ಫೆಬ್ರವರಿ-16 ರಂದು ದರ್ಶನ್ 49 ನೇ ಜನ್ಮ ದಿನ ಆಚರಿಸುತ್ತಿದ್ದಾರೆ.ಕಳೆದ ವರ್ಷದ ಜನ್ಮ ದಿನಕ್ಕೆ ಡೆವಿಲ್ ಚಿತ್ರದ (Devil Movie) ಟೀಸರ್ ರಿಲೀಸ್ ಆಗಿತ್ತು. ಆದರೆ ಇಂದು ಡಿಬಾಸ್ ಜೈಲಿನಲ್ಲಿದ್ದಾರೆ. ಆದರೂ ದರ್ಶನ್ ಫ್ಯಾನ್ಸ್ ಭರ್ಜರಿ ಪ್ಲಾನ್ ಮಾಡಿಕೊಂಡಿದ್ದಾರೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡ ಪತಿಗೆ ವಿಶ್ ಮಾಡಿದ್ದಾರೆ. ಅದರ ಕೆಲವು ವಿವರ ಇಲ್ಲಿದೆ ನೋಡಿ.

ದರ್ಶನ್ ಅವರ ಹುಟ್ಟುಹಬ್ಬದ ಕಾಮನ್ ಡಿಪಿಯನ್ನ ಬಿಡುಗಡೆ ಮಾಡಿದ್ದಾರೆ. ದರ್ಶನ್ ಹ್ಯಾನ್ಡ್ ಶೇಕ್ ಮಾಡಿದ್ದು, ಅವರಿಗೆ ನೂರಾರು ಕೈಗಳು ಹ್ಯಾನ್ಡ್ ಶೇಕ್ ಮಾಡಿವೆ.ʼತೂಗುದೀಪ ಡೈನಾಸ್ಟಿʼ ಎಂದು ಕಾಮನ್ ಡಿಪಿಯಲ್ಲಿ ಬರೆಯಲಾಗಿದೆ.ದರ್ಶನ್ ಹುಟ್ಟುಹಬ್ಬಕ್ಕೆ ರಕ್ತದಾನ ಶಿಬಿರ, ಅನ್ನದಾನ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳನ್ನು ಅಭಿಮಾನಿಗಳು ಮಾಡಲಿದ್ದಾರೆ.

ದರ್ಶನ್ ಪತ್ನಿ ವಿಜಯಲಕ್ಷ್ಮೀ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ಪ್ರತಿ ದಿನವನ್ನೂ ಸಂಭ್ರಮಿಸುವ ವ್ಯಕ್ತಿಗೆ ಜನ್ಮದಿನದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.ದರ್ಶನ್ ಕೇಕ್ ಎದುರು ನಿಂತಿರುವ ಹಳೆಯ ಫೋಟೋವನ್ನು ಶೇರ್ ಮಾಡಿದ್ದಾರೆ.ಆ ಫೋಟೋದಲ್ಲಿ ದರ್ಶನ್‌ಗೆ ಇಷ್ಟವಾದ ಆನೆ ಆಕೃತಿಯ ಕೇಕ್ ಇರುವುದನ್ನು ಗಮನಿಸಬಹುದು.

ಜೆ. ಪಿ. ನಗರದ ಪುಟ್ಟೇನಹಳ್ಳಿ ಸರ್ಕಲ್ ಬಳಿ ನಂಜುಂಡೇಶ್ವರ ದೇವಸ್ಥಾನದಲ್ಲಿ ದರ್ಶನ್‌ಗಾಗಿ ಅವರ ಅಭಿಮಾನಿಯಲ್ಲಿ ಒಬ್ಬರಾದ ಸುಪ್ರೀತ್ ಗಾಂಧಾರ ವಿಶೇಷವಾದಂತಹ ಪೂಜೆ, ಪುನಸ್ಕಾರ ಮಾಡಿಸಿದ್ದಾರೆ. ದರ್ಶನ್ ಭಾವಚಿತ್ರ ಹಿಡಿದು ಹೋಮ, ಹವನ ಮಾಡಿಸಿದ್ದಾರೆ. ಅವರು ಬೇಗ ರಿಲೀಸ್ ಆಗಲಿ ಎಂದು ಸತತ ಮೂರು ದಿನಗಳ ಕಾಲ ನಿರಂತರ ಹೋಮ ಮಾಡಿಸಿದ್ದಾರೆ.






