ರೇಣುಕಾಸ್ವಾಮಿ ಕೊಲೆ ಪ್ರಕರಣದ (Renuka swamy murder case) ಆರೋಪಿಗಳಾದ ದರ್ಶನ್ (Darshan) ಸೇರಿ ಇನ್ನುಳಿದವರಿಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಕೋರ್ಟ್ ಆದೇಶಿಸಿದೆ. ಇಂದು ಆರೋಪಿಗಳ ನ್ಯಾಯಾಂಗ ಬಂಧನ ಅಂತ್ಯವಾದ ಹಿನ್ನೆಲೆ ವಿಡಿಯೋ ಕಾನ್ಸರೆನ್ಸ್ (Video conference) ಮೂಲಕ ಕೋರ್ಟ್‌ಗೆ ಹಾಜರು ಪಡಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಸೆಪ್ಟೆಂಬರ್ 12ರವರೆಗೆ ಮೂರು ದಿನಗಳ ಕಾಲ ನ್ಯಾಯಾಂಗ ಬಂಧನ ವಿಸ್ತರಿಸಿದೆ.

ಇನ್ನು, ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ (Charge sheet) ಸಲ್ಲಿಕೆ ಮಾಡಲಾಗಿದೆ.ತಮಗೂ ಚಾರ್ಜ್‌ಶೀಟ್ ನೀಡುವಂತೆ ಆರೋಪಿಗಳ ಪರ ವಕೀಲರು ಮನವಿ ಮಾಡಿದ್ದಾರೆ. ಈ ವೇಳೆ ಆರೋಪಿಗಳ ಬಳಿ ಅವರ ಪರ ವಕೀಲರಿಗೆ ಕೋಡೋಕೆ ಹೇಳೀನಿ ಬಿಡಿ ಎಂದು ಜಡ್ಜ್ (Judge) ಹೇಳ್ತಿದ್ದಂತೆ, ದರ್ಶನ್ ನನ್ನ ವಕೀಲರು ಸಿ.ವಿ ನಾಗೇಶ್ (Cv nagesh) ಎಂದು ಹೇಳಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ದರ್ಶನ್ ತಪ್ಪೋಪ್ಪಿ ಕೊಂಡಿದ್ದಾರೆಂದು ಹೇಳಲಾಗ್ತಿದೆ. ಮೊದಲು ನನಗೆ ಏನೂ ಗೊತ್ತಿಲ್ಲ ಅಂತ ಹೇಳಿದ್ದ ದರ್ಶನ್ ನಂತರ ಕೊಲೆ ಪ್ರಕರಣದ ಬಗ್ಗೆ ತಪ್ರೊಪ್ಪಿಗೆಯ ಮಾಹಿತಿಯೂ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ.





