• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ದರ್ಶನ್‌‌ ಗ್ಯಾಂಗ್‌ ಬಗ್ಗೆ ಯಾರ್ಯಾರು ಏನೇನು ಹೇಳಿದ್ರು..? ಏನು ಸಮಸ್ಯೆ ಗೊತ್ತಾ..?

Krishna Mani by Krishna Mani
June 20, 2024
in Top Story, ಸಿನಿಮಾ
0
ದರ್ಶನ್‌‌ ಗ್ಯಾಂಗ್‌ ಬಗ್ಗೆ ಯಾರ್ಯಾರು ಏನೇನು ಹೇಳಿದ್ರು..? ಏನು ಸಮಸ್ಯೆ ಗೊತ್ತಾ..?
Share on WhatsAppShare on FacebookShare on Telegram

ದರ್ಶನ್ ಅಭಿನಯಿಸಿದ್ದ ಚಿಂಗಾರಿ ಸಿನಿಮಾದ ನಿರ್ಮಾಪಕ ಮಹದೇವ್‌ ಮಾಧ್ಯಮಗಳ ಜೊತೆ ಮಾತನಾಡಿ ಬೇಸರ ಹೊರ ಹಾಕಿದ್ದಾರೆ. ಚಿಂಗಾರಿ ಸಿನಿಮಾ ಸಂದರ್ಭದಲ್ಲಿ ದರ್ಶನ್ ನಮ್ಮ ಜೊತೆ ಚೆನ್ನಾಗಿದ್ರು, ಸಿನಿಮಾದಲ್ಲಿ ಹಣ ಬಂದ್ರೂ ನಮಗೆ ನೆಮ್ಮದಿ ಇರಲಿಲ್ಲ. ಸಿನಿಮಾ ರಿಲೀಸ್ ವೇಳೆ ಯಾರದ್ದೋ ಮಾತು ಕೇಳಿ ಪಬ್ಲಿಸಿಟಿ ವಿಚಾರವಾಗಿ ಜಗಳ ಆಡಿದ್ರು. ದರ್ಶನ್ ಮೂರನೇ ವ್ಯಕ್ತಿಗಳ ಮಾತು ಕೇಳೊದು ಜಾಸ್ತಿ. ನಮ್ಮ ಸಿನಿಮಾ ವೇಳೆ ದರ್ಶನ್ ಜೊತೆ ಈಗ ಇರುವವರು ಇರಲಿಲ್ಲ ಎಂದಿದ್ದಾರೆ. ಆದರೆ ಹೇಳಿಕೆ ಮಾತು ಕೇಳಿದ್ದರಿಂದಲೇ ಇಷ್ಟೆಲ್ಲಾ ಸಮಸ್ಯೆಗೆ ಕಾರಣ ಅಂತಾನೂ ತಿಳಿಸಿದ್ದಾರೆ. ಇನ್ನು ದರ್ಶನ್‌ ತಪ್ಪು ಮಾಡಿದ್ರೆ ಶಿಕ್ಷೆ ಅನುಭವಿಸಲಿ. ತಪ್ಪು ಮಾಡದಿದ್ರೆ ಕಳಂಕ ರಹಿತರಾಗಿ ಹೊರಬರಲಿ. ಪವಿತ್ರಗೌಡ ಬಗ್ಗೆ ನಮಗೆ ಈಗ ಗೊತ್ತಾಗ್ತಿದೆ. ಒಂದು ಹೆಣ್ಣಾಗಿ ಮದುವೆ ಆದವರ ಬಾಳಲ್ಲಿ ಆಕೆ ಬರಬಾರದಿತ್ತು ಎಂದಿದ್ದಾರೆ.

ADVERTISEMENT

ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ನಿರ್ಮಾಪಕ ಹಾಗೂ ಪಾರ್ವತಮ್ಮ ರಾಜ್‌ಕುಮಾರ್ ಸಹೋದರ ಚಿನ್ನೇಗೌಡ ಮಾತನಾಡಿ, ಮೀನಾ ತೂಗದೀಪ್ ಶ್ರೀನಿವಾಸ್‌‌ ಬಹಳ ಕಷ್ಟ ಪಟ್ಟು ಮಕ್ಕಳನ್ನ ಸಾಕಿ ಬೆಳೆಸಿದ್ರು. ದರ್ಶನ್‌ಗೆ ನಟನೆ ಕಲಿಯಲು ಮದ್ರಾಸ್‌ಗೆ ನಾನು ಕಳುಹಿಸಿದ್ದೆ.. ಪಾರ್ವತಮ್ಮ ರಾಜ್‍ಕುಮಾರ್ ಕೂಡ ದರ್ಶನ್‌ಗೆ ಸಪೋರ್ಟ್ ಮಾಡಿದ್ದರು. ದರ್ಶನ್‌ಗೆ ಭಗವಂತ ಎಲ್ಲವನ್ನೂ ಕೊಟ್ಟಿದ್ದ. ಆದ್ರೆ ಈಗ ಹೀಗಾಗಿದೆ ಎಂದು ಬೇಸರ ಹೊರ ಹಾಕಿದ್ದಾರೆ.

ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನದ ಬಗ್ಗೆ ನಟ ಅನಿರುದ್ಧ್‌ ಮಾತನಾಡಿ, ದರ್ಶನ್ ಬಂಧನ ಚಿತ್ರರಂಗಕ್ಕೆ ಕಪ್ಪು ಚುಕ್ಕೆ ಅನ್ನೋದು ಸಮಂಜಸ ಅಲ್ಲ.. ದರ್ಶನ್ ಒಳ್ಳೆಯ ನಟರು, ಅವರ ಜೀವನದಲ್ಲಿ ಈ ಘಟನೆ ಆಗಬಾರದಿತ್ತು. ಪ್ರಕರಣದ ತನಿಖೆ ನಡೆಯುತ್ತಿದೆ. ಎಲ್ಲರಿಗೂ ಇದೊಂದು ಎಚ್ಚರಿಕೆ ಗಂಟೆ ಎಂದು ಹೇಳಿದ್ದಾರೆ. ಎಲ್ಲದಕ್ಕೂ ಕಾನೂನು ಇದೆ, ಕಾನೂನಿಗೆ ನಾವು ಬದ್ಧವಾಗಿರಬೇಕು.. ಸೈಬರ್ ಪೊಲೀಸರಿಗೆ ದೂರು ಕೊಟ್ಟಿದ್ದರೆ ಸಾಕಾಗಿತ್ತು ಎಂದಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್‌ ವಿಚಾರವಾಗಿ ಮಾತನಾಡಿದ್ದ ನಟ ಪ್ರಥಮ್‌ಗೆ ದರ್ಶನ್‌ ಅಭಿಮಾನಿಗಳು ಜೀವ ಬೆದರಿಕೆ ಹಾಕ್ತಿದ್ದಾರಂತೆ.. ಈ ವಿಚಾರವಾಗಿ ನಟ ಪ್ರಥಮ್‌ ಜ್ಞಾನ ಭಾರತಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ನಟ ಪ್ರಥಮ್‌ ನಮ್ಮ ಸಿನಿಮಾ ತಂಡದ ನಂಬರ್‌ಗೆ ಅನೇಕರು ಬೆದರಿಕೆ ಕರೆ ಮಾಡುತ್ತಿದ್ದಾರೆ. ಅಂಧಾಭಿಮಾನಿಗಳಿಗೆ ಮಾತ್ರ ಹೇಳುತ್ತಿದ್ದೇನೆ, ಅಪ್ಪ ಅಮ್ಮನನ್ನು ನೋಡಿಕೊಳ್ಳಿ, ಬದುಕು ಚೆನ್ನಾಗಿ ಕಟ್ಟಿಕೊಳ್ಳಿ. ನನಗೆ ವಾರ್ನ್ ಮಾಡೋ ಸಮಯವನ್ನು ಅಮ್ಮ ಅಪ್ಪನಿಗೆ ಮೀಸಲಿಡಿ ಎಂದಿದ್ದಾರೆ.

