ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ (Renuka swamy murder case) ಲಾಕ್ ಆಗಿರುವ ನಟ ದರ್ಶನನ್ನು (Actor darshan) ರಕ್ಷಿಸಲು ಪ್ರಭಾವಿಗಳು ಪ್ರಯತ್ನಿಸುತ್ತಿದ್ದಾರೆಂಬ ಮಾಹಿತಿ ತಿಳಿದುಬಂದಿದೆ. ಪ್ರಕರಣದ SPP ಅಂದ್ರೆ ಸರ್ಕಾರಿ ಪರ ವಕೀಲರನ್ನು ಬದಲಾಯಿಸಲು ಷಡ್ಯಂತ್ರ ಮಾಡಲಾಗ್ತಿದೆ ಎನ್ನಲಾಗ್ತಿದೆ.

SPP ಪ್ರಸನ್ನ ಕುಮಾರ್ (Prasanna kumar) ಬದಲಾಯಿಸಲು ಒತ್ತಡ ಹೆಚ್ಚಾಗಿದೆ. ಪ್ರಸನ್ನ ಕುಮಾರ್ ಮೊದಲೇ CBI – NIA ಪರ ಅಡ್ವಕೇಟ್ ಆಗಿದ್ದವರು. ಅಂತವು ಇದ್ರೆ ದರ್ಶನ್ ರಕ್ಷಣೆ ಅಸಾಧ್ಯ ಎಂಬ ಲೆಕ್ಕಾಚಾರ ಶುರುವಾಗಿದೆ. ಯಾಕಂದ್ರೆ ಈಗಾಗಲೇ ಅನೇಕ ಪ್ರಕರಣದಲ್ಲಿ ಪ್ರಸನ್ನ ಕುಮಾರ್ ಸಾಮರ್ಥ್ಯ ಸಾಬೀತಾಗಿದೆ. ಅನೇಕ ಮಂದಿ ಉಗ್ರರಿಗೆ ಪ್ರಸನ್ನಕುಮಾರ್ ಶಿಕ್ಷೆ ಕೊಡಿಸಿದ್ದರು.

ಯಾರ ಒತ್ತಡಕ್ಕೂ ಮಣಿಯೋದಿಲ್ಲ ಅಂತಾನೇ ಪ್ರಸನ್ನ ಕುಮಾರ್ ಹೆಸರುವಾಸಿಯಾಗಿದ್ದಾರೆ. ಹೀಗಾಗಿ ಅವರನ್ನು ಬದಲಾಯಿಸಲು ಒತ್ತಡ ಹೇರಲಾಗ್ತಿದೆ ಅಂತ ನ್ಯೂಸ್‌ಫಸ್ಟಗೆ ಪ್ರಕರಣದ ತನಿಖಾ ತಂಡದಿಂದ ಮಾಹಿತಿ ಸಿಕ್ಕಿದೆ.











