ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಮತ್ತು ಸಹವರ್ತಿಗಳಿಗೆ ಸೆಪ್ಟೆಂಬರ್ 12ರವರೆಗೂ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿ 24ನೇ ಎಸಿಎಂಎಂ ನ್ಯಾಯಾಲಯ ಇಂದು ಆದೇಶಿಸಿತು.ಪ್ರಕರಣದಲ್ಲಿ ಬಂಧಿತರಾಗಿ ರಾಜ್ಯದ ವಿವಿಧ ಕಾರಾಗೃಹಗಳಲ್ಲಿರುವ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಇಂದಿಗೆ ಅಂತ್ಯವಾದ ಹಿನ್ನೆಲೆಯಲ್ಲಿ ಆಯಾ ಕಾರಾಗೃಹಗಳಿಂದಲೇ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ 60 ಡಿಜಿಟಲ್ ಸಾಕ್ಷ್ಯಗಳನ್ನೊಳಗೊಂಡ ಹಾರ್ಡ್ ಡಿಸ್ಕ್, ಪೆನ್ ಡ್ರೈವ್ ಅನ್ನು ಸರ್ಕಾರಿ ವಕೀಲ ಪ್ರಸನ್ನ ಕುಮಾರ್ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದರು. ಹಾಗೂ ಆರೋಪಿಗಳ ಪ್ರತಿಯನ್ನು ಎರಡು ದಿನಗಳಲ್ಲಿ ನೀಡಲಿದ್ದೇವೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಇನ್ನು, ನ್ಯಾಯಾಂಗ ಬಂಧನ ವಿಸ್ತರಣೆ ಬೆನ್ನಲ್ಲೇ ಡಿ ಬಾಸ್ ಬಳ್ಳಾರಿ ಜೈಲಲ್ಲಿ ವಿಲವಿಲ ಅಂತ ಒದ್ದಾಡ್ತಿದ್ದಾರೆ. ದರ್ಶನ್ ಗೆ ಏಕಾಂಗಿತನ ತೀವ್ರವಾಗಿ ಕಾಡುತ್ತಿದೆ. ಈಗಾಗಲೇ ಬೇಲ್ ಸಂಬಂಧ ಪತ್ನಿ ವಿಜಯಲಕ್ಷ್ಮಿ ಹಾಗೂ ವಕೀಲರ ಜತೆ ಚರ್ಚೆ ಆರಂಭಿಸಿದ್ದಾರೆ ಎನ್ನಲಾಗಿದೆ.