ನಟ ದರ್ಶನ್ ಅಂಡ್ ಗ್ಯಾಂಗ್ ಕೊಲೆ ಕೇಸ್‌ನಲ್ಲಿ ಬಂಧನವಾಗಿ ಪೊಲೀಸ್ರ ಸೆರೆಯಲ್ಲಿದೆ. ಕೊಲೆ ಕೇಸ್‌ನಲ್ಲಿ ಒಂದೊಂದೇ ಅಂಶ ಹೊರ ಬೀಳ್ತಿದ್ದು, ರೇಣುಕಾಸ್ವಾಮಿ ಕೊಲೆಗೆ ಮೆಗ್ಗರ್ ಬಳಕೆ ಮಾಡಿದ್ದು ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಗಿತ್ತು. ಇದೀಗ ಕೊಲೆಗೆ ಬಳಕೆ ಮಾಡಿದ್ದ ಮೆಗ್ಗರ್ ಜಪ್ತಿ ಮಾಡಲಾಗಿದೆ. ಆದರೆ ದರ್ಶನ್ ಗ್ಯಾಂಗ್ನಲ್ಲಿ ಬಳಕೆ ಮಾಡ್ತಿದ್ದು ಯಾಕೆ..? ಇವರೇನು ವೃತ್ತಿಪರ ರೌಡಿಗಳಾಗಿದ್ರಾ..? ಮೆಗ್ಗರ್ ಕೊಟ್ಟಿದ್ಯಾರು ಅನ್ನೋ ಪ್ರಶ್ನೆಗೆ ಬಂದಿರುವ ಉತ್ತರ ಸ್ನೇಹಿತರೊಬ್ಬರು ಕೊಟ್ಟರು ಎನ್ನುವುದು. ಆ ಸ್ನೇಹಿತ ನಟ ದರ್ಶನ್ ಆಗಿದ್ರಾ..? ಅನ್ನೋ ಅನುಮಾನ ಎಲ್ಲರನ್ನು ಕಾಡುವುದಕ್ಕೆ ಶುರುವಾಗಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ರಾಜು ಅಲಿಯಾಸ್ ಧನರಾಜ್ ಎಂಬಾತನ ಬಂಧನ ಮಾಡಿದ ಬಳಿಕ ಆರೋಪಿ ಬಳಿ ಪೊಲೀಸರು, ಮೆಗ್ಗರ್ ಡಿವೈಸ್, ಸ್ಕೂಟರ್ ವಶಕ್ಕೆ ಪಡೆದಿದ್ದಾರೆ. ಕರೆಂಟ್ ಶಾಕ್ ಕೊಟ್ಟಿದ್ದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ರು, ಉದ್ದೇಶ ಪೂರ್ವಕವಾಗಿಯೇ ಮೆಗ್ಗರ್ ತರಲಾಗಿತ್ತಾ..? ಮೊದಲೇ ಕೊಲೆ ಮಾಡುವ ಉದ್ದೇಶದಿಂದಲೇ ಬಂದಿದ್ರಾ..? ಮೆಗ್ಗರ್ ಶೆಡ್‌ಗೆ ತಂದಿದ್ದು ಯಾಕೆ ಅನ್ನೋ ಬಗ್ಗೆಯೂ ಪೊಲೀಸ್ರು ತನಿಖೆ ಮಾಡ್ತಿದ್ದಾರೆ. A5 ಆರೋಪಿ ಆಗಿರುವ ನಂದೀಶ್ ಜೊತೆ ಸೇರಿಕೊಂಡು ರೇಣುಕಾಸ್ವಾಮಿಗೆ ಕರೆಂಟ್ ಶಾಕ್ ಕೊಟ್ಟಿದ್ದರು ಎನ್ನಲಾಗ್ತಿದೆ.
ಬಂಧಿತ ಆರೋಪಿ ಧನರಾಜು A5 ಆರೋಪಿ ನಂದೀಶ್ ಜೊತೆಗೆ ಬೆಂಗಳೂರಲ್ಲಿ ಕೇಬಲ್ ಕೆಲಸ ಮಾಡಿಕೊಂಡಿದ್ದ ರಾಜು. ಕೇಬಲ್ ಕೆಲಸ ಮಾಡ್ತಿದ್ದರಿಂದ ಎಲೆಕ್ಟ್ರಿಕಲ್ ಮೆಗ್ಗರ್ ಬಗ್ಗೆ ತಿಳಿದುಕೊಂಡಿದ್ದ ಎನ್ನಲಾಗಿದೆ. ಕೊಲೆ ನಡೆದ ದಿನ ಧನರಾಜ್‌ನನ್ನು ಪಟ್ಟಣಗೆರೆ ಶೆಡ್‌ಗೆ ಕರೆಸಿಕೊಂಡಿದ್ದ ನಂದೀಶ್, ರೇಣುಕಾಸ್ವಾಮಿಗೆ ಕರೆಂಟ್ ಶಾಕ್ ನೀಡೋ ಪ್ಲ್ಯಾನ್ ಮಾಡಿದ್ದರು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತಲೆ ಮರೆಸಿಕೊಂಡಿದ್ದ ಮಂಡ್ಯ ಮೂಲದ ಧನರಾಜ್‌ನನ್ನು 9ನೇ ಆರೋಪಿಯನ್ನಾಗಿ ಮಾಡಿಕೊಂಡಿದ್ದಾರೆ. ಜೊತೆಗೆ ಶೆಡ್ ಮಾಲೀಕ ಪಟ್ಟಣಗೆರೆ ಜಯಣ್ಣನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ.
ಶೆಡ್‌ನಲ್ಲಿ ರೇಣುಕಾಸ್ವಾಮಿ ಕೊಲೆ ನಡೆದಿರುವುದು ಅಷ್ಟೇ ಅಲ್ಲ. ಇದಕ್ಕೂ ಮೊದಲು ಇದೇ ಶೆಡ್‌ನಲ್ಲಿ ಸಿನಿಮಾ ನಿರ್ಮಾಪಕರು, ಡೈರೆಕ್ಟರ್, ಮ್ಯಾನೇಜರ್ ಸೇರಿದಂತೆ ಸಾಕಷ್ಟು ಜನರನ್ನು ಬೆದರಿಸುವ ಕೆಲಸ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆಯೂ ವಿಚಾರಣೆಗೆ ಪೊಲೀಸ್ರು ಜಾಲ ಬೀಸಿದ್ದಾರೆ. ನಟ ದರ್ಶನ್ ಬೇರೆ ಯಾವ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಅನ್ನೋ ಬಗ್ಗೆಯೂ ಪೊಲೀಸ್ರು ಮಾಹಿತಿ ಕಲೆ ಹಾಕ್ತಿದ್ದಾರೆ. ಜೊತೆಗೆ ಮೆಗ್ಗರ್ ತಂದು ಟಾರ್ಚರ್ ಮಾಡಿರೋದು ಉದ್ದೇಶ ಪೂರ್ವಕ ಕೊಲೆ ಅನ್ನೋ ಬಗ್ಗೆ ಪೊಲೀಸ್ರಲ್ಲಿ ಅನುಮಾನ ಮೂಡಿಸಿದೆ. ಇಷ್ಟು ದಿನಗಳ ಕಾಲ ಆಕಸ್ಮಿಕವಾಗಿ ನಡೆದ ಘಟನೆ ಎಂದು ಹೇಳಿಕೊಳ್ತಿದ್ರು. ಆದರೆ ಇದೀಗ ರೇರೆಸ್ಟ್ ಕೇಸ್ ಅನ್ನೋ ಬಗ್ಗೆ ತನಿಖೆ ಸಾಗುತ್ತಿದೆ.
ಕೃಷ್ಣಮಣಿ