ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಹಲವು ಬಿರುದುಗಳು ಇವೆ. ದಾಸ, ಚಾಲೆಂಜಿಂಗ್ ಸ್ಟಾರ್, ಡಿ ಬಾಸ್, ಹೀಗೆ ವಿವಿಧ ಹೆಸರುಗಳಿಂದ ಅವರು ಫೇಮಸ್ ಆಗಿದ್ದಾರೆ. ಮೊದಲು ಅವರನ್ನು ಬಹುತೇಕರು ಚಾಲೆಂಜಿಂಗ್ ಸ್ಟಾರ್ ಎಂದೇ ಕರೆಯುತ್ತಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಡಿ ಬಾಸ್ ಎಂದು ಕರೆಯಲಾಗುತ್ತಿದೆ. ಇದರಿಂದ ಚಾಲೆಂಜಿಂಗ್ ಸ್ಟಾರ್ ಬಿರುದು ಅಷ್ಟಾಗಿ ಬಳಕೆಯಲ್ಲಿ ಇಲ್ಲ.

ಇತ್ತೀಚಿನ ದಿನಗಳಲ್ಲಿ ದರ್ಶನ್ ಅವರ ಬಿರುದು ಬಳಕೆಯಲ್ಲಿ ಬದಲಾವಣೆ ಕಂಡುಬಂದಿದೆ. ಮೊದಲು ‘ಚಾಲೆಂಜಿಂಗ್ ಸ್ಟಾರ್’ ಎಂದು ಪ್ರಖ್ಯಾತರಾಗಿದ್ದ ಅವರನ್ನು ಈಗ ‘ಡಿ ಬಾಸ್’ ಎಂದು ಹೆಚ್ಚಾಗಿ ಕರೆಯಲಾಗುತ್ತಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಅವರ ಬಂಧನದಿಂದಾಗಿ ಅಭಿಮಾನಿಗಳು ‘ಇನ್ ಸರ್ಚ್ ಆಫ್ ಡಿ ಬಾಸ್, ವಿ ಲಾಸ್ಟ್ ಚಾಲೆಂಜಿಂಗ್ ಸ್ಟಾರ್’ ಎಂಬ ಟ್ರೆಂಡ್ ಅನ್ನು ಪ್ರಾರಂಭಿಸಿದ್ದಾರೆ.

ಇಲ್ಲಿ ಅಭಿಮಾನಿಗಳು ಚಾಲೆಂಜಿಂಗ್ ಸ್ಟಾರ್ ಹಾಗೂ ಡಿ ಬಾಸ್ನ ಬಿರುದನ್ನು ದರ್ಶನ್ ಸಿನಿಮಾ ಕಾಲಘಟ್ಟಕ್ಕೆ ತಕ್ಕಂತೆ ಬಳಸಿದ್ದಾರೆ. ಈ ಮೊದಲು ದರ್ಶನ್ ಅವರು ಆ್ಯಕ್ಷನ್ ಜೊತೆ ರೊಮ್ಯಾಂಟಿಕ್ ಹಿರೋ ಆಗಿ ಹೆಚ್ಚು ಇಷ್ಟ ಆಗುತ್ತಿದ್ದರು. ಆ ರೀತಿಯ ಹಲವು ಸಿನಿಮಾಗಳನ್ನು ಅವರು ನೀಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರು ಮಾಸ್ ಸಿನಿಮಾಗಳನ್ನು ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಇನ್ನು, ದರ್ಶನ್ ಅವರು ಇತ್ತೀಚೆಗೆ ಬೇಡದ ಕಾರಣಗಳಿಂದಲೇ ಹೆಚ್ಚು ಸುದ್ದಿ ಆಗುತ್ತಿದ್ದಾರೆ. ಈ ಕಾರಣಕ್ಕೆ ಅನೇಕರು, ‘ಇನ್ ಸರ್ಚ್ ಆಫ್ ಡಿ ಬಾಸ್, ವಿ ಲಾಸ್ಟ್ ಚಾಲೆಂಜಿಂಗ್ ಸ್ಟಾರ್’ ಎಂದು ಹಾಕಿದ್ದಾರೆ. ದರ್ಶನ್ ಹಳೆಯ ಚಾರ್ಮ್ ಈಗ ಇಲ್ಲ ಎಂದು ಅಭಿಮಾನಿಗಳು ಬೇಸರ ಹೊರಹಾಕಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಅರೆಸ್ಟ್ ಆಗಿದ್ದಾರೆ. ಅವರು ಈ ಮೊದಲು ಜಾಮೀನು ಪಡೆದು ಹೊರಗಿದ್ದರು. ಈಗ ಜಾಮೀನು ರದ್ದಾಗಿರುವುದರಿಂದ ಮತ್ತೆ ಜೈಲು ಸೇರಿದ್ದಾರೆ. ಇದು ಅಭಿಮಾನಿಗಳಿಗೆ ಸಾಕಷ್ಟು ಬೇಸರ ಮೂಡಿಸಿದೆ.
.