Tags: @darshanBJPCongress Partyಬಿಜೆಪಿ
Previous Post

ತಾಲೂಕು ಪಂಚಾಯತ್ ಸಭಾಂಗಣದಲ್ಲೇ ವಿದ್ಯುತ್ ಸಮಸ್ಯೆ.. ಅಧಿಕಾರಿಗಳ ಪರದಾಟ

Next Post

ಉತ್ತರ ಪ್ರದೇಶದಲ್ಲಿ ಸ್ಥಾಪನೆಯಾಗಲಿದೆ ವಿಶ್ವದ ಮೊದಲ ಏಷ್ಯನ್‌ ರಾಜ ರಣಹದ್ದು ಸಂತಾನೋತ್ಪತ್ತಿ ಕೇಂದ್ರಮಹಾರಾಜ್‌ಗಂಜ್ ;ಉತ್ತರ ಪ್ರದೇಶವು ಶೀಘ್ರದಲ್ಲೇ ಮಹಾರಾಜ್‌ಗಂಜ್‌ನಲ್ಲಿ ಏಷ್ಯಾದ ರಾಜ ರಣಹದ್ದುಗಳಿಗಾಗಿ ವಿಶ್ವದ ಮೊದಲ ಸಂರಕ್ಷಣಾ ಮತ್ತು ಸಂತಾನೋತ್ಪತ್ತಿ ಕೇಂದ್ರವನ್ನು ಹೊಂದಲಿದೆ ಎಂದು ಉನ್ನತ ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಈ ಸೌಲಭ್ಯವು ಹದ್ದುಗಳ ಸಂಖ್ಯೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ, ಇದನ್ನು 2007 ರಿಂದ ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ಸ್ ರೆಡ್ ಲಿಸ್ಟ್‌ನಲ್ಲಿ ತೀವ್ರವಾಗಿ ಅಳಿವಿನಂಚಿನಲ್ಲಿರುವ ಪಟ್ಟಿ ಮಾಡಲಾಗಿದೆ.

Related Posts

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ: ಶಾರಿಕ್ ಪ್ರಕರಣದ ಸಂಪೂರ್ಣ ಚಿತ್ರಣ ಇಲ್ಲಿದೆ
Top Story

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ: ಶಾರಿಕ್ ಪ್ರಕರಣದ ಸಂಪೂರ್ಣ ಚಿತ್ರಣ ಇಲ್ಲಿದೆ

by ಪ್ರತಿಧ್ವನಿ
April 27, 2026
0

ಮಂಗಳೂರು ನಗರದಲ್ಲಿ 2022ರಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣವು ರಾಜ್ಯದ ಭದ್ರತಾ ವ್ಯವಸ್ಥೆಯನ್ನು ಎಚ್ಚರಿಸಿದ ಪ್ರಮುಖ ಉಗ್ರ ಕೃತ್ಯಗಳಲ್ಲಿ ಒಂದಾಗಿದೆ. ಈ ಪ್ರಕರಣದ ಮುಖ್ಯ ಆರೋಪಿಯಾಗಿದ್ದ...

Read moreDetails
AI ಚಾಟ್‌ಬಾಟ್ ‘Grok’ ಆಯ್ಕೆ ಮಾಡಿದ ಪ್ರಧಾನಿ ಯಾರು?

AI ಚಾಟ್‌ಬಾಟ್ ‘Grok’ ಆಯ್ಕೆ ಮಾಡಿದ ಪ್ರಧಾನಿ ಯಾರು?

April 27, 2026
ಟ್ರಂಪ್ ಮೇಲೆ ಹತ್ಯೆ ಯತ್ನ: ಆರೋಪಿ ಬಂಧನ : ಯಾರಾತ ?  ಕೋಲೆ ಯತ್ನಕ್ಕೆ ಏನು ಕಾರಣ ?

ಟ್ರಂಪ್ ಮೇಲೆ ಹತ್ಯೆ ಯತ್ನ: ಆರೋಪಿ ಬಂಧನ : ಯಾರಾತ ?  ಕೋಲೆ ಯತ್ನಕ್ಕೆ ಏನು ಕಾರಣ ?

April 26, 2026
150 ವರ್ಷ ಆಯುಷ್ಯದ ಕನಸು: ಪುಟಿನ್ ಅಮರತ್ವ ಯೋಜನೆಗೆ ರಷ್ಯಾದ ‘RAGE’ ಜೀನ್ ಚಿಕಿತ್ಸೆ ಸಂಶೋಧನೆ!

150 ವರ್ಷ ಆಯುಷ್ಯದ ಕನಸು: ಪುಟಿನ್ ಅಮರತ್ವ ಯೋಜನೆಗೆ ರಷ್ಯಾದ ‘RAGE’ ಜೀನ್ ಚಿಕಿತ್ಸೆ ಸಂಶೋಧನೆ!

April 26, 2026
ಸ್ಟಾರ್ ನಟಿ ಸೌಂದರ್ಯ ನೆನಪು: ವದಂತಿಗಳಿಗೆ ತೆರೆ ಎಳೆದ ಜಗಪತಿ ಬಾಬು – ಭಾವುಕ ಮಾತುಗಳು ವೈರಲ್

ಸ್ಟಾರ್ ನಟಿ ಸೌಂದರ್ಯ ನೆನಪು: ವದಂತಿಗಳಿಗೆ ತೆರೆ ಎಳೆದ ಜಗಪತಿ ಬಾಬು – ಭಾವುಕ ಮಾತುಗಳು ವೈರಲ್

April 26, 2026
Next Post
ಉತ್ತರ ಪ್ರದೇಶದಲ್ಲಿ ಸ್ಥಾಪನೆಯಾಗಲಿದೆ ವಿಶ್ವದ ಮೊದಲ ಏಷ್ಯನ್‌ ರಾಜ ರಣಹದ್ದು ಸಂತಾನೋತ್ಪತ್ತಿ ಕೇಂದ್ರಮಹಾರಾಜ್‌ಗಂಜ್ ;ಉತ್ತರ ಪ್ರದೇಶವು ಶೀಘ್ರದಲ್ಲೇ ಮಹಾರಾಜ್‌ಗಂಜ್‌ನಲ್ಲಿ ಏಷ್ಯಾದ ರಾಜ ರಣಹದ್ದುಗಳಿಗಾಗಿ ವಿಶ್ವದ ಮೊದಲ ಸಂರಕ್ಷಣಾ ಮತ್ತು ಸಂತಾನೋತ್ಪತ್ತಿ ಕೇಂದ್ರವನ್ನು ಹೊಂದಲಿದೆ ಎಂದು ಉನ್ನತ ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಈ ಸೌಲಭ್ಯವು ಹದ್ದುಗಳ ಸಂಖ್ಯೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ, ಇದನ್ನು 2007 ರಿಂದ ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ಸ್ ರೆಡ್ ಲಿಸ್ಟ್‌ನಲ್ಲಿ ತೀವ್ರವಾಗಿ ಅಳಿವಿನಂಚಿನಲ್ಲಿರುವ ಪಟ್ಟಿ ಮಾಡಲಾಗಿದೆ.

ಉತ್ತರ ಪ್ರದೇಶದಲ್ಲಿ ಸ್ಥಾಪನೆಯಾಗಲಿದೆ ವಿಶ್ವದ ಮೊದಲ ಏಷ್ಯನ್‌ ರಾಜ ರಣಹದ್ದು ಸಂತಾನೋತ್ಪತ್ತಿ ಕೇಂದ್ರಮಹಾರಾಜ್‌ಗಂಜ್ ;ಉತ್ತರ ಪ್ರದೇಶವು ಶೀಘ್ರದಲ್ಲೇ ಮಹಾರಾಜ್‌ಗಂಜ್‌ನಲ್ಲಿ ಏಷ್ಯಾದ ರಾಜ ರಣಹದ್ದುಗಳಿಗಾಗಿ ವಿಶ್ವದ ಮೊದಲ ಸಂರಕ್ಷಣಾ ಮತ್ತು ಸಂತಾನೋತ್ಪತ್ತಿ ಕೇಂದ್ರವನ್ನು ಹೊಂದಲಿದೆ ಎಂದು ಉನ್ನತ ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಈ ಸೌಲಭ್ಯವು ಹದ್ದುಗಳ ಸಂಖ್ಯೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ, ಇದನ್ನು 2007 ರಿಂದ ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ಸ್ ರೆಡ್ ಲಿಸ್ಟ್‌ನಲ್ಲಿ ತೀವ್ರವಾಗಿ ಅಳಿವಿನಂಚಿನಲ್ಲಿರುವ ಪಟ್ಟಿ ಮಾಡಲಾಗಿದೆ.

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!