ ಜನ. ಆ ಜನರಿಗೆ ಅವಮಾನ ಮಾಡುವ ಕೆಲಸ ಮಾಡಬೇಡಿ ಎಂದಿದ್ದರು. ಇದೀಗ ತಮ್ಮ ದತ್ತು ಮಗ ದರ್ಶನ್​ರನ್ನು ಕಾಂಗ್ರೆಸ್​ ಅಭ್ಯರ್ಥಿ ಪರ ಪ್ರಚಾರಕ್ಕೆ ಕಳಿಸುವ ಮೂಲಕ ಸುಮಲತಾ ಜಾಣತನ ಮೆರೆದಿದ್ದಾರೆ ಅನ್ನೋ ಮಾತು ಚರ್ಚೆ ಆಗ್ತಿದೆ.

ನಟ ದರ್ಶನ್ ಬೆಳಗ್ಗೆ 11 ಗಂಟೆ ಸುಮಾರಿಗೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಲಗೂರಿನಿಂದ ಮತಯಾಚನೆ ಶುರು ಮಾಡಿದರು. ತೆರೆದ ವಾಹನ ಏರಿದ ದರ್ಶನ್, ಅಭಿಮಾನಿಗಳು ಹಾಗು ಕಾಂಗ್ರೆಸ್​ ಕಾರ್ಯಕರ್ತರ ಕಡೆಗೆ ಕೈ ಬೀಸುತ್ತಾ ಕಾಂಗ್ರೆಸ್​ ಪಕ್ಷಕ್ಕೆ ಮತ ನೀಡುವಂತೆ ಕೇಳುತ್ತಾ ಸಾಗಿದ್ರು. ನಡುವಲ್ಲಿ ಮಳೆ ಬಂದಾಗಲೂ ನಿಲ್ಲಿಸದ ದರ್ಶನ್​, ಮಳೆಯಲ್ಲೇ ಪ್ರಚಾರ ಮಾಡಿದ್ರು. ಕಳೆದ ಬಾರಿ ನಮ್ಮ ಅಮ್ಮ ಸುಮಲತಾ ಪರವಾಗಿ ನರೇಂದ್ರ ಸ್ವಾಮಿ ಕೆಲಸ ಮಾಡಿದ್ದರು. ಹೀಗಾಗಿ ಇಂದು ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಮತಯಾಚನೆ ಮಾಡ್ತಿದ್ದೇನೆ ಎಂದು ತಿಳಿಸಿದ್ರು. ಮಳವಳ್ಳಿ ತಾಲ್ಲೂಕಿನ ಹುಸ್ಕೂರು, ಹಾಡ್ಲಿ, ಬೆಳಕವಾಡಿ, ಪುರಿಗಾಲಿ ಸೇರಿದಂತೆ 17 ಗ್ರಾಮಗಳಲ್ಲಿ ದರ್ಶನ್ ಪ್ರಚಾರ ನಡೀತು.

ಸುಮಲತಾ ಬಳಿ ಈ ಬಗ್ಗೆ ಮಾತನಾಡದೆ ಮಂಡ್ಯದಲ್ಲಿ ದರ್ಶನ್​ ಪ್ರಚಾರ ಮಾಡಲು ಹೋಗಲ್ಲ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಕಳೆದ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್​ ಸಪೋರ್ಟ್​ ಮಾಡಿತ್ತು. ಜೆಡಿಎಸ್​ ಜೊತೆಗೆ ದೋಸ್ತಿ ಮಾಡಿಕೊಂಡರೂ ಒಳಗೊಳಗೆ ಕಾಂಗ್ರೆಸ್​ ಸುಮಲತಾ ಬೆಂಬಲಿಸಿದ್ದರಿಂದಲೇ ಗೆದ್ದಿದ್ದು ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಅದೇ ಕಾರಣದಿಂದ ಈ ಬಾರಿ ಸುಮಲತಾ ರಾಜಕೀಯವಾಗಿ ಬಿಜೆಪಿ ಸೇರ್ಪಡೆ ಆದರೂ ಕಾಂಗ್ರೆಸ್​ ಪಕ್ಷದ ಋಣ ತೀರಿಸುವ ಕೆಲಸ ಮಾಡಿದ್ದಾರೆ ಎನ್ನಲಾಗ್ತಿದೆ. ಇನ್ನು ಸುಮಲತಾ ಹಾಗು ದರ್ಶನ್​ ಬಾಂಧ್ಯವ್ಯ ಹೇಗಿದೆ ಎನ್ನುವುದನ್ನು ಬಲ್ಲ ಮಂಡ್ಯ ಜನರು ಸುಮಲತಾನೇ ಮುಂದೆ ನಿಂತು ಕಳುಹಿಸಿದ್ದಾರೆ. ಇತ್ತೀಚಿಗೆ ರಾಜಕೀಯ ನಿರ್ಧಾರ ತಿಳಿಸುವ ಸಂದರ್ಭದಲ್ಲೂ ದರ್ಶನ್​ ಸುಮಲತಾ ಜೊತೆಗಿದ್ದರು. ಈಗಲೂ ದರ್ಶನ್​ ಸುಮಲತಾ ಮಾತನಾಡಿಕೊಂಡೇ ಹೀಗೆ ಮಾಡಿದ್ದಾರೆ ಎಂದು ಬಿಜೆಪಿ, ಜೆಡಿಎಸ್​ ಕಾರ್ಯಕರ್ತರು ಬೆಂಕಿ ಹಾಕಿಕೊಳ್ತಿದ್ದಾರೆ.

ಕೃಷ್ಣಮಣಿ

Tags: #jdsCongress PartyLokasabaMalavalliMandyastar chandruಎಚ್ ಡಿ ಕುಮಾರಸ್ವಾಮಿದರ್ಶನ್ಮಳೆಯಲ್ಲೇ ಪ್ರಚಾರಸಿದ್ದರಾಮಯ್ಯಸುಮಲತಾ
Previous Post

ಬೆಂಗಳೂರಿನಲ್ಲಿ ಜೋಡಿ ಮರ್ಡರ್​.. ಕಾರಣ ಮಾತ್ರ ಶಾಕಿಂಗ್​..

Next Post

ವೃತ್ತಿ ಸೇವೆ ವರ್ಚಸ್ಸು ಮತ್ತು ರಾಜಕೀಯ ಬಂಡವಾಳಚುನಾವಣೆಗಳು ಬಂಡವಾಳದ ಸಂತೆಯಾದಾಗ ವ್ಯಕ್ತಿ ಮತ್ತು ವ್ಯಕ್ತಿತ್ವ ನಿಮಿತ್ತ ಮಾತ್ರ ಆಗುತ್ತದೆ

Related Posts

ಅಂಬೇಡ್ಕರ್ ಮತ್ತು ಸಂವಿಧಾನ – ವಾಸ್ತವಗಳು
Top Story

ಅಂಬೇಡ್ಕರ್ ಮತ್ತು ಸಂವಿಧಾನ – ವಾಸ್ತವಗಳು

by ಪ್ರತಿಧ್ವನಿ
April 20, 2026
0

ವಿಶೇಷ ಲೇಖನ : ನಾ ದಿವಾಕರ ( ಸಂವಾದ ಮಾಸಪತ್ರಿಕೆಯ ಏಪ್ರಿಲ್ 2026 ರ ಅಂಬೇಡ್ಕರ್ ವಿಶೇಷ ಸಂಚಿಕೆಗೆ ಬರೆದ ಲೇಖನ ) ಭಾಗ 2 ಹಕ್ಕು...

Read moreDetails
ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

April 19, 2026
ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

April 19, 2026
ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

April 19, 2026
ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

April 19, 2026
Next Post
ವೃತ್ತಿ ಸೇವೆ ವರ್ಚಸ್ಸು ಮತ್ತು ರಾಜಕೀಯ ಬಂಡವಾಳಚುನಾವಣೆಗಳು ಬಂಡವಾಳದ ಸಂತೆಯಾದಾಗ ವ್ಯಕ್ತಿ ಮತ್ತು ವ್ಯಕ್ತಿತ್ವ ನಿಮಿತ್ತ ಮಾತ್ರ ಆಗುತ್ತದೆ

ವೃತ್ತಿ ಸೇವೆ ವರ್ಚಸ್ಸು ಮತ್ತು ರಾಜಕೀಯ ಬಂಡವಾಳಚುನಾವಣೆಗಳು ಬಂಡವಾಳದ ಸಂತೆಯಾದಾಗ ವ್ಯಕ್ತಿ ಮತ್ತು ವ್ಯಕ್ತಿತ್ವ ನಿಮಿತ್ತ ಮಾತ್ರ ಆಗುತ್ತದೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